ಸಾಮಾನ್ಯವಾಗಿ ಎಲ್ಲ ರೈತರು ಕಡಲೆ ಕಾಯಿಯನ್ನು ಬೆಳೆದೆ ಬೆಳೆಯುತ್ತಾರೆ. ಕಡಲೆಕಾಯಿಯನ್ನು ಇಂಗ್ಲೀಷ್ ನಲ್ಲಿ ಪೀನಟ್ ಎಂದು ಕರೆಯುತ್ತಾರೆ. ಇತ್ತೀಚಿಗಂತೂ ನಗರದ ಜನರು ಪೀನಟ್ ಬಟರ್ ನ ಮೊರೆ ಹೋಗುತ್ತಿರುವುದೇ ಹೆಚ್ಚಾಗಿದೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಕಡಲೆಕಾಯಿಯನ್ನು ಹಸಿಯಾಗಿ ಉರಿದು ಬೇಯಿಸಿ ತಿನ್ನುವುದು ವಾಡಿಕೆಯಲ್ಲಿದೆ. ಆದರೆ ಕಡಲೆಕಾಯಿಯನ್ನು ಮೊಳಕೆ ಕಟ್ಟಿ ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ.

 

 

ಕಡಲೆಕಾಯಿ ತಿನ್ನುವುದು ತುಂಬಾ ರುಚಿಯಾಗಿರುತ್ತದೆ ಅದನ್ನು ಮೊಳಕೆ ಕಟ್ಟಿ ತಿಂದರೆ ಅದರ ರುಚಿ ದುಪಟ್ಟಾಗುತ್ತದೆ ಕಡಲೆಕಾಯಿಗೆ ಮೊಳಕೆಯನ್ನು ಬರಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳಿವೆ. ಮೊಳಕೆ ಕಟ್ಟಿರುವ ಕಡಲೆಕಾಯಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು ಕಡಲೆಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಡಲೆಕಾಯಿಯಲ್ಲಿ ಮೆಗ್ನೀಷಿಯಂ ಪೊಟ್ಯಾಶಿಯಂ ಇರುವುದರಿಂದ ಇದು ಮಾನವನ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.

 

 

ಕಡಲೆಕಾಯಿಯಲ್ಲಿ ಎಣ್ಣೆಯ ಅಂಶವಿದ್ದು ಕೊಬ್ಬು ಕೂಡ ಹೆಚ್ಚಾಗಿದೆ. ಮೊಳಕೆ ಕಟ್ಟಿದ ಕಡಲೆಕಾಯಿ ತಿನ್ನುವುದರಿಂದ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಇಷ್ಟೇ ಅಲ್ಲದೆ ಇದು ರಕ್ತದೊತ್ತಡ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ದೇಹಕ್ಕೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳಲು ಸಹಕಾರಿಯಾಗಿದೆ.

 

 

ಮೊಳಕೆ ಕಟ್ಟಿರುವ ಕಡಲೆಕಾಯಿಯನ್ನು ತಿನ್ನುವುದರಿಂದ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು ಮೊಳಕೆ ಹೊಡೆದ ಕಡಲೆ ಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಈ ಫೈಬರ್ ಅಂಶ ಊಟವನ್ನು ಚೆನ್ನಾಗಿ ಜೀರ್ಣಿಸಲು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಸುಸ್ಥಿರವಾಗಿ ಇಡುತ್ತದೆ.

 

 

ದೇಹಕ್ಕೆ ಅಗತ್ಯವಾದ ಒಮೆಗಾ 6 ಕೊಬ್ಬಿನ ಆಮ್ಲಗಳು ಕೂಡ ಮೊಳಕೆ ಹೊಡೆದ ಕಡಲೆಕಾಯಿಯಲ್ಲಿ ಇರುತ್ತವೆ ಇದರಿಂದ ಬೊಜ್ಜು ಕೂಡ ಕರಗಿ ಬೊಜ್ಜಿನಿಂದ ದೇಹಕ್ಕೆ ಉಂಟಾಗುವ ರೋಗಗಳನ್ನು ನಿಯಂತ್ರಿಸಬಹುದು ಮೊಳಕೆ ಒಡೆದಿರುವ ಕಡಲೆಕಾಯಿಯನ್ನು ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕೂಡ ಸುಸ್ಥಿರವಾಗಿ ಇಡುತ್ತದೆ. ಜರ್ನಲ್ ಆಫ್ ಇಂಟರ್ನಲ್ ಮೆಡಿಸನ್ ವರದಿಯ ಪ್ರಕಾರ ಮೊಳಕೆ ಕಟ್ಟಿರುವ ಕಡಲೆಕಾಯಿಯಲ್ಲಿ ಮೆಗ್ನೀಷಿಯಂ ಅಂಶ ಹೆಚ್ಚಾಗಿ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

Leave a comment

Your email address will not be published. Required fields are marked *