ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ಖುದ್ದಾಗಿ ರಾಕಿಂಗ್ ಸ್ಟಾರ್ ಯಶ್ ರವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಯಶ್ ರವರ ಬಳಿ ಅಶ್ವಿನಿ ಪುನೀತ್ ಏನು ಮಾತನಾಡಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಯಶ್ ರವರ ಹುಟ್ಟುಹಬ್ಬದ ದಿನ ಅಪ್ಪು ಬದುಕಿದ್ದರೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದರು.
ಅಷ್ಟೇ ಅಲ್ಲದೆ ಅಪ್ಪು ಯಶ್ ರವರಿಗೆ ಕಾಲ್ ಮಾಡಿ ವಿಶ್ ಕೂಡ ಮಾಡುತ್ತಿದ್ದರು ಇದೀಗ ಅಪ್ಪು ಪರವಾಗಿ ಅಶ್ವಿನಿ ಮೇಡಂ ರಾಕಿಂಗ್ ಸ್ಟಾರ್ ಯಶ್ ರವರಿಗೆ ಕರೆ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ರವರ ಯೋಗಕ್ಷೇಮವನ್ನು ಕೂಡ ವಿಚಾರಿಸಿ ರಾಧಿಕಾ ಪಂಡಿತ್ ಜೊತೆ ಕೂಡ ಮಾತನಾಡಿದ್ದಾರೆ.
ಅಶ್ವಿನಿ ಮೇಡಂ ಕರೆ ಮಾಡಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಖುಷಿ ಪಟ್ಟಿದ್ದಾರೆ. ಚೆನ್ನಾಗಿ ಮಾತನಾಡಿದ್ದಾರೆ. ಅಪ್ಪು ಮತ್ತು ರಾಕಿಂಗ್ ಸ್ಟಾರ್ ಯಶ್ ಬಹಳಷ್ಟು ವೇದಿಕೆಗಳನ್ನು ಹಂಚಿಕೊಂಡಿದ್ದರು ಟಗರು ಸಿನಿಮಾ ಪ್ರೆಸ್ ಮೀಟ್ ನಲ್ಲೂ ಕೂಡ ಯಶ್ ರವರ ಜೊತೆ ಅಪ್ಪು ಕೂಡ ಇದ್ದರು ಅಷ್ಟೇ ಅಲ್ಲದೆ ಶಿವಣ್ಣ ಕೂಡ ಜೊತೆಗಿದ್ದರು ಟಗರು ಸಿನಿಮಾದ ಕಾರ್ಯಕ್ರಮದಲ್ಲಿ ಒಟ್ಟಿಗೆ ಡಾನ್ಸ್ ಕೂಡ ಮಾಡಿದ್ದರು.
ಸಾಕಷ್ಟು ಕಾರ್ಯಕ್ರಮಗಳಲ್ಲಿ ಯಶ್ ಮತ್ತು ಅಪ್ಪು ಒಟ್ಟಿಗೆ ಕಾಣಿಸಿಕೊಂಡಿದ್ದರು ಇವರಿಬ್ಬರ ನಡುವೆ ಉತ್ತಮವಾದ ಸ್ನೇಹವಿತ್ತು ಇನ್ನು ಅಪ್ಪುರವರನ್ನು ಕಂಡರೆ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅಷ್ಟೇ ಪ್ರೀತಿ ಮತ್ತು ಗೌರವ ಇತ್ತು ಎಲ್ಲಿ ಹೋದರು ಕೂಡ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದರು.
ಆಗಾಗ ಕರೆ ಮಾಡಿ ಇಬ್ಬರು ಮಾತನಾಡುತ್ತಿದ್ದರು ವರ್ಕೌಟ್ ಅಷ್ಟೇ ಅಲ್ಲದೆ ಬೇರೆ ಬೇರೆ ಮಾಹಿತಿಯ ಕುರಿತಾಗಿ ಚರ್ಚೆಯನ್ನು ನಡೆಸುತ್ತಿದ್ದರು ಸಿನಿಮಾದ ಬಗ್ಗೆ ಕೂಡ ಇವರಿಬ್ಬರು ಚರ್ಚಿಸುತ್ತಿದ್ದರು ಯಶ್ ಅಭಿನಯದ ಕೆಜಿಎಫ್ ಚಿತ್ರ ಹಿಟ್ ಆದಾಗಲೂ ಕೂಡ ಪುನೀತ್ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದರು ಹೀಗೆ ಇವರಿಬ್ಬರ ನಡುವೆ ಉತ್ತಮವಾದ ಒಡನಾಟ ಇತ್ತು ಈಗಲೂ ಕೂಡ ಯಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಶ್ವಿನಿ ಮೇಡಂ ರಾಕಿಂಗ್ ಸ್ಟಾರ್ ಯಶ್ ರವರಿಗೆ ಕರೆ ಮಾಡಿ ಶುಭಾಶಯಗಳು ಎಂದು ತಿಳಿಸಿದ್ದಾರೆ.