ಪುನೀತ್ ಜಾಗದಲ್ಲಿ ಅಶ್ವಿನಿ ಪುನೀತ್ ಕೂತು ಅವರಂತೆ ಸಿನಿಮಾ ನೋಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ

ಪುನೀತ್ ರಾಜಕುಮಾರ್ ನಮ್ಮನೆಲ್ಲ ಆಗಲಿ ಒಂದು ವರ್ಷವಾದರೂ ಕೂಡ ಅವರ ನೆನಪು ಇನ್ನೂ ಅಚ್ಚಳಿಯದೆ ಹಾಗೆ ಉಳಿದಿದೆ. ಅಪ್ಪುರವರ ನಗು ಇನ್ನು ನಮ್ಮ ಕಣ್ಣ ಮುಂದೆ ಕಟ್ಟಿದ ಹಾಗೆ ಇದೆ. ಅಪ್ಪು ಮಾಡಿದ ಉತ್ತಮ ಕಾರ್ಯಗಳ ಪ್ರತಿಫಲ ಇನ್ನು ನಮ್ಮ ಮುಂದೆ ಕಾಣುತ್ತಿದೆ. ಅಪ್ಪು ನಮಗಾಗಿ ನೀಡಿದ ಸಂದೇಶಗಳು ಇಂದು ಕಾರ್ಯಗತವಾಗದೆ ಹಾಗೆ ಉಳಿದಿವೆ. ಇವೆಲ್ಲದರ ನಡುವೆ ಅಪ್ಪು ನಮ್ಮ ಜೊತೆ ಇಲ್ಲ.

 

 

ಅಪ್ಪು ಇಲ್ಲದೆ ಲಕ್ಷಾಂತರ ಅಭಿಮಾನಿಗಳು ನೋವಿನಿಂದ ಕಂಗೆಟ್ಟಿದ್ದಾರೆ ಹಾಗೆ ಡಾ. ರಾಜ್ ಕುಟುಂಬ ಕೂಡ ಅಪ್ಪು ಇಲ್ಲದೆ ಸಂಕಟಪಡುತ್ತಿದ್ದಾರೆ. ಇಂದಿಗೂ ಕೂಡ ಯಾರು ಅಪ್ಪು ಇಲ್ಲ ಅನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅಪ್ಪು ನಮ್ಮ ಜೊತೆ ಇಲ್ಲ ಎನ್ನುವುದೇ ವಾಸ್ತವ ಸತ್ಯವಾಗಿದೆ. ಅಪ್ಪು ನಮ್ಮ ಜೊತೆ ಇಲ್ಲ ಎನ್ನುವುದು ಅರಗಿಸಿಕೊಳ್ಳಲಾರದ ಸತ್ಯವಾಗಿ ಉಳಿದಿವೆ.

 

 

ಪುನೀತ್ ರವರು ಅಭಿಮಾನಿಗಳಿಗೆ ಮಾಡಿದ ಸಹಾಯ ಅವರು ನೀಡಿದ ಉಡುಗೊರೆಗಳು ಅವರು ನೀಡಿದ ಪ್ರೀತಿ ಆತ್ಮೀಯತೆ ನಗು ಅವರ ಅತಿ ಸರಳತೆ ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಎನ್ನುವ ಗುಣ ಇಂದಿಗೂ ಎಲ್ಲರನ್ನೂ ಕಾಡುತ್ತಲೇ ಇದೆ. ಬಲಗೈಯಿಂದ ಕೊಟ್ಟದಾನವನ್ನು ಎಡ ಕೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ತಮ್ಮ ದಾನ ಧರ್ಮ ಹಾಗೂ ಸಹಾಯಗಳನ್ನು ಯಾರಿಗೂ ಕೂಡ ಹೇಳದೆ ಅವನ್ನು ತಮ್ಮ ಪಬ್ಲಿಸಿಟಿಗೆ ಬಳಸಿಕೊಳ್ಳದೆ ಗೌಪ್ಯವಾಗಿ ಇಟ್ಟಿದ್ದರು. ಇದೀಗ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳು ಅವರು ಮಾಡಿದ ಕೆಲಸ ಕಾರ್ಯಗಳನ್ನು ನೆನೆಯುತ್ತಿದ್ದಾರೆ.

 

ಅಶ್ವಿನಿ ಪುನೀತ್ ರವರು ಪುನೀತ್ ರಾಜಕುಮಾರ್ ರವರನ್ನು ಪ್ರೀತಿಸಿ ಮದುವೆಯಾದವರು ಹಲವು ವರ್ಷಗಳಿಂದ ನೋವು ನಲಿವಿನಲ್ಲಿ ಅವರ ಜೊತೆಗಿದ್ದು ಇದೀಗ ಇದ್ದಕ್ಕಿದ್ದ ಹಾಗೆ ಅವರನ್ನು ಕಳೆದುಕೊಂಡು ತಮ್ಮಷ್ಟಕ್ಕೆ ತಾವೇ ಅಂತರ್ಮುಖಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಹೆಣ್ಣು ಮಕ್ಕಳು ಕೂಡ ಸೆಲ್ಫ್ ಇಂಡಿಪೆಂಡೆಂಟ್ ಆಗಬೇಕು ಎಲ್ಲಾ ಕೆಲಸಗಳನ್ನು ಕಲಿಯಬೇಕು ಎಲ್ಲದರಲ್ಲೂ ಮುಂದೆ ಇರಬೇಕು ಗಂಡು ಇಲ್ಲದಿದ್ದಾಗ ಹೆಣ್ಣು ಎಲ್ಲಾ ಕೆಲಸಗಳನ್ನು ನಿಭಾಯಿಸಬೇಕು. ಗಂಡಿನ ಸರಿಸಮನಾಗಿ ಹೆಣ್ಣು ಕೂಡ ನಿಲ್ಲಬೇಕು ಯಾವುದಕ್ಕೂ ಕೂಡ ಹೆಣ್ಣು ಗಂಡಿನ ಮೇಲೆ ಡಿಪೆಂಡ್ ಆಗಿರಬಾರದು ಎಂದು ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯನ್ನು ತೋರುತ್ತಿದ್ದರು.

ಅದೇ ರೀತಿ ಅಶ್ವಿನಿ ಪುನೀತ್ ರವರಿಗೂ ಕೂಡ ತಾವು ಬದುಕಿರುವಾಗಲೇ ತಮ್ಮ ಆಫೀಸಿನ ಕೆಲಸ ಸಿನಿಮಾಗಳ ಕೆಲಸ ನಿರ್ದೇಶನ ಹೊಸ ಕಂಟೆಂಟ್ ಗಳನ್ನು ಆರಿಸುವುದು ಹೇಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ಹೇಗೆ ಎಂಬೆಲ್ಲ ಕೆಲಸಗಳನ್ನು ಕೂಡ ಹೇಳಿಕೊಟ್ಟು ಹೋಗಿದ್ದಾರೆ. ಇದೀಗ ಪುನೀತ್ ರಾಜಕುಮಾರ್ ರವರ ಅನುಪಸ್ಥಿತಿ ಯಲ್ಲಿ ಅಶ್ವಿನಿ ಪುನೀತ್ ಅವರು ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆಫೀಸಿನಲ್ಲಿ ಹೊಸ ಪ್ರತಿಭೆಗಳು ತರುವ ಕಥೆಗಳನ್ನು ನೋಡಿ ವಿಶ್ಲೇಷಿಸಿ ಅವುಗಳಲ್ಲಿ ಕೆಲವೊಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಆಫೀಸಿನಲ್ಲಿ ಅಪ್ಪು ಕುಳಿತುಕೊಳ್ಳುವ ಸೀಟಿನ ಮೇಲೆ ಕುಳಿತು ಪಿಆರ್‌ಕೆ ಬ್ಯಾನರ್ ನಡಿಯಲ್ಲಿ ಯಾವ್ಯಾವ ಕೆಲಸಗಳು ಬಾಕಿ ಇದೆ ಯಾವ ಯಾವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದೆಲ್ಲ ನಿರ್ಧಾರಗಳನ್ನು ಅಶ್ವಿನಿ ಪುನೀತ್ ರವರೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಶ್ವಿನಿ ರವರು ಗಟ್ಟಿಗಿತ್ತಿ ಎಂದು ಹೊಗಳಿದ್ದಾರೆ.

Be the first to comment

Leave a Reply

Your email address will not be published.


*