ಮೋದಿ ಸರ್ಕಾರ ದೇಶದ ಜನತೆಗೆ ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ನರೇಂದ್ರ ಮೋದಿ ಅವರು ಪರಿಚಯಿಸಿದ ಯೋಜನೆಗಳಲ್ಲಿ ಒಂದಾಗಿದೆ. 2014ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಜನ್ ಧನ್ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು ತದನಂತರ ಇದು ಆಗಸ್ಟ್ ತಿಂಗಳಿನಲ್ಲಿ ಜಾರಿಯಾಯಿತು.

 

 

ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಅಂಚೆ ಕಚೇರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇರುವ ಕಥೆಗಳನ್ನು ತೆರೆಯಬಹುದು ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳುವ ಅಗತ್ಯತೆ ಇರುವುದಿಲ್ಲ ಜನ್ ಧನ್ ಯೋಜನೆಯ ಖಾತೆಗಳನ್ನು ಸರ್ಕಾರದ ಯೋಜನೆಗಳ ಅಡಿಯಲ್ಲಿ ಲಿಂಕ್ ಮಾಡಲಾಗುತ್ತಿದೆ

ಅಷ್ಟೇ ಅಲ್ಲದೆ ಫಲಾನುಭವಿಗಳ ಖಾತೆಗೆ ನೆರವಾಗಿ ಹಣವನ್ನು ಜಮೆ ಮಾಡಲಾಗುತ್ತಿದೆ. ಹತ್ತು ಸಾವಿರದವರೆಗೆ ಹಿಂಪಡೆಯಬಹುದಾಗಿದೆ. ಅಲ್ಲದೆ ಜನ್ ಧನ್ ಯೋಜನೆಗಾಗಿ ಮಾಡಿಸಿರುವ ಶೂನ್ಯ ಖಾತೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ನೀವು 10,000 ವರೆಗೂ ಹಣವನ್ನು ಹಿಂಪಡೆಯಬಹುದಾಗಿದೆ.

 

 

ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ರೂಪೆ ಕಾರ್ಡ್ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ. ಈ ಡೆಬಿಟ್ ಕಾರ್ಡ್ ಮೂಲಕ ನೀವು ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಖರೀದಿಯನ್ನು ಸಹ ನಿಭಾಯಿಸಬಹುದು ಈ ಯೋಜನೆಯ ಅಡಿಯಲ್ಲಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಜನ್ ಧನ್ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ.

ಈ ಯೋಜನೆಯ ಅಡಿಯಲ್ಲಿ ಎರಡು ಲಕ್ಷದ ವರೆಗೂ ಅಪಘಾತ ವಿಮೆಯನ್ನು ಪಡೆದುಕೊಳ್ಳಬಹುದು ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆದಾಗ 2 ಲಕ್ಷ ಅಪಘಾತ ವಿಮೆ, ರೂ. 30,000 ಜೀವ ವಿಮೆ ಮತ್ತು ಠೇವಣಿ ಮೊತ್ತದ ಬಡ್ಡಿ ಸಿಗುತ್ತದೆ ಇದರ ಮೇಲೆ ನೀವು 10,000 ರೂಪಾಯಿ ಓವರ್ ಡ್ರಾಫ್ಟ್ ಸೌಲಭ್ಯವನ್ನು ಕೂಡ ಪಡೆಯಬಹುದು ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದಾಗಿದೆ.

 

 

ಜನ್ ಧನ್ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಯಾವುದಾದರೂ ಗುರುತಿನ ಚೀಟಿ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿಲ್ಲದಿದ್ದರೆ ಸಣ್ಣ ಖಾತೆಯನ್ನು ಸಹ ತೆರೆಯಬಹುದಾಗಿದೆ. ಇದರಲ್ಲಿ ನೀವು ಬ್ಯಾಂಕ್ ಅಧಿಕಾರಿಯ ಮುಂದೆ ಫಾರಂ ಅನ್ನು ಭರ್ತಿ ಮಾಡಿ ಸೈನ್ ಮಾಡಿ ಕೊಡಬೇಕು.

 

 

ಜನ್ ಧನ್ ಖಾತೆ ತೆರೆಯಲು ನೀವು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಖಾತೆಯನ್ನು ತೆರೆಯಬಹುದು ಓವರ್ ಡ್ರಾಫ್ಟ್ ಸೌಲಭ್ಯ ಈ ಹಿಂದೆ 5,000 ಗಳಾಗಿತ್ತು ಆದರೆ ಕೇಂದ್ರ ಸರ್ಕಾರ 10000ಗಳನ್ನು ನೀಡುತ್ತಿದೆ. ಭಾರತದಲ್ಲಿ ವಾಸಿಸುತ್ತಿರುವ ಯಾವುದೇ ನಾಗರೀಕರು ಈ ಖಾತೆಯನ್ನು ತೆರೆಯಬಹುದಾಗಿದೆ. ಈ ಖಾತೆಯಲ್ಲಿ ಓವರ್ ಡ್ರಾಫ್ಟ್ ಸೌಲಭ್ಯಕ್ಕಾಗಿ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳಾಗಿರಬೇಕು

Leave a comment

Your email address will not be published. Required fields are marked *