ಸೂಪರ್ ಸ್ಟಾರ್ ಜೆಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರುಂಧತಿ ನಕ್ಷತ್ರ ಎನ್ನುವ ಧಾರಾವಾಹಿಯ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಇವರು ಹೆಸರಿಗೆ ತಕ್ಕ ಹಾಗೆ ಸೂಪರ್ ಸ್ಟಾರ್ ಆಗಿದ್ದಾರೆ. ಇವರು ತಮ್ಮ ಬಾಡಿಯನ್ನು ಸೂಪರ್ ಆಗಿ ಫಿಟ್ಟಾಗಿ ಇಟ್ಟುಕೊಂಡಿದ್ದು ಜೆಕೆ ಗೆ ಜಿಮ್ಮೆಂದರೆ ತುಂಬಾ ಇಷ್ಟ. ಸೂಪರ್ ಸ್ಟಾರ್ ಜೇಕೆ ತಮ್ಮ ವರ್ಕೌಟ್ ಹಾಗೂ ಬಾಡಿ ಫಿಟ್ನೆಸ್ ಇಂದ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.ಇತ್ತೀಚೆಗಷ್ಟೇ ನಟ ಜೆಕೆ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದೀಗ ಜೆಕೆ ತಮ್ಮ ಭಾವಿ ಪತ್ನಿ ಜೊತೆ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

ಸೂಪರ್ ಸ್ಟಾರ್ ಜೆಕೆ ರವರು ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದು ಇವರು ಇನ್ನು ವಿವಾಹವಾಗಿಲ್ಲ. ಇವರು ಹಲವಾರು ಹುಡುಗಿಯರ ಹಾಟ್ ಫೇವರೆಟ್ ಆಗಿದ್ದರೂ ಇತ್ತೀಚೆಗಷ್ಟೆ ಸೂಪರ್ ಸ್ಟಾರ್ ಜೆಕೆ ತಾವು ಕಮಿಟ್ ಆಗಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. 43 ವರ್ಷ ವಯಸ್ಸಾಗಿರುವ ಸೂಪರ್ ಸ್ಟಾರ್ ಜೆಕೆರವರು ಒಬ್ಬ ಸುಂದರಿಯನ್ನೇ ಇಷ್ಟಪಟ್ಟಿದ್ದಾರೆ. ಅವರು ಕೂಡ ಜೆಕೆ ರೀತಿ ಫಿಟ್ನೆಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.ಹಾಗೆಯೇ ಮಾಡೆಲಿಂಗ್ ಕ್ಷೇತ್ರದಲ್ಲು ಹೆಸರು ಮಾಡಿದ್ದಾರೆ.

 

 

ಸೂಪರ್ ಸ್ಟಾರ್ ಜೆಕೆ ವಿವಾಹವಾಗುತ್ತಿರುವ ಹುಡುಗಿಯ ಹೆಸರು ಅಪರ್ಣ ಎಂದಾಗಿದ್ದು ಇವರು ಶೀಘ್ರದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೆಕೆ ರವರು ಪೂರ್ಣ ಹೆಸರು ಜಯರಾಮ್ ಕಾರ್ತಿಕ್ ಆಗಿದ್ದು ಇವರು ಕನ್ನಡದ ಕಿರುತೆರೆಯಲ್ಲಿ ಮೊದಲಿಗೆ ಅಶ್ವಿನಿ ನಕ್ಷತ್ರ ಎನ್ನುವ ಧಾರಾವಾಹಿಯಲ್ಲಿ ಮಯೂರಿರವರ ಜೊತೆ ತೆರೆ ಹಂಚಿಕೊಂಡಿದ್ದರು ಈ ಧಾರವಾಹಿಯ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದರು.

 

 

ತದನಂತರ ನಟ ಚಂದನ್ ,ಚಿಕ್ಕಣ್ಣ ಇತರರೊಂದಿಗೆ ಬೆಂಗಳೂರು 5600 ಎನ್ನುವ ಚಿತ್ರದಲ್ಲೂ ಕೂಡ ಕಾಣಿಸಿಕೊಂಡು ಸ್ಯಾಂಡಲ್ ಹುಡ್ ಗೆ ಎಂಟ್ರಿ ಕೊಟ್ಟರು ಇವರಿಗೆ ಇದೀಗ ಹೆಚ್ಚು ಆಫರ್ಸ್ ಗಳು ಸ್ಯಾಂಡಲ್ವುಡ್ನಿಂದ ಬರುತ್ತಿದ್ದು ಒಳ್ಳೆಯ ಪಾತ್ರಗಳನ್ನು ಆರಿಸಿ ಇವರು ಅಭಿನಯಿಸುತ್ತಿದ್ದಾರೆ.

 

 

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಜೆಕೆ ಬಾಲಿವುಡ್ ಗು ಕೂಡ ಎಂಟ್ರಿ ಕೊಟ್ಟು “ರಾವಣ” ಪಾತ್ರವನ್ನು ಮಾಡಿದ್ದಾರೆ. ಜಿಮ್ ಅನ್ನು ಇಷ್ಟಪಡುವ ಜೆಕೆ ತಮ್ಮ ಬಾಡಿಯನ್ನು ಫಿಟ್ನೆಸ್ ಮಾಡಿದ್ದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ತಮ್ಮ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

 

 

ಸೂಪರ್ ಸ್ಟಾರ್ ಜೆಕೆ ರವರು ಇದೀಗ ತಮ್ಮ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಪರ್ಣ ಎನ್ನುವವರನ್ನು ಜೆಕೆ ಪ್ರೀತಿಸುತ್ತಿದ್ದು ಅವರೊಂದಿಗೆ ವಿವಾಹವಾಗುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನು ಹರಿಸಿದ್ದಾರೆ.

 

 

ಜೆಕೆ ಫ್ರಿ ಇದ್ದಾಗಲೆಲ್ಲಾ ಹೊಸ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗೆ ಬಾವಿ ಪತ್ನಿ ಜೊತೆ ಸುತ್ತಾಡುತ್ತಾರೆ. ತಮ್ಮ ವರ್ಕೌಟ್ ಗಳ ಮೂಲಕ ಸೂಪರ್ ಸ್ಟಾರ್ ಜೆಕೆ ಸಾಕಷ್ಟು ಯುವಕರಿಗೆ ಇನ್ಸ್ಪೇರ್ ಆಗಿದ್ದಾರೆ. ಸೂಪರ್ ಸ್ಟಾರ್ ಜೆಕೆ ದಿನದ ಹಲವಾರು ಗಂಟೆಗಳು ವರ್ಕೌಟ್ ಮಾಡುತ್ತಲೇ ಕಳೆಯುತ್ತಾರೆ. ಜೆಕೆ ಲವ್ ಮಾಡುತ್ತಿರುವ ಹುಡುಗಿ ಹೆಸರು ಅಪರ್ಣ ಎಂಬುದಾಗಿದ್ದು ಅವರು ಕೂಡ ವರ್ಕೌಟ್ ಬಾಡಿ ಫಿಟ್ನೆಸ್ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರನ್ನು ಮಾಡಿದ್ದಾರೆ. ಸದಾ ಒಟ್ಟಿಗೆ ಸುತ್ತಾಡುತ್ತಾರೆ ಶಾಪಿಂಗ್ ಮಾಡುತ್ತಾರೆ ಒಟ್ಟಿಗೆ ಇರುತ್ತಾರೆ.

Leave a comment

Your email address will not be published. Required fields are marked *