ನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ(Aditi Prabhu Deva marriage) ನಿನ್ನೆಯಷ್ಟೇ ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ನಟಿ ಅದಿತಿ ಪ್ರಭುದೇವ ಯಶಸ್ವಿ ಎನ್ನುವ ಉದ್ಯಮಿಯೊಡನೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ಗಾಯಿತ್ರಿ ವಿಹಾರದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಹಲವು ಸೆಲೆಬ್ರಿಟಿಗಳು ಗೆಳೆಯರು ಗುರು ಹಿರಿಯರ ಸಮ್ಮುಖದಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ರವರ(Aditi Prabhu Deva husband) ವಿವಾಹ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಅದಿತಿ ಪ್ರಭುದೇವರವರಿಗೆ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

 

 

ನವೆಂಬರ್ 26ರಂದು ಅರಿಶಿಣ ಶಾಸ್ತ್ರ ಕೂಡ ನಡೆದಿತ್ತು ನವೆಂಬರ್ 27 ರಂದು ಬ್ಯಾಲೆನ್ಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಆರತಾಕ್ಷತೆ ಕಾರ್ಯಕ್ರಮ ಕೂಡ ನಡೆದಿತ್ತು ಯಶ್ ,ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘ ಶೆಟ್ಟಿ ,ರಂಜನಿ ರಾಘವನ್, ರಚನಾ ಇಂದರ್ ಸೇರಿದಂತೆ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

 

 

ನಟಿ ಅದಿತಿ ರವರ ಮದುವೆಗೆ ಫ್ಯಾನ್ ಇಂಡಿಯಾ ಸ್ಟಾರ್ ಆದ ಯಶ್(Yash) ಹಾಗೂ ರಾಧಿಕಾ ಪಂಡಿತ್(Radhika pandit) ಕೂಡ ಆಗಮಿಸಿದ್ದು ನಟಿ ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ಗೆ ಆರತಾಕ್ಷತೆಯ ವೇದಿಕೆ ಮೇಲೆ ಮುತ್ತ ನಿಟ್ಟಿದ್ದಾರೆ. ಚಿಕ್ಕಣ್ಣ(chikkanna) ಕೂಡ ಅದಿತಿ ಮದುವೆಯ ಬಗ್ಗೆ ಮಾತನಾಡಿ ಯಶಸ್ವಿ ತುಂಬಾ ಮುಗ್ದ ಹುಡುಗ ಅದಿತಿಯೇ ಸ್ವಲ್ಪ ಜೋರು ಎಂದಿದ್ದಾರೆ. ಅಷ್ಟೇ ಅಲ್ಲದೆ ಎಸ್ ನಾರಾಯಣ್(s Narayan) ಕೂಡ ಸದ್ದಿಲ್ಲದೆ ಅಶ್ವಿನಿ ನಕ್ಷತ್ರ ತೋರಿಸುವ ಶಾಸ್ತ್ರದ ಹತ್ತಿರ ಬಂದು ನಕ್ಷತ್ರ ಕಾಣಿಸುತ್ತಿಲ್ಲವಾ ಅದಿತಿ ಎಂದು ತಮಾಷೆ ಮಾಡಿದ್ದಾರೆ.

 

 

ಯಶಸ್ವಿ ಹಾಗೂ ಅದಿತಿರವರು ಅದ್ದೂರಿಯಾಗಿ ವಿವಾಹವಾಗಿದ್ದು ಮದುವೆಯಾದ ಎರಡೇ ದಿನಗಳಲ್ಲಿ ಅದಿತಿ ಪ್ರಭುದೇವರ ಗಂಡ ಯಶಸ್ವಿರವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ (Instagram hack)ಆಗಿದೆ. ಸ್ವತಹ ಯಶಸ್ರವರೇ ಈ ಕುರಿತು ಪೋಸ್ಟ್ ಹಾಕಿದ್ದು ನನ್ನ ಅಕೌಂಟ್ ನಿಂದ ಯಾರಿಗಾದರೂ ಮೆಸೇಜ್ ಬಂದಿದ್ದಲ್ಲಿ ರಿಪ್ಲೈ ಮಾಡಬೇಡಿ ಈಗಾಗಲೇ ನಾನು ಪೊಲೀಸರಿಗೆ ದೂರು(complaint) ನೀಡಿದ್ದೇನೆ ಎಂದು ಯಶಸ್ ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a comment

Your email address will not be published. Required fields are marked *