ಕನ್ನಡದ ಚಿತ್ರವಾದ “ಬಿಂದಾಸ್” (bindas Kannada)ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ (Hansika Motwani)ಮದುವೆಯು ಫಿಕ್ಸ್ ಆಗಿದ್ದು ಹನ್ಸಿಕ ಮೋಟ್ವಾನಿ ರವರು ಸುಹೈಲ್ (Sohail)ಎನ್ನುವ ಬಿಸ್ನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಲು ಸಜ್ಜಾಗುತ್ತಾರೆ. ಸದ್ಯಕ್ಕೆ ಇದೀಗಾಗಲೇ ಹನ್ಸಿಕ ಮೊಟ್ವಾನಿ ಹಾಗೂ ಸುಹಾಲ್ ರವರ ಪ್ರಿ ವೆಡ್ಡಿಂಗ್ ಶೂಟ್ ಕೂಡ ಮುಗಿದಿದ್ದು ಹನ್ಸಿಕ ಮೋಟ್ವಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಭಾವಿಪತಿ ಸೋಹೈಲ್ ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಜೈಪುರದಲ್ಲಿರುವ 450 ವರ್ಷಗಳ ಹಳೆಯ ಕಟ್ಟಡ ಒಂದರಲ್ಲಿ ಹನ್ಸಿಕ ಮೋಟ್ವಾನಿ ಹಾಗೂ ಉದ್ಯಮಿ ಸುಹೈಲ್ ರವರ ಮದುವೆ ಸಮಾರಂಭ ನಡೆಯಲಿದೆ ಎಂದು ಇದೀಗಾಗಲೇ ಮೂಲಗಳಿಂದ ತಿಳಿದುಬಂದಿದ್ದು ಹನ್ಸಿಕಾ ಮೋಟ್ವಾನಿ ರವರ ಹರಿಶಿಣ ಹಾಗೂ ಮೆಹಂದಿ ಶಾಸ್ತ್ರಗಳು ಕೂಡ ಮುಗಿದಿದ್ದು ಈ ಶಾಸ್ತ್ರಗಳ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಸಣ್ಣಪುಟ್ಟ ಪಾತ್ರಗಳ ಮೂಲಕ ನಟಿ ಹನ್ಸಿಕ ಮೊತ್ವಾನಿ ಚಲನಚಿತ್ರ ರಂಗಕ್ಕೆ ಪ್ರವೇಶವನ್ನು ಪಡೆದಿದ್ದರು ನಟಿ ಹನ್ಸಿಕ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ನಟಿ ಹನ್ಸಿಕಾಗೆ ಇದೀಗಾಗಲೇ 31 ವರ್ಷ ವಯಸ್ಸಾಗಿದ್ದು ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದ ಇವರು ಇದೀಗ ತಮ್ಮ ವೈಯಕ್ತಿಕ ಜೀವನಕ್ಕೂ ಕೂಡ ಸಮಯ ನೀಡಬೇಕು ಎಂದು ಇದೀಗ ಸೊಹೈಲ್ ರವರ ಜೊತೆ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ.
ನಟಿ ಹನ್ಸಿಕಾ ಮೊಟ್ವಾನಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಇವರು ಕನ್ನಡ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ನಟಿಸಿ ಬಹು ಭಾಷ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ನಟಿ ಹನ್ಸಿಕಾ ಮೊಟ್ವಾನಿ ರವರು ಬಿಜಿನೆಸ್ ಮ್ಯಾನ್ ಸೊಹೈಲ್ ಕತೂರಿಯ ಎನ್ನುವವರ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಇತ್ತೀಚಿಗಷ್ಟೇ ಇವರಿಬ್ಬರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕೂಡ ನಡೆದಿತ್ತು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಸದ್ದು ಮಾಡುತ್ತಿವೆ. ಹನ್ಸಿಕಾ ಮೊಟ್ವಾನಿ ಹಾಗೂ ಸೊಹೈಲ್ ಕತುರಿಯ ಡಿಸೆಂಬರ್ 4ರಂದು ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಷ್ಟೇ ಅಲ್ಲದೆ ನಟಿ ಹನ್ಸಿಕಾ ಮೊಟ್ವಾನಿರವರು(Hansika Motwani) ಕರ್ನಾಟಕ ರತ್ನ ಪುನೀತ್ ರಾಜಕುಮಾರ್(puneeth Rajkumar) ರವರ ಜೊತೆ “ಬಿಂದಾಸ್” (bindass Kannada)ಎನ್ನುವ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು ಇದೀಗ ನಟಿ ಹನ್ಸಿಕಾ ಮೊಟ್ವಾನಿರವರು ಪ್ರಿ ವೆಡ್ಡಿಂಗ್ ಫೋಟೋಶೂಟ್(Pre wedding photoshoot) ಮೂಲಕ ಎಲ್ಲಾ ಕಡೆ ಹವಾ ಕ್ರಿಯೇಟ್ ಮಾಡಿದ್ದಾರೆ. ಆದರೆ, ಹನ್ಸಿಕಾ ಮೊಟ್ವಾನಿರವರು ಮದುವೆಯಾಗುತ್ತಿರುವ ಬಿಜಿನೆಸ್ ಮ್ಯಾನ್ ಸೋಹೈಲ್(Sohail) ರವರು ಹನ್ಸಿಕಾ ರವರ ಪ್ರಾಣ ಸ್ನೇಹಿತೆಯ ಗಂಡನಾಗಿದ್ದು, ತನ್ನ ಪ್ರಾಣ ಸ್ನೇಹಿತೆಯ ಗಂಡನನ್ನು ನಟಿ ಹನ್ಸಿಕ ವಿವಾಹವಾಗುತ್ತಿರುವುದು ಎಲ್ಲಾ ಕಡೆ ವಿವಾದಕ್ಕೆ ಕಾರಣವಾಗುತ್ತಿದೆ. ಇಲ್ಲಿಯವರೆಗೂ ನಟಿ ಹನ್ಸಿಕ ಇದರ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಕೂಡ ನೀಡಿಲ್ಲ ಈ ಕುರಿತು ಇವರು ತಮ್ಮ ಅಭಿಮಾನಿಗಳ ಜೊತೆ ಯಾವುದಾದರೂ ವಿಚಾರಗಳನ್ನು ಹಂಚಿಕೊಳ್ಳುತ್ತಾರೇನೋ ಎಂದು ಕಾದು ನೋಡಬೇಕಾಗಿದೆ.