ನಟ ರಿಯಲ್ ಸ್ಟಾರ್ ಉಪೇಂದ್ರ ರವರು ತಮ್ಮ ವಿಭಿನ್ನವಾದ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ರವರನ್ನು ಮದುವೆಯಾಗಿದ್ದಾರೆ. ಪ್ರಿಯಾಂಕಾ ಹಾಗೂ ಉಪೇಂದ್ರ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಐಶ್ವರ್ಯ ಹಾಗೂ ಆಯುಷ್ ಎನ್ನುವುದು ಅವರ ಹೆಸರಾಗಿದೆ.

 

 

ಉಪೇಂದ್ರ ರವರು ಕಾಶಿನಾಥ್ ರವರ ಶಿಷ್ಯನಾಗಿದ್ದು ಅವರಿಂದಲೇ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು ಅಂದಿನಿಂದ ಇಂದಿನವರೆಗೂ ವಿಭಿನ್ನವಾದ ಕಥಾ ಹಂದರಗಳನ್ನು ಒಳಗೊಂಡ ಕಥೆಗಳನ್ನು ಆಧರಿಸಿ ಸಿನಿಮಾಗಳನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಉಪೇಂದ್ರರವರಿಗೆ ಇದೀಗ 55 ವರ್ಷ ವಯಸ್ಸಾಗಿದೆ ಆದರೂ ಕೂಡ ಯುವಕನಂತೆ ಸಕ್ರಿಯರಾಗಿರುತ್ತಾರೆ.

 

 

ಉಪೇಂದ್ರ ನಟನಾಗಿ ಮಾತ್ರವಲ್ಲದೆ ನಿರ್ದೇಶಕ ನಿರ್ಮಾಪಕ ಚಿತ್ರಕಥೆಗಾರ ರಾಜಕಾರಣಿ ಯಾಗಿ ಕೂಡ ಕೆಲಸ ಮಾಡಿದ್ದಾರೆ. ಉಪೇಂದ್ರ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ಉಪೇಂದ್ರ ರವರು ಮೂಲತಃ ಮೈಸೂರಿನ ಕುಂದಾಪುರದವರಾಗಿದ್ದು ಅವರ ಅಭಿಮಾನಿಗಳು ಉಪೇಂದ್ರರವರನ್ನು ಪ್ರೀತಿಯಿಂದ ಉಪ್ಪಿ ಎಂದೆ ಕರೆಯುತ್ತಾರೆ.

 

 

ರಾಜಕೀಯಕ್ಕೂ ಕೂಡ ಎಂಟ್ರಿ ಕೊಟ್ಟ ಉಪೇಂದ್ರ ಪ್ರಜಾಕೀಯ ಪಕ್ಷ ಎನ್ನುವ ಪಕ್ಷವನ್ನು ಕಟ್ಟಿದ್ದಾರೆ. ಉಪೇಂದ್ರ ರವರು ತರ್ಲೆ ನನ್ ಮಗ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿ ಎ, ಓಂ, ಉಪೇಂದ್ರ, ಸೂಪರ್, ರಕ್ತ ಕಣ್ಣೀರು, ಉಪ್ಪಿ2, ಐ ಲವ್ ಯು ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

 

 

ಮೊದಲಿನಿಂದಲೂ ತಮ್ಮ ಅಭಿಮಾನಿಗಳ ಬಗ್ಗೆ ಗೌರವ ಹಾಗೂ ಪ್ರೀತಿ ಇರುವ ಉಪೇಂದ್ರ ರವರು ಸಾಕಷ್ಟು ಜನ ಅಭಿಮಾನಿಗಳು ಸೇರಿದ ಸಮಯದಲ್ಲಿ ಕೂಡ ಬೇಸರಪಟ್ಟುಕೊಳ್ಳದೆ ಅವರೊಂದಿಗೆ ಚೆನ್ನಾಗಿ ಮಾತನಾಡಿ ಸೆಲ್ಫಿಗಳನ್ನು ಕೂಡ ನೀಡುತ್ತಾರೆ. ಒಂದು ಕಾರ್ಯಕ್ರಮದಲ್ಲಿ ಕೂಡ ಅಭಿಮಾನಿಗಳು ಮುಗಿಬಿದ್ದು ಸೆಲ್ಫಿಗಾಗಿ ಬರುತ್ತಿದ್ದಾಗ ಸಮಾಧಾನದಿಂದಲೇ ಅವರ ಬಳಿ ಮಾತನಾಡಿ ಅವರಿಗೆ ಊಟದ ವ್ಯವಸ್ಥೆಯನ್ನು ಮಾಡುವಂತೆ ತಮ್ಮ ಬಾಡಿಗಾರ್ಡ್ ಗಳಿಗೆ ಹೇಳಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Leave a comment

Your email address will not be published. Required fields are marked *