ಅಮೂಲ್ಯ ಮಕ್ಕಳ ನಾಮಕರಣಕ್ಕೆ ಇನ್ವಿಟೇಶನ್ ತಲುಪಿದ್ದರು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಬಂದಿಲ್ಲ

ಮೊನ್ನೆ ಅಷ್ಟೇ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮುದ್ದಿನ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದು ಶಿವರಾಜ್ ಕುಮಾರ್ ಕೂಡ ಬಂದಿದ್ದರು.ಆದರೆ ಅಶ್ವಿನಿ ಮೇಡಂರವರು ಮಾತ್ರ ಬಂದಿರಲಿಲ್ಲ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಖುದ್ದಾಗಿ ಇನ್ವಿಟೇಶನ್ ಅನ್ನು ನೀಡಿದ್ದರೂ ಕೂಡ ಅವರು ಬರಲು ಸಾಧ್ಯವಾಗಿಲ್ಲ.

 

 

ಪುನೀತ್ ರಾಜಕುಮಾರ್ ಇದ್ದರೆ ಖಂಡಿತವಾಗಿಯೂ ಅಮೂಲ್ಯ ಅವಳಿ ಮಕ್ಕಳ ನಾಮಕರಣಕ್ಕೆ ಹೋಗುತ್ತಿದ್ದರು ಆದರೆ ಅಶ್ವಿನಿ ಮೇಡಂ ರವರು ಹಲವಾರು ಕಾರ್ಯಗಳಲ್ಲಿ ಬಿಸಿ ಇದ್ದ ಕಾರಣ ನಟಿ ಅಮೂಲ್ಯ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಹೋಗಲಾಗಿಲ್ಲ.ಅಶ್ವಿನಿ ರವರು ಬಿಜಿ ಇದ್ದ ಕಾರಣ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳಿಗೆ ಫೋನ್ ಕಾಲ್ ಮುಖಾಂತರ ವಿಶಸ್ ತಿಳಿಸಿದ್ದಾರೆ. ನಾನು ಬ್ಯುಸಿ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ ಕ್ಷಮಿಸಿ ಎಂದು ಕೂಡ ಕೇಳಿದ್ದಾರೆ ಜೊತೆಗೆ ಯೋಗ ಕ್ಷೇಮವನ್ನು ವಿಚಾರಿಸಿದ್ದು ಶುಭಾಶಯಗಳು ಎಂದು ಕೂಡ ತಿಳಿಸಿದ್ದಾರೆ.

 

 

ನಿಮ್ಮ ಇಬ್ಬರು ಅವಳಿ ಗಂಡು ಮಕ್ಕಳಿಗೂ ಒಳ್ಳೆಯದಾಗಲಿ ಆಲ್ ದ ಬೆಸ್ಟ್ ಎಂದು ಕೂಡ ಅಶ್ವಿನಿ ರವರು ಅಮೂಲ್ಯ ರವರಿಗೆ ಹೇಳಿದ್ದಾರೆ. ಅಶ್ವಿನಿ ಮೇಡಂ ಕಾಲ್ ಮಾಡಿ ವಿಶ್ ಮಾಡಿದ್ದನ್ನು ನೋಡಿದ ಅಮೂಲ್ಯ ಕೂಡ ಖುಷಿಪಟ್ಟಿದ್ದಾರೆ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ತುಂಬಾ ಅದ್ದೂರಿ ಆಗಿ ಮಾಡಿದ್ದು ಹಲವಾರು ಸೆಲೆಬ್ರಿಟಿಗಳು ಕೂಡ ಈ ನಾಮಕರಣ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ತಮ್ಮ ಮಕ್ಕಳಿಬ್ಬರನ್ನು ಅಂಬಾರಿಯ ಮೇಲೆ ಕೂರಿಸಿ ನಾಮಕರಣ ಶಾಸ್ತ್ರವನ್ನು ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ನೆರವೇರಿಸಿದರು.

 

 

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಅವಳಿ ಮಕ್ಕಳಿಗೆ ಅಥರ್ವ ಹಾಗೂ ಆರವ್ ಎಂದು ನಾಮಕರಣ ಶಾಸ್ತ್ರವನ್ನು ಮಾಡಿದ್ದು ಅಶ್ವಿನಿ ಮೇಡಂ ರವರು ಕಾಲ್ ಮಾಡಿ ವಿಶಸ್ ಅನ್ನು ಹೇಳಿದಾಗ ದಂಪತಿಗಳಿಬ್ಬರೂ ಖುಷಿಪಟ್ಟಿದ್ದಾರೆ. ಹಾಗೆಯೇ ಫ್ರೀ ಆದಾಗ ತಮ್ಮ ಮನೆಗೆ ಬರುವೆ ಎಂದು ಕೂಡ ಅಶ್ವಿನಿ ರವರು ಹೇಳಿದ್ದಾರೆ. ಹಾಗೆಯೇ ನೀವು ಫ್ರೀ ಇದ್ದಾಗ ನಮ್ಮ ಮನೆಗೂ ಕೂಡ ಬನ್ನಿ ಎಂದು ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳನ್ನು ಅಶ್ವಿನಿ ರವರು ತಮ್ಮ ಮನೆಗೆ ಇನ್ವೈಟ್ ಮಾಡಿದ್ದಾರೆ.

Be the first to comment

Leave a Reply

Your email address will not be published.


*