ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾರಿಮುತ್ತು ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ಜಯಶ್ರೀ ಆರಾಧ್ಯ ಕನ್ನಡ ಬಿಗ್ ಬಾಸ್ ನಲ್ಲಿ ಓಟಿಟಿ ಸ್ಪರ್ಧೆಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಜಯಶ್ರೀ ಆರಾಧ್ಯ ಓಟಿಟಿ ಶೋ ನಲ್ಲಿ ಬಿಗ್ ಬಾಸ್ ಹೋಗಲು ತಾವು ಎಷ್ಟು ಕಷ್ಟಪಟ್ಟಿದ್ದೆವು ಎಂದು ಹಾಗೂ ನಟನೆಯನ್ನು ಶುರು ಮಾಡಲು ಕಾರಣವೇನು ಎಂಬುದರ ಬಗ್ಗೆ ಎಲ್ಲಾ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾತನಾಡಿದರು ಹಾಗೆಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ತಕ್ಷಣ ರಿಜಿಸ್ಟರ್ ಮ್ಯಾರೇಜ್ ಆಗುತ್ತೇನೆ ಒಂದು ಹೊಸ ಮನೆಯನ್ನು ಕಟ್ಟುತ್ತೇನೆ ಎಂದು ಚೈತ್ರಹಳ್ಳಿ ಕೇರಿ ಹಾಗೂ ಅಕ್ಷತಾ ರವರ ಜೊತೆ ಜಯಶ್ರೀ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. ಇದೀಗ ಜಯಶ್ರೀ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಹೊಸ ಮನೆಯ ಗೃಹಪ್ರವೇಶವನ್ನು ಕೂಡ ಅದ್ದೂರಿಯಾಗಿ ಮಾಡಿದ್ದಾರೆ.

 

 

ಬಿಗ್ ಬಾಸ್ನ ಜಯಶ್ರೀ ಎಂದರೆ ಯಾರಿಗೂ ಕೂಡ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ ಜಯಶ್ರೀರವರು ಉಪೇಂದ್ರರವರೊಡನೆ ನಟಿಸಿದ್ದ ಮಾರಿಮುತ್ತು ಎನ್ನುವ ಪಾತ್ರವನ್ನು ಮಾಡಿದ್ದ ಸರೋಜಾ ರವರ ಮೊಮ್ಮಗಳು, ಇದೀಗ ಮಾರಿಮುತ್ತು ಸರೋಜಾ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಆದರೂ ಕೂಡ ಇವರು ತಮ್ಮ ನಟನಾಚಾತುರ್ಯದಿಂದ ಕನ್ನಡಿಗರ ಮನಸ್ಸಿನಲ್ಲಿ ಇನ್ನೂ ಉಳಿದುಕೊಂಡಿದ್ದಾರೆ. ಇವರ ಮೊಮ್ಮಗಳು ಜಯಶ್ರೀ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.

 

 

ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮನೆಯನ್ನು ಬಿಟ್ಟು ಹೊರಗೆ ಬಂದು ಕಷ್ಟಪಟ್ಟು ಉದ್ಯಮ ಒಂದನ್ನು ಶುರು ಮಾಡಿದ್ದರು. ಇವರ ಮನೆಯಲ್ಲಿ ತುಂಬಾ ರಿಸ್ಟ್ರಿಕ್ಷನ್ಸ್ ಇದ್ದ ಕಾರಣ ಅಣ್ಣನ ಮಾತನ್ನೇ ಕೇಳಬೇಕಾಗಿತ್ತು. ಇವರ ಅಣ್ಣ ಕೂಡ ಒಮ್ಮೆ ಜೈಲಿಗೆ ಹೋಗಿ ಬಂದಿದ್ದರು ಆದರೆ ಮನೆಯವರೆಲ್ಲ ಅಣ್ಣನಿಗೆ ಸಪೋರ್ಟ್ ಮಾಡುತ್ತಿದ್ದರು ಹಾಗಾಗಿ ಜಯಶ್ರೀ ಮನೆಯಲ್ಲಿ ಇರಲು ಸಾಧ್ಯವಾಗದೆ ಮನೆ ಬಿಟ್ಟು ಹೊರಗೆ ಬಂದಿದ್ದರು ತದನಂತರ ಜೂಜಿನಲ್ಲಿ ಕಾಲ ಕಳೆಯುತ್ತಿದ್ದ ಜಯಶ್ರೀ, ನಾನೇನಾದರೂ ಸಾಧಿಸಬೇಕು ಎಂದು ಉದ್ಯಮ ಒಂದನ್ನು ಶುರು ಮಾಡಿ ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ದುಡಿಯುತ್ತಿದ್ದಾರೆ.

 

 

ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ರಿಲೇಶನ್ಶಿಪ್ ಬಗ್ಗೆ ಕೂಡ ಜಯಶ್ರೀ ಹೇಳಿಕೊಂಡಿದ್ದರು ಇವರು ವಿವಾಹಿತ ಪುರುಷನ ಜೊತೆ ಆಫೇರ್ ಇಟ್ಟುಕೊಂಡಿದ್ದರ ಬಗ್ಗೆ ಮಾತನಾಡಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಕೂಡಲೇ ನಾನು ಮದುವೆ ಆಗುತ್ತೇನೆ ಎಂದು ಕೂಡ ಹೇಳಿದ್ದರು. ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಇದೀಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ಆ ಹುಡುಗ ಕೂಡ ಜಯಶ್ರೀರವರನ್ನು ಪ್ರೀತಿಸುತ್ತಿದ್ದಾರೆ. ಇಬ್ಬರು ರಿಜಿಸ್ಟರ್ ಮ್ಯಾರೇಜ್ ಆಗೋಣ ಎಂದುಕೊಂಡಿದ್ದರು. ಆದರೆ ಜಯಶ್ರೀ ಬಿಗ್ ಬಾಸ್ ನಲ್ಲಿ ಇರುವ ಕಾರಣ ಇಲ್ಲಿಂದ ಹೋದ ನಂತರ ರಿಜಿಸ್ಟರ್ ಮ್ಯಾರೇಜ್ ಆಗುವುದು ಎಂದು ಮಾತನಾಡಿಕೊಂಡಿದ್ದಾರೆ.

 

 

ಜಯಶ್ರೀ ಬಿಗ್ ಬಾಸ್ ಮನೆಗೆ ಬಂದ ನಂತರ ಆ ಹುಡುಗನ ಪ್ರೀತಿ ಹಾಗೂ ಅವನ ಮಹತ್ವದ ಬಗ್ಗೆ ನನಗೆ ಅರಿವಾಗಿದೆ. ನಾನು ಅವನಿಗೆ ಅಷ್ಟೊಂದು ಆದ್ಯತೆಯನ್ನು ನೀಡುತ್ತಿರಲಿಲ್ಲ ಈಗ ಅವನ ಇಂಪಾರ್ಟೆಂಟ್ ನನ್ನ ಜೀವನದಲ್ಲಿ ಎಷ್ಟಿದೆ ಎಂಬುದು ನನಗೆ ಅರಿವಾಗಿದೆ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ನಂತರ ಅವನನ್ನು ಮದುವೆಯಾಗುತ್ತೇನೆ ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಜನರು ಪ್ರೀತಿಸಿ ಮದುವೆಯಾಗಿದ್ದಾರೆ ಇಲ್ಲಿಯೇ ಎಷ್ಟೋ ಜನ ಪ್ರೀತಿಸುತ್ತಾರೆ ಹೊರಗಡೆ ಹೋಗಿ ಮದುವೆಯಾಗುತ್ತಾರೆ. ಬಿಗ್ ಬಾಸ್ ಮನೆಗೆ ಅಂತಹದ್ದೊಂದು ಶಕ್ತಿ ಇದೆ ಎಂದು ಜಯಶ್ರೀರವರು ಬಿಗ್ ಬಾಸ್ ಮನೆಯಲ್ಲಿ ಚೈತ್ರಹಳ್ಳಿ ಕೇರಿ ಹಾಗೂ ಅಕ್ಷತಾ ರವರಿಗೆ ಹೇಳಿದ್ದರು.

ನಾನು ಮೊದಲು ಜೂಜಿನ ಚಟಕ್ಕೆ ಬಿದ್ದಿದ್ದೆ ತದನಂತರ ಉದ್ಯಮ ಒಂದನ್ನು ಶುರು ಮಾಡಿ ಇದೀಗ ಉದ್ಯಮದಿಂದ ಲಕ್ಷ ಲಕ್ಷ ದುಡಿಯುತ್ತೇನೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ನಂತರ ಒಂದು ಮನೆಯನ್ನು ಕಟ್ಟಿ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಕೂಡ ಶುರು ಮಾಡಬೇಕು ಎಂದುಕೊಂಡಿದ್ದೇನೆ ನನಗೆ ಮಾನಸಿಕವಾಗಿ ನನ್ನ ಜೊತೆಗೆ ಯಾರಾದರೂ ಇರಬೇಕಿತ್ತು ಹಾಗಾಗಿ ನಾನು ವಿವಾಹಿತ ಪುರುಷನ ಜೊತೆ ಆಫೇರ್ ಇಟ್ಟುಕೊಂಡಿದ್ದೆ ಎಂದು ಜಯಶ್ರೀ ಹೇಳಿದ್ದಾರೆ.

 

 

ಆರ್ಯವರ್ಧನ್ ಗುರೂಜಿ ಕೂಡ ಜಯಶ್ರೀರವರ ಕೈ ನೋಡಿ ನಿನಗೆ ಎರಡು ಮದುವೆ ಆಗುತ್ತದೆ ನೀನು ನಿನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀಯ ದಿನ ನಿನ್ನ ಲೈಫಲ್ಲಿ ಸಾಕಷ್ಟು ಹಣವು ಬರುತ್ತದೆ ನಿನ್ನ ಮಕ್ಕಳು ಕೂಡ ಪುಣ್ಯ ಮಾಡಿರುತ್ತಾರೆ ನೀನು ಯಾರ ಬಗ್ಗೆಯೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಎಂದೆಲ್ಲ ಜಯಶ್ರೀರವರ ಬಗ್ಗೆ ಭವಿಷ್ಯವನ್ನು ನುಡಿದಿದ್ದರು ಇದೀಗ ಜಯಶ್ರೀರವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದು ಒಂದು ಐಷಾರಾಮಿ ಮನೆಯನ್ನು ಕಟ್ಟಿ ತಮ್ಮ ಆಸೆಯಂತೆ ರಿಜಿಸ್ಟರ್ ಮ್ಯಾರೇಜ್ ಕೂಡ ಮಾಡಿಕೊಂಡು ಇದೀಗ ತಮ್ಮ ಹೊಸ ಮನೆಯ ಗೃಹಪ್ರವೇಶದ ಮೂಲಕ ತಮ್ಮ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

Leave a comment

Your email address will not be published. Required fields are marked *