ಕನ್ನಡ ಚಿತ್ರರಂಗದ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದೀಗ ನೆನಪು ಮಾತ್ರ ಅವರು ನಮ್ಮನ್ನೆಲ್ಲ ಆಗಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಉರುಳಿ ಹೋಯಿತು ಆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಹಲವಾರು ಸಹಾಯಗಳ ಮೂಲಕ ತಾವು ಮಾಡಿದ ದಾನ ಧರ್ಮದ ಮೂಲಕ ಇಂದಿಗೂ ಕೂಡ ಜನರ ಬಾಯಲ್ಲಿ ಬದುಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಬ್ಬ ಮೇರು ವ್ಯಕ್ತಿತ್ವದ ನಟನಾಗಿದ್ದು ಯಾವುದೇ ಜಂಬವಿಲ್ಲದೆ ಎಲ್ಲರ ಬಳಿಯು ಒಂದೇ ರೀತಿ ನಡೆದುಕೊಳ್ಳುತ್ತಿದ್ದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಅವರ ಹೆಂಡತಿ ಅಶ್ವಿನಿ ಪುನೀತ್ ಹಾಗೂ ಮಕ್ಕಳನ್ನು ಕೂಡ ಅಗಲಿದ್ದಾರೆ.

 

 

ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್ ರವರನ್ನು ನೆನಪಿಸಿಕೊಳ್ಳದಂತಹ ವ್ಯಕ್ತಿಗಳು ಯಾರು ಇಲ್ಲ ಎಲ್ಲರೂ ಕೂಡ ಅವರ ಅಭಿಮಾನಿಗಳೇ, ಇದೀಗ ಅವರ ಅಭಿಮಾನಿಗಳ ಪಾಲಿಗೆ ಅಪ್ಪು ದೇವರಾಗಿ ಎಲ್ಲರ ಮನೆಯ ಗೋಡೆಯ ಮೇಲೆ ಫೋಟೋ ಆಗಿಬಿಟ್ಟಿದ್ದಾರೆ. ಆ ಫೋಟೋಗೆ ದಿನಾಲು ಹಾರ ಹಾಕಿ ಬಟ್ಟನ್ನು ಇಟ್ಟು ಎಷ್ಟು ಅಭಿಮಾನಿಗಳು ಪೂಜೆಯನ್ನು ಕೂಡ ಮಾಡುತ್ತಾರೆ. ಡಾಕ್ಟರ್ ರಾಜಕುಮಾರ್ ಕುಡಿಯಾಗಿದ್ದ ಅಪ್ಪು ರವರು ಇದೀಗ ತಮ್ಮ ಅಭಿಮಾನಿಗಳನ್ನು ಹಾಗೂ ಅವರ ಪರಿವಾರವನ್ನು ದೈಹಿಕವಾಗಿ ಅಗಲಿದ್ದು ಅವರು ತಮ್ಮ ನಟನೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

 

 

ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ ಅವರು ತಮ್ಮ ಅಭಿಮಾನಿಗಳಿಗೆ ಮೊದಲು ನಿಮ್ಮ ಕುಟುಂಬವನ್ನು ಪ್ರೀತಿಸಿ ನಂತರ ನನ್ನನ್ನು ಪ್ರೀತಿಸಿ ಎಂದು ಹೇಳುತ್ತಿದ್ದರು ಅಶ್ವಿನಿ ಹಾಗೂ ಪುನೀತ್ ಪ್ರೀತಿಸಿ ಮದುವೆಯಾದವರು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬುದು ಕೂಡ ನಮಗೆ ಗೊತ್ತೇ ಇದೆ. ಅಶ್ವಿನಿ ಪುನೀತ್ ಅಪ್ಪು ಮರಣದ ನಂತರ ಪಿ ಆರ್ ಕೆ ಪ್ರೊಡಕ್ಷನ್ ನ ಎಲ್ಲಾ ಕೆಲಸಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವ 60 ಜನರಿಗೆ ಸಂಬಳ ನೀಡುವ ಜವಾಬ್ದಾರಿಯು ಕೂಡ ಅವರ ಹೆಗಲ ಮೇಲೆ ಇದೆ.

 

 

ಅಪ್ಪು ಹೆಣ್ಣು ಮಕ್ಕಳು ಕೂಡ ತಾನೇ ಸ್ಟಾರ್ ನಟನ ಮಗಳು ಎಂದು ಅಹಂಕಾರ ತೋರುವುದಿಲ್ಲ ಅಪ್ಪನಂತೆ ಸರಳತೆಯಿಂದ ಬೆಳದಿದ್ದಾರೆ. ಸಾರ್ವಜನಿಕವಾಗಿ ಕೂಡ ಎಂದು ಕಾಣಿಸುವುದಿಲ್ಲ ತಂದೆಯ ಜೊತೆ ಸ್ನೇಹಿತರಂತೆ ಇದ್ದರು ದೃತಿ ಹಾಗೂ ವಂದಿತಾ ಇಬ್ಬರೂ ಕೂಡ ಅನ್ಯೋನ್ಯತೆಯಿಂದ ಬೆಳೆಯುತ್ತಿದ್ದಾರೆ. ಇದೀಗ ಅಪ್ಪು ಹಿರಿಯ ಮಗಳು ನಿರುತಿ ಕೂಡ ಅಪ್ಪನ ಹಾದಿಯಲ್ಲಿ ನಡೆಯುತ್ತಿದ್ದಾಳೆ.

 

 

ಇಷ್ಟು ಚಿಕ್ಕ ವಯಸ್ಸಿಗೆ ನೇತ್ರದಾನ ವಿಚಾರವಾಗಿ ರೋಟರಿ ಕ್ಲಬ್ ಗೆ ಪುನೀತ್ ರಾಜಕುಮಾರ್ ರವರ ಹಿರಿಯ ಮಗಳು ಧೃತಿ ಬೆಂಬಲ ಸೂಚಿಸಿದ್ದಾರೆ. ತಾನು ವಿದೇಶದಲ್ಲಿ ಓದುತ್ತಿದ್ದರು ಮನೆಯಲ್ಲಿ ಹಣವನ್ನು ಪಡೆದುಕೊಳ್ಳದೆ ತನ್ನ ಸ್ವಂತ ಸ್ಕಾಲರ್ಶಿಪ್ ಹಣದಿಂದ ಓದುತ್ತಿದ್ದಾರೆ. ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆಯುವುದು ಎಂದರೆ ತುಂಬಾ ಸುಲಭದ ಮಾತಲ್ಲ.

 

 

ತಾವು ಓದುತ್ತಿದ್ದ ಶಾಲೆಯಲ್ಲಿ 85 ರಿಂದ 90 ಪರ್ಸೆಂಟ್ ಅಂಕವನ್ನು ಪಡೆದು ಈ ದೇಶದ ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಯಲ್ಲಿ ಕೂಡ 95% ಅಂಕವನ್ನು ಪಡೆದರೆ ಮಾತ್ರ ಸ್ಕಾಲರ್ಶಿಪ್ ನೀಡುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರೂ ಅದರಲ್ಲಿ 500 ವಿದ್ಯಾರ್ಥಿಗಳು ಮಾತ್ರ ಸ್ಕಾಲರ್ಶಿಪ್ ಪಡೆದುಕೊಳ್ಳುತ್ತಾರೆ. ಹಾಗೆಯೇ ದೃತಿ ಕೂಡ ತನ್ನ ಸ್ಕಾಲರ್ಶಿಪ್ ಹಣದಿಂದ ತನ್ನ ಜ್ಞಾನದಿಂದ ಓದುತ್ತಿದ್ದಾರೆ.

 

 

ಅದೇ ರೀತಿ ಅಪ್ಪು ಎರಡನೇ ಮಗಳು ಹೊಂದಿದ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದಾರೆ. ವಂದಿತಾ ರವರ ಶಾಲೆಯ ಕಾರ್ಯಕ್ರಮಕ್ಕೆ ಅಶ್ವಿನಿ ಒಮ್ಮೆ ಹೋಗಿದ್ದರು ಈ ವೇಳೆ ಡಾಕ್ಟರ್ ರಾಜಕುಮಾರ್ ಬಗ್ಗೆ ಮಾತನಾಡಿ ಅವರಿಗೆ ಶಾಲು ಓದಿಸಿ ಸನ್ಮಾನ ಮಾಡಿದ್ದಾರೆ. ವಂದಿತಾ ಕೂಡ ನಾನು ಪ್ರತಿವರ್ಷ ಕಾರ್ಯಕ್ರಮಕ್ಕೆ ಅಪ್ಪನನ್ನು ಕರೆದುಕೊಂಡು ಬರುತ್ತಿದ್ದೆ ಈ ವರ್ಷ ಅವರು ನಮ್ಮ ಜೊತೆ ಇಲ್ಲ ಎಂದು ಭಾವುಕರಾಗಿದ್ದಾರೆ.

Leave a comment

Your email address will not be published. Required fields are marked *