ಬಾಲಿವುಡ್ ನಲ್ಲಿ ನಟ ಅಕ್ಷಯ್ ಕುಮಾರ್ ಅವರು ಒಬ್ಬ ಪ್ರಾಮಿಸಿಂಗ್ ನಟನಾಗಿ ಹೊರಹೊಮ್ಮಿದ್ದಾರೆ. ನಟ ಅಕ್ಷಯ್ ಕುಮಾರ್ ರವರ ಸಿನಿಮಾ ಎಂದರೆ ಸಾಕು ಜನರೆಲ್ಲರೂ ಮುಗಿಬಿದ್ದು ಸಿನಿಮಾವನ್ನು ನೋಡುತ್ತಾರೆ. ಅಕ್ಷಯ್ ಕುಮಾರ್ ಅವರು ಮಾಡಿದ ಸಿನಿಮಾಗಳು ಒಂದಿಲ್ಲೊಂದು ರೀತಿಯಲ್ಲಿ ತನ್ನ ಸಿನಿಮಾದ ಬಜೆಟ್ಟನ್ನು ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾಗುತ್ತವೆ ಹಾಗಾಗಿ ನಿರ್ಮಾಪಕರೆಲ್ಲರೂ ಅಕ್ಷಯ್ ಕುಮಾರ್ ರವರ ಸಿನಿಮಾಗಳ ಮೇಲೆ ಹಣವನ್ನು ಹೂಡಲು ಯಾವುದೇ ಅನುಮಾನವನ್ನು ಕೂಡ ವ್ಯಕ್ತಪಡಿಸುವುದಿಲ್ಲ.
ಬಾಲಿವುಡ್ ನಲ್ಲಿ ಸ್ಟಾರ್ ನಟ ಹಾಗೆಯೇ ನಿಮ್ಮ ಪಕರಿಗೆ ಅಕ್ಷಯ್ ಕುಮಾರ್ ಅದೃಷ್ಟದ ಹಾಗೂ ಅಚ್ಚುಮೆಚ್ಚಿನ ಹೀರೋ ಆಗಿದ್ದಾರೆ. ಅಕ್ಷಯ್ ಕುಮಾರ್ ರವರ ಬಡೇಮಿಯ ಚೋಟೆ ಮಿಯಾ ಎನ್ನುವ ಚಿತ್ರವು ಇತ್ತೀಚಿಗಷ್ಟೇ ತೆರೆಕಂಡಿತ್ತು ಈ ಚಿತ್ರಕ್ಕೆ ನಟ ಅಕ್ಷಯ್ ಕುಮಾರ್ 120 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ವೈರಲಾಗುತ್ತಿದೆ.
ಅಕ್ಷಯ್ ಕುಮಾರ್ ರವರು ಯಾವುದಾದರೂ ಒಂದು ಉತ್ತಮ ಮೆಸೇಜ್ ಇಟ್ಟುಕೊಂಡು ಚಲನಚಿತ್ರಗಳಲ್ಲಿ ನಟಿಸುತ್ತಾರೆ. ಚಿತ್ರದ ಕಥೆಗಳನ್ನು ಆರಿಸುವಾಗಲು ತುಂಬಾ ಯೋಚಿಸಿ ಉತ್ತಮ ಪಾತ್ರವನ್ನು ಆರಿಸಿಕೊಳ್ಳುತ್ತಾರೆ. ಹಾಗಾಗಿಯೇ ಅಕ್ಷಯ್ ಕುಮಾರ್ ಅವರ ನಟನೆಯ ಸಿನಿಮಾಗಳು ರಿಲೀಸ್ ಆದಾಗ ಉತ್ತಮ ರೀತಿಯಲ್ಲಿ ಕಲೆಕ್ಷನ್ ಕೂಡ ಆಗುತ್ತದೆ. ಇದಕ್ಕಾಗಿಯೇ ನಿರ್ಮಾಪಕರು ಅವರು ಎಷ್ಟು ಸಂಭಾವನೆ ಕೇಳಿದರು ಕೂಡ ಕೊಡಲು ತಯಾರಿರುತ್ತಾರೆ.
ಆದರೆ ಬಡೇ ಮಿಯಾ ಚೋಟಮಿಯ ಚಿತ್ರಕ್ಕೆ ಅಕ್ಷಯ್ ಕುಮಾರ್ ದುಬಾರಿ ಮುತ್ತದ ಸಂಭಾವನೆಯನ್ನು ಕೇಳುತ್ತಿದ್ದಾರೆ. ಈ ಚಿತ್ರದ ನಂತರ ಟೈಗರ್ ಶ್ರಾಪ್ ಎನ್ನುವ ಚಿತ್ರದಲ್ಲೂ ಕೂಡ ನಟ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಟೈಗರ್ ಶ್ರಾಫ್ ಚಿತ್ರಕ್ಕೂ ಕೂಡ ದೊಡ್ಡಮಟ್ಟದಲ್ಲೇ ಅಕ್ಷಯ್ ಕುಮಾರ್ ಸಂಭಾವನೆಯನ್ನು ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಡೆಮಿಯ ಚೋಟೆ ಮಿಯಾ ಚಿತ್ರಕ್ಕೆ ನಿರ್ಮಾಪಕರು 250 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ ಈ ಬಜೆಟ್ ನಲ್ಲಿ ಅರ್ಧ ಹಣವನ್ನು ಅಕ್ಷಯ್ ಕುಮಾರ್ ರವರು ಸಂಭಾವನೆಯ ರೂಪದಲ್ಲಿ ಕೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ಮಾತ್ರವಲ್ಲದೆ ಇನ್ನಿತರ ಕಲಾವಿದರು ಕೂಡ ಈ ಹಣದಲ್ಲಿ ಸಂಭಾವನೆಯನ್ನು ನೀಡಬೇಕು ಅಕ್ಷಯ್ ಕುಮಾರ್ ರವರಿಗೆ ಅಷ್ಟು ಬಾರಿ ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದರ ಬಗ್ಗೆ ಇನ್ನಷ್ಟು ಅಧಿಕೃತ ಮಾಹಿತಿಯನ್ನು ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ತಿಳಿಸಬೇಕು ಎಂದು ಅಭಿಮಾನಿಗಳು ಕೂಡ ಆಗ್ರಹಿಸುತ್ತಿದ್ದಾರೆ.
ವಿಷ್ಣುವರ್ಧನ್ ಹೆಸರನ್ನು ಹೇಳುತ್ತಾ ಮಾತನಾಡಿದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್