ಅಪ್ಪು ಪತ್ನಿ ಅಶ್ವಿನಿ ಕೈಯಲ್ಲಿ ಇರುವ ದುಬಾರಿ ಬೆಲೆಯ ವಾಚ್ ರೇಟ್ ಕೇಳಿ ಕರ್ನಾಟಕವೇ ಶಾಕ್

ಅಪ್ಪು ಪತ್ನಿ ಅಶ್ವಿನಿ ರವರು ಅಪ್ಪುರವರ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಹಾಗೂ ಹೊಸ ಸಿನಿಮಾಗಳನ್ನು ನೋಡಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಅಪ್ಪುರವರ ಎಲ್ಲಾ ಕೆಲಸಗಳನ್ನು ಕೂಡ ಅಶ್ವಿನಿ ರವರೆ ನಿರ್ವಹಿಸುತ್ತಿದ್ದಾರೆ. ಇದೀಗ ಅಶ್ವಿನಿ ಪುನೀತ್ ರವರು ಧರಿಸಿರುವ ವಾಚಿನ ಬಗ್ಗೆ ಸಿಕ್ಕಾಪಟ್ಟೆ ಸದ್ದಾಗುತ್ತಿದೆ, ಈ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಅಶ್ವಿನಿ ರವರು ಈ ವಾಚ್ ಅನ್ನು ಧರಿಸಿ ಬಂದಿರಲಿಲ್ಲ ಆದರೆ ಇದೀಗ ಇತ್ತೀಚೆಗೆ ನಡೆದ ಕಾರ್ಯಕ್ರಮಗಳಲ್ಲಿ ಈ ವಾಚ್ ಅನ್ನು ಅಶ್ವಿನಿರವರು ಧರಿಸಿಕೊಂಡಿದ್ದಾರೆ ಸ್ಟಾರ್ ನಟ ನಟಿಯರು ಉದ್ಯಮಿಗಳು ಮಾತ್ರ ಈ ವಾಚ್ ಅನ್ನು ಬಳಸುತ್ತಾರೆ ಎನ್ನಲಾಗಿದೆ.

 

 

ಪುನೀತ್ ರಾಜಕುಮಾರ್ ಗೆ ಕೂಡ ವಾಚ್ ನಾ ಕ್ರೇಜ್ ಇತ್ತು ಹಾಗೆ ಕಾರುಗಳ ಕ್ರೇಜ್ ಕೂಡ ಇತ್ತು ಗ್ಯಾಜೆಟ್ ಗಳನ್ನು ಕೂಡ ಬಳಸುತ್ತಿದ್ದರು ಹಾಗೆ ಅಪ್ಪು ಪತ್ನಿ ಅಶ್ವಿನಿ ರವರಿಗೂ ಕೂಡ ವಾಚ್ಗಳ ಬಗ್ಗೆ ಕ್ರೇಜ್ ಇದ್ದು ಇದೀಗ ರೋಲೆಕ್ಸ್ ವಾಚ್ ಅನ್ನು ಧರಿಸಿದ್ದಾರೆ ಈ ವಾಚಿನ ಬೆಲೆ ಬರೋಬ್ಬರಿ 10 ಲಕ್ಷಗಳು ಎನ್ನಲಾಗಿದೆ. ಅಶ್ವಿನಿ ಪುನೀತ್ ರವರು ನಿನ್ನೆ ತಾನೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದು ಆ ಕಾರ್ಯಕ್ರಮಕ್ಕೆ ಈ ವಾಚನ್ನು ಧರಿಸಿಕೊಂಡು ಹೋಗಿದ್ದಾರೆ. ಅಲ್ಲಿದ್ದವರೆಲ್ಲ ಅಶ್ವಿನಿ ರವರ ಫೋಟೋವನ್ನು ತೆಗೆಯುವಾಗ ಈ ವಾಚ್ ಫೋಟೋವನ್ನು ಕೂಡ ತೆಗೆದುಕೊಂಡಿದ್ದಾರೆ. ತದನಂತರ ಈ ವಾಚಿನ ಫೋಟೋ ಸೋಶಿಯಲ್ ಮೀಡಿಯಾಗಳಲ್ಲೆಲ್ಲ ವೈರಲ್ ಆಗಿದ್ದು ಜೂಮ್ ಮಾಡಿ ನೋಡಿದಾಗ ಇದು ರೋಲೆಕ್ಸ್ ವಾಚ್ ಎಂದು ತಿಳಿದುಬಂದಿದೆ.

 

ತದನಂತರ ಈ ವಾಚನ ಡಿಸೈನ್ ಅನ್ನು ಗೂಗಲ್ ಅಲ್ಲಿ ಸರ್ಚ್ ಮಾಡಿದಾಗ ಈ ವಾಚಿನ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಎಂದು ತಿಳಿದುಬಂದು ಎಲ್ಲರೂ ಅಶ್ವಿನಿ ರವರು ಇಷ್ಟು ದುಬಾರಿ ವಾಚನ್ನು ಧರಿಸಿರುವರೇ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಎಷ್ಟೇ ದುಬಾರಿ ವಾಚನ್ನಾದರೂ ಧರಿಸಲಿ ದುಬಾರಿ ಬಟ್ಟೆಯನ್ನಾದರೂ ತೊಡಲಿ ಆದರೆ ಅವರು ಮೊದಲಿನ ಹಾಗೆ ಅಪ್ಪುರವರ ನೆನಪಿನಿಂದ ಹೊರಬಂದು ಹಿಂದಿನ ಜೀವನದಂತೆ ಸಂತೋಷವಾಗಿ ಜೀವನವನ್ನು ನಡೆಸಬೇಕು ಎಂಬುದೇ ಅಪ್ಪು ಅಭಿಮಾನಿಗಳೆಲ್ಲರ ಆಶಯವಾಗಿದೆ.

 

 

ಈ ಹಿಂದೆ ಅಶ್ವಿನಿ ರವರು ಆಫೀಸಿನಲ್ಲಿ ಅಪ್ಪು ಬಾಸ್ ಕುಳಿತುಕೊಳ್ಳುವ ಸೀಟಿನಲ್ಲಿ ಕುಳಿತು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ಹಾಗೂ ಹೊಸ ಶಾರ್ಟ್ ಫಿಲಂ ನೋಡಿ , ಹೊಸ ಪ್ರತಿಭೆಗಳ ವಿಡಿಯೋಗಳನ್ನು ವೀಕ್ಷಿಸುವ ಕೆಲಸವನ್ನು ಮಾಡುತ್ತಿದ್ದರು ಈ ವಿಡಿಯೋ ಕೂಡ ಎಲ್ಲಾ ಕಡೆ ವೈರಲ್ ಆಗಿದ್ದು ಅಶ್ವಿನಿ ರವರು ಅಪ್ಪುವಿನಂತೆ ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಎಲ್ಲರೂ ಕಾಮೆಂಟ್ಗಳಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

Be the first to comment

Leave a Reply

Your email address will not be published.


*