ಪುನೀತ್ ಗೆ ತಮ್ಮ ಮಗಳನ್ನು ಮದುವೆ ಮಾಡಲು ನಿರಾಕರಿಸಿದ್ದರು ಅಶ್ವಿನಿರವರ ತಂದೆ ತಾಯಿ: ಭವಿಷ್ಯ ತಿಳಿದಿತ್ತೇ

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಪ್ಪುರವರ ಹಿಂದಿನ ಪವರ್ ಆಗಿದ್ದರು ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತು ಎಲ್ಲದಕ್ಕೂ ಸಪೋರ್ಟ್ ಮಾಡ್ತಾ ಅವರ ಯಶಸ್ಸಿನ ಹಿಂದಿನ ಮಹಿಳೆಯಾಗಿ ನಿಂತಿದ್ದರು. ತಮ್ಮ ಪತಿಯಂತೆ ಅಶ್ವಿನಿ ಕೂಡ ಸರಳ ಸ್ವಭಾವವನ್ನು ಹೊಂದಿದ್ದರು. ಅಶ್ವಿನಿ ಪುನೀತ್ ರವರು ತಮ್ಮ ವಿವಾಹಕ್ಕೇ ಮೊದಲು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರು ಆದರೆ ಇವರ ಮೂಲ ಊರು ಚಿಕ್ಕಮಂಗಳೂರಿನ ಮೂಡುಬಿದಿರೆ ತಾಲೂಕಿನ ಭಾಗಮನೆ ಗ್ರಾಮದವರು ಎನ್ನಲಾಗಿದೆ.

 

 

ಅಶ್ವಿನಿರವರು ಹುಟ್ಟಿದ್ದು 14 ಮಾರ್ಚ್ 1981ರಲ್ಲಿ ಈಗಾಗಲೇ ಅಶ್ವಿನಿ ರವರಿಗೆ 40 ವರ್ಷ ವಯಸ್ಸಾಗಿದೆ. ಅಶ್ವಿನಿ ರವರ ಮೊದಲ ಹೆಸರು ಅಶ್ವಿನಿ ರೇವನಾಥ್ ಎಂಬುದಾಗಿತ್ತು. ಅಶ್ವಿನಿ ರವರ ತಂದೆಯವರ ರೇವನಾಥ್ ರವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.ಅಶ್ವಿನಿ ರವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿರವರಿಗೆ ಒಬ್ಬ ತಂಗಿ ಹಾಗೂ ತಮ್ಮ ಇದ್ದು ಇವರ ತಂಗಿಯ ಹೆಸರು ಡಿಂಪಲ್ ಹಾಗೂ ಇವರ ತಮ್ಮನ ಹೆಸರು ವಿನಯ್

 

 

ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿರವರದ್ದು ಪ್ರೇಮ ವಿವಾಹವಾಗಿದ್ದು ಕಾಮನ್ ಫ್ರೆಂಡ್ ಮೂಲಕ ಅಶ್ವಿನಿರವರಿಗೆ ಪುನೀತ್ ರಾಜಕುಮಾರ್ ಪರಿಚಯವಾಗುತ್ತದೆ. ಪರಿಚಯ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದರು ನಂತರ ಪುನೀತ್ ರವರ ಮನೆಯಲ್ಲಿ ಒಪ್ಪುಗೆ ಸಿಕ್ಕು ಅಶ್ವಿನಿರವರ ಮನೆಯಲ್ಲಿ ಒಪ್ಪಿಸಲು ಸ್ವಲ್ಪ ಕಷ್ಟವಾಗಿತ್ತಂತೆ. ತದನಂತರ ಅಪ್ಪು ಇಬ್ಬರ ಮನೆಯಲ್ಲೂ ಒಪ್ಪಿಗೆಯನ್ನು ಪಡೆದು 1999 ಡಿಸೆಂಬರ್ ಒಂದರಲ್ಲಿ ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರು ವಿವಾಹವಾಗಿದ್ದರು. ಇವರ ಮದುವೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಒಂದು ಕಲ್ಯಾಣಮಂಟಪದಲ್ಲಿ ನಡೆದಿತ್ತು.

 

 

ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರು ಅನ್ಯೋನ್ಯತೆಯಿಂದ ಜೀವಿಸಿದವರು ಕನ್ನಡ ಸಿನಿ ರಂಗದಲ್ಲಿ ಸ್ಟಾರ್ ಜೋಡಿ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಇವರು ಪ್ರೀತಿಸಿ ಮದುವೆಯಾಗಿದ್ದರು ಕೂಡ ಎಂದಿಗೂ ಒಂದು ಕಲಹವನ್ನು ಮಾಡಿಕೊಳ್ಳದೆ ತುಂಬಾ ಸುಂದರವಾಗಿ ಪತಿ ಹಾಗೂ ಪತ್ನಿ ಪ್ರೀತಿಯಿಂದ ಜೀವಿಸುತ್ತಿದ್ದರು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡ ಮಗಳು ಧೃತಿ ಅಮೇರಿಕಾದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಹಾಗೂ ಚಿಕ್ಕ ಮಗಳು ವಂದಿತ ಬೆಂಗಳೂರಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ.

1 Comment

Leave a Reply

Your email address will not be published.


*