ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಗೌಡ ರವರು ತಮ್ಮ ಸಹೋದರಿ ದಿವ್ಯ ಗೌಡ ರವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಮಾನ್ಯವಾಗಿ ಭವ್ಯ ಗೌಡರವರ ತೆರೆಯ ಹಿಂದಿನ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುವುದು ಅವರ ಅಕ್ಕ ದಿವ್ಯ ಗೌಡ.
ದಿವ್ಯ ಗೌಡ ರವರಿಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ತನ್ನ ಅಕ್ಕನ ಹುಟ್ಟು ಹಬ್ಬದ ಸಲುವಾಗಿ ಗೆಳೆಯರನ್ನೆಲ್ಲ ಆಹ್ವಾನಿಸಿ ಭವ್ಯ ಗೌಡ ಅಕ್ಕನಿಗೆ ಸರ್ಪ್ರೈಸ್ ಬರ್ತಡೇ ಪಾರ್ಟಿಯನ್ನು ನೀಡಿದ್ದಾರೆ. ತನ್ನ ಅಕ್ಕನ ಸರ್ಪ್ರೈಸ್ ಬರ್ತಡೇ ಪಾರ್ಟಿಯ ಸುಂದರ ಕ್ಷಣಗಳನ್ನು ಭವ್ಯ ಗೌಡ ತನ್ನ ಅಭಿಮಾನಿಗಳ ಜೊತೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗೀತಾ ದಾರವಾಹಿ ಖ್ಯಾತಿಯ ಭವ್ಯ ಗೌಡ ತನ್ನ ಅಕ್ಕನ ಹುಟ್ಟುಹಬ್ಬದ ಸಲುವಾಗಿ ಅವಳ ಸ್ನೇಹಿತರೆಲ್ಲರಿಗೂ ಆಹ್ವಾನವನ್ನು ನೀಡಿ ರೆಸಾರ್ಟ್ ಒಂದರಲ್ಲಿ ಸರ್ಪ್ರೈಸ್ ಬರ್ತಡೇ ಪ್ಲಾನ್ ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ಡೆಕೋರೇಷನ್ ನಡುವೆ ದೊಡ್ಡ ಕೇಕ್ ಒಂದನ್ನು ಟೆಡ್ಡಿ ಗೊಂಬೆಯು ಭವ್ಯ ಗೌಡರವರಿಗೆ ತಂದುಕೊಡುತ್ತದೆ. ತನ್ನ ತಂಗಿ ಅಕ್ಕನಿಗಾಗಿ ಇಷ್ಟೆಲ್ಲ ಡೆಕೋರೇಷನ್ ಮಾಡಿ ಬರ್ತಡೆ ಏನು ಸೆಲೆಬ್ರೇಟ್ ಮಾಡುತ್ತಿರುವುದಕ್ಕೆ ದಿವ್ಯ ಗೌಡ ಕೂಡ ಖುಷಿಪಟ್ಟಿದ್ದಾರೆ.
ಭವ್ಯ ಗೌಡ ಕೂಡ ಇನ್ಸ್ಟಾಗ್ರಾಮ್ ರಿಲ್ಸ್ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡು ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರಾವಾಹಿ ಗೆ ಸೆಲೆಕ್ಟ್ ಆಗಿ ಗೀತಾ ದಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭವ್ಯ ಗೌಡ ರವರ ಎಲ್ಲಾ ತೆರೆಯ ಹಿಂದಿನ ಕೆಲಸಗಳನ್ನು ಅಕ್ಕ ದಿವ್ಯ ಗೌಡ ನೋಡಿಕೊಳ್ಳುತ್ತಾರೆ. ಅಕ್ಕ ತಂಗಿ ಇಬ್ಬರ ನಡುವೆ ಉತ್ತಮವಾದ ಬಾಂಡಿಂಗ್ ಇದೆ. ಹಾಗಾಗಿಯೇ ಭವ್ಯ ಗೌಡ ತನ್ನ ಅಕ್ಕ ದಿವ್ಯ ಗೌಡರವರ ಬರ್ತಡೇ ಯನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.