Canara Bank: ಹೊಸ ಬಡ್ಡಿ ದರ ಜಾರಿಗೆ ತಂದು ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಕೆನರಾ ಬ್ಯಾಂಕ್!

Canara Bank: ದೀರ್ಘಾವಧಿಯ ಸ್ಥಿರ ಠೇವಣಿ (Fixed Deposit) ಯೋಜನೆಗಳು ನಿಮಗೆ ಸಾಕಷ್ಟು ದೊಡ್ಡ ಪ್ರಮಾಣದ ಆದಾಯವನ್ನು ನೀಡಬಹುದು. ಅದರಲ್ಲೂ ನಿಶ್ಚಿತ ಠೇವಣಿಯ ವಿಷಯದಲ್ಲಿ ನಾವು ಕೆಲವು ಬ್ಯಾಂಕುಗಳನ್ನು ಮಾತ್ರ ನಂಬಬೇಕಾಗುತ್ತದೆ. ಇವರ ನಡುವೆ ಕೆನರಾ ಬ್ಯಾಂಕ್ (Canara Bank) ಕೂಡ ಒಂದಾಗಿದ್ದು, ಇದೀಗ ಕೆನರಾ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಬಡ್ಡಿ ದರವನ್ನು ಹೆಚ್ಚಿಸಿರುವುದು ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿಯಾಗಿದೆ.

ಈ ಹೊಸ ಬಡ್ಡಿ ದರವನ್ನು ಆಗಸ್ಟ್ 12 ರಿಂದ ಜಾರಿಗೆ ತರಲಾಗುವುದು ಎಂದು ಕೆನರಾ ಬ್ಯಾಂಕ್ ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಕೆನರಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಅಡಿಯಲ್ಲಿ ಎರಡು ಕೋಟಿಗಿಂತ ಕಡಿಮೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಫಿಕ್ಸೆಡ್ ಡೆಪಾಸಿಟ್ ಯೋಜನೆಯಡಿ, ಕೆನರಾ ಬ್ಯಾಂಕ್ ಏಳು ದಿನಗಳಿಂದ 10 ವರ್ಷಗಳವರೆಗೆ ಅಧಿಕಾರಾವಧಿಯನ್ನು ನೀಡುತ್ತದೆ.

Canara Bank

ಇದು ಸಾಮಾನ್ಯ ನಾಗರಿಕರಿಗೆ ಶೇಕಡಾ 4 ರಿಂದ 7.25 ರವರೆಗೆ ಬಡ್ಡಿದರಗಳನ್ನು ನಿಗದಿಪಡಿಸಿದೆ. ಇಲ್ಲಿ ಹಿರಿಯ ನಾಗರಿಕರಿಗೆ ಶೇ.7.75 ಬಡ್ಡಿ ದರ ನಿಗದಿಪಡಿಸಲಾಗಿದೆ. ಕೆನರಾ ಬ್ಯಾಂಕ್ 7 ದಿನಗಳಿಂದ 45 ದಿನಗಳವರೆಗೆ FD ಮೇಲೆ 4% ಬಡ್ಡಿಯನ್ನು ಮತ್ತು 46 ದಿನಗಳಿಂದ 90 ದಿನಗಳವರೆಗೆ FD ಮೇಲೆ 5.5% ಬಡ್ಡಿಯನ್ನು ನೀಡಿದೆ. 91 ರಿಂದ 179 ದಿನಗಳ ಹೂಡಿಕೆಗೆ ಶೇ.6.29 ಬಡ್ಡಿ ದರ ನೀಡಲು ನಿರ್ಧರಿಸಿದೆ. 270 ದಿನಗಳಿಂದ ಒಂದು ವರ್ಷದೊಳಗೆ ಪಕ್ವವಾಗುವ ಹೂಡಿಕೆಗಳ ಮೇಲೆ 6.50% ಮತ್ತು 444 ದಿನಗಳವರೆಗಿನ ಹೂಡಿಕೆಗಳ ಮೇಲೆ 7.25% ಬಡ್ಡಿದರವನ್ನು ಪಡೆಯಬಹುದು.

ಕೆನರಾ ಬ್ಯಾಂಕ್ ಮೂರು ವರ್ಷಕ್ಕಿಂತ ಹೆಚ್ಚು ಮತ್ತು ಐದು ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿ ಯೋಜನೆಗಳಿಗೆ ಶೇ.6.80 ಬಡ್ಡಿ ದರವನ್ನು ನೀಡುತ್ತಿದೆ. ಕೆನರಾ ಬ್ಯಾಂಕ್ ಐದು ಮತ್ತು ಐದು ವರ್ಷಗಳಿಗಿಂತ ಹೆಚ್ಚಿನ ಹೂಡಿಕೆಯ ಮೇಲೆ ಶೇಕಡಾ 6.70 ರ ಬಡ್ಡಿದರವನ್ನು ನೀಡುತ್ತದೆ. ನೀವು ಎರಡು ಕೋಟಿಗಿಂತ ಕಡಿಮೆ ಅವಧಿಯ ಮೊದಲು ಹೂಡಿಕೆಯನ್ನು ಹಿಂಪಡೆಯಲು ಪ್ರಯತ್ನಿಸಿದರೆ, ನೀವು ಒಂದು ಶೇಕಡಾ ದಂಡವನ್ನು ಪಾವತಿಸಬೇಕಾಗುತ್ತದೆ. 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 0.60% ಹೆಚ್ಚಿನ ಬಡ್ಡಿ ದರವನ್ನು ಸಹ ನೀಡಲಾಗುತ್ತದೆ.

Leave a Comment