ರೈತ ಹಸುವನ್ನು ಕೋಲು ತೆಗೆದುಕೊಂಡು ಹೊಡೆಯಲು ಹೋದಾಗ: ಜೀವಂತ ಬಸವ ಕಲ್ಲಾಗಿರುವ ಜಾಗ ಬೆಂಗಳೂರಿನ ಬಸವನಗುಡಿ

ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಿಂದ ಗಾಂಧಿಬಜಾರ್ ಗೆ ಕೂಡ ಹೋಗಬಹುದು ಹಾಗೇ ಇಲ್ಲಿಂದ ನ್ಯಾಷನಲ್ ಕಾಲೇಜು ಕೂಡ ಹೋಗಬಹುದು ಚಾಮರಾಜಪೇಟೆಗೂ ಕೂಡ ಹೋಗಬಹುದು ಆದರೆ ಈ ಬಸವನಗುಡಿಯ ಮುಖ್ಯರಸ್ತೆಯಲ್ಲಿ ಒಂದು ಮುಖ್ಯವಾದ ದೇವಸ್ಥಾನ ಇರುವ ಕಾರಣ ಇದನ್ನು ಬುಲ್ ಟೆಂಪಲ್ ರಸ್ತೆ ಎಂದು ಕರೆಯುತ್ತಾರೆ. ಇದೇ ರಸ್ತೆಯಲ್ಲಿ ದೊಡ್ಡ ಗಣೇಶನ ದೇವಾಲಯವಿದ್ದು ದೊಡ್ಡ ನಂದಿಯ ದೇವಾಲಯವು ಕೂಡ ಇದೆ. ದೊಡ್ಡ ಗಣಪತಿಯ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

 

 

ಇಲ್ಲಿಯ ಗಣೇಶ ಮೂರ್ತಿ ಕೂಡ ತುಂಬಾ ದೊಡ್ಡದಾಗಿಯೇ ಇದೆ. ಈ ದೇವಸ್ಥಾನದ ಇತಿಹಾಸವನ್ನು ನೋಡಿದರೆ ಈ ದೇವಸ್ಥಾನವನ್ನು ಕೆಂಪೇಗೌಡರ ಕಾಲದಲ್ಲಿ ಕಟ್ಟಿರುವ ದೇವಸ್ಥಾನ ಎಂದೇ ಹೇಳಲಾಗುತ್ತಿದೆ ಆದರೆ ಈ ದೇವಸ್ಥಾನದ ಶಿಲೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಸಾವಿರಾರು ವರ್ಷ ಹಿಂದಿನ ಶಿಲೆಯಾಗಿದೆ ಎಂದು ಇತಿಹಾಸಕಾರರು ಕೂಡ ಹೇಳುತ್ತಾರೆ. ಈ ದೇವಸ್ಥಾನದಲ್ಲಿರುವ ಗಣೇಶನ ವಿಗ್ರಹಕ್ಕೆ ದಿನದ 24 ಗಂಟೆಗಳು ಕೂಡ ಬೆಣ್ಣೆ ಹಾಗೂ ತುಪ್ಪದ ಅಭಿಷೇಕ ನಡೆಯುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಅಭಿಷೇಕಗಳಿಂದಲೇ ಆ ಗಣಪತಿಯ ಮೂರ್ತಿಯಲ್ಲಿ ಅನೇಕ ಲೋಪದೋಷಗಳಾಗಿ ವಿಗ್ರಹದಲ್ಲಿ ಕ್ರ್ಯಾಕ್ ಗಳು ಬಿರುಕುಗಳು ಕೂಡ ಕಂಡು ಬಂದಿದೆ.

 

 

ಬೆಂಗಳೂರು ನಗರ ಎಷ್ಟು ದೊಡ್ಡದಾಗಿ ಬೆಳೆದಿದ್ದರೂ ಕೂಡ ಈ ನಗರದಲ್ಲಿ ದೇವಸ್ಥಾನಗಳಿಗೆ ಏನು ಬರವಿಲ್ಲ ಹಾದಿ ಬೀದಿಗಳಲ್ಲೂ ಕೂಡ ಹಲವಾರು ದೇವಸ್ಥಾನಗಳು ಸಿಗುತ್ತವೆ ಆದರೆ ಈ ದೊಡ್ಡ ಗಣಪನ ದೇವಸ್ಥಾನ ವಿಶೇಷಗಳಲ್ಲಿ ವಿಶೇಷವಾಗಿದೆ ಈ ಬೃಹತ್ ಬೆಂಗಳೂರಿನಲ್ಲಿ ಈ ಗಣಪತಿ ದೇವಸ್ಥಾನವು ಒಂದು ಪುರಾತನ ದೇವಾಲಯವಾಗಿದ್ದು ಬೆಂಗಳೂರಿಗೆ ಬಂದವರು ಈ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡುತ್ತಾರೆ. ಇಲ್ಲಿ ದೊಡ್ಡ ಕಲ್ಲಿಯ ವಿಗ್ರಹವಿದ್ದು ಈ ನಂದಿಯ ಮುಂದೆ ಏಕಶಿಲಾ ದೀಪಸ್ತಂಭವು ಕೂಡ ನಿಂತಿದೆ.

 

 

ಈ ನಂದಿಯ ಮೂರ್ತಿ ಮೊದಲು ಚಿಕ್ಕದಿದ್ದು ತದನಂತರ ಬೆಳೆಯುತ್ತಾ ಇಷ್ಟು ಬೃಹದಾಕಾರವಾಗಿ ಬೆಳೆದು ನಿಂತಿದೆ ಈ ದೇವಸ್ಥಾನದ ಪಕ್ಕದಲ್ಲಿ ಪುರಾತನ ಮರ ಒಂದು ಎದ್ದು ನಿಂತಿದೆ ಈ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಕಡಲೆಕಾಯಿ ಪರಿಷೆ ಕೂಡ ನಡೆಯುತ್ತದೆ. ಈ ದೇವಸ್ಥಾನದ ದಂತ ಕಥೆಯ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಬೆಂಗಳೂರು ಇಷ್ಟು ಬೃಹದಾಕಾರವಾಗಿ ಬೆಳೆಯುವ ಮೊದಲು ಈ ಜಾಗದಲ್ಲೆಲ್ಲಾ ಜಮೀನು ಇತ್ತು. ಅಲ್ಲಿ ಕಡಲೆ ಕಾಯಿಯನ್ನು ಬೆಳೆಯುತ್ತಿದ್ದರಂತೆ. ಆಗ ಒಂದು ಹಸು ಆ ಕಡಲೆಕಾಯಿಯನ್ನು ತಿನ್ನಲು ಬಂದಿತ್ತು. ಒಬ್ಬ ರೈತ ಹಸುವನ್ನು ಕೋಲು ತೆಗೆದುಕೊಂಡು ಹೊಡೆಯಲು ಹೋದಾಗ ಆ ನಂದಿ ಸ್ವಲ್ಪ ದೂರ ಓಡಿ ಅಲ್ಲೇ ಕಲ್ಲಾಗಿ ನಿಂತುಬಿಡುತ್ತದೆ ಆ ವಿಗ್ರಹವನ್ನು ಅಂದಿನಿಂದ ಇಂದಿನವರೆಗೂ ಪೂಜಿಸುತ್ತಾ ಬಂದಿದ್ದಾರೆ.

Be the first to comment

Leave a Reply

Your email address will not be published.


*