ಕಳೆದ ವಾರವಷ್ಟೇ ಡಿ ಬಾಸ್ ದರ್ಶನ್(D boss) ತಮ್ಮ ಕ್ರಾಂತಿ ಸಿನಿಮಾದ “ಬೊಂಬೆ ಬೊಂಬೆ” ಹಾಡನ್ನು ರಿಲೀಸ್ ಮಾಡಲು ಹೊಸಪೇಟೆಗೆ ಹೋಗಿರುವ ಸಮಯದಲ್ಲಿ ಕಿಡಿಗೇಡಿಗಳು ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿಯನ್ನು (hospet incident)ಎಸೆದಿದ್ದಾರೆ. ಈ ವಿಚಾರವೂ ಎಲ್ಲರಿಗೂ ಕೂಡ ತಿಳಿದೇ ಇದೆ. ಇದೀಗಾಗಲೇ ಈ ಘಟನೆಯನ್ನು ಖಂಡಿಸಿ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ರಾಜಕೀಯ ನಾಯಕರು (polititions)ಕೂಡ ದರ್ಶನ್ ಗೆ ಬೆಂಬಲವನ್ನು ಸೂಚಿಸಿದ್ದಾರೆ. ಈ ವಿಚಾರ ತೆಗೆದು ಅಶ್ವಿನಿ ಪುನೀತ್ ಕುಮಾರ್ ಬೆಂಬಲವನ್ನು ಸೂಚಿಸಿ ಮರುಕವನ್ನು ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಕೂಡ ಡಿ ಬಾಸ್ ಪರವಾಗಿ ದ್ವನಿ ಎತ್ತಿದ್ದಾರೆ. ವಿಡಿಯೋ ಮೂಲಕ ಬೆಂಬಲವನ್ನು ಸೂಚಿಸಿ ದರ್ಶನ್ ರವರಿಗೆ ಈ ರೀತಿ ಅವಮಾನ ಆಗಬಾರದಿತ್ತು ಆದರೆ ಆಗಿದೆ ಈ ರೀತಿ ಅಭಿಮಾನಿಗಳು ಮಾಡುವುದು ತಪ್ಪು ಯಾವುದೇ ಒಬ್ಬ ನಟನೆಗೆ ಈ ರೀತಿ ಅವಮಾನವನ್ನು ಮಾಡಬಾರದು ಹೊಸಪೇಟೆಯಲ್ಲಿ ಆದ ಘಟನೆಯನ್ನು ಮಾಡಿರುವ ಕಿಡಿಗೇಡಿ ಯ ಬಗ್ಗೆ ವಿಚಾರಿಸಿ ಅವನಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದರ್ಶನ್ ರವರ ಹೊಸಪೇಟೆಯ ಸಂದರ್ಭವನ್ನು ಕುರಿತು ಹಲವಾರು ಸ್ಟಾರ್ ನಟ ನಟಿಯರು ಕೂಡ ಬೆಂಬಲವನ್ನು ಸೂಚಿಸಿ ವಿಡಿಯೋ ಮಾಡಿದ್ದಾರೆ ಇದೀಗ ಪುನೀತ್ ರವರ ಪತ್ನಿ ಅಶ್ವಿನಿ ಕೂಡ ವಿಡಿಯೋ ಮಾಡಿದ ದರ್ಶನ್ ರವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ಅಶ್ವಿನಿ ರವರು ಡಿ ಬಾಸ್ ಮನೆಗೆ ಕೂಡ ಬೇಟಿ ಕೊಟ್ಟು ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಡಿ ಬಾಸ್ ರವರಿಗೂ ಕೂಡ ಈ ವಿಚಾರವಾಗಿ ಸ್ವಲ್ಪ ಮಟ್ಟಿಗೆ ಬೇಸರವಿದ್ದು ಅಂದು ಸ್ಟೇಜ್ ಮೇಲೆ ದರ್ಶನ್ ಮೇಲೆ ಚಪ್ಪಲಿ ಎಸೆದವರ ಬಗ್ಗೆ ಸಾವಧಾನದಿಂದ ಉತ್ತರಿಸಿದ್ದಾರೆ. ಪರವಾಗಿಲ್ಲ ಚಿನ್ನ ಇಂಥ ಸಂದರ್ಭಗಳನ್ನು ನನ್ನ ಜೀವನದಲ್ಲಿ ತುಂಬಾ ನೋಡಿದ್ದೇನೆ ಅದರಲ್ಲಿ ಇದು ಕೂಡ ಒಂದು ಎಂದು ದರ್ಶನ್ ಹೇಳಿ ಅಲ್ಲಿಂದ ಹೊರಟು ಹೋಗಿದ್ದರು.
ಸಾರ್ವಜನಿಕವಾಗಿ ಈ ಘಟನೆ ನಡೆದಿದ್ದು ಇದರ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು ಪೊಲೀಸರು ಕೂಡ ತನಿಖೆಯನ್ನು ಆರಂಭಿಸಿದ್ದರು ದರ್ಶನ್ ರವರ ಅಭಿಮಾನಿಗಳು ಈ ಘಟನೆಯನ್ನು ನೋಡಿ ಸಿಕ್ಕಾಪಟ್ಟೆ ಕೋಪದಲ್ಲಿದ್ದರು ಆಗ ಪೊಲೀಸರು ಅವರನ್ನೆಲ್ಲ ಕಂಟ್ರೋಲ್ ಮಾಡಿ ಸಮಾಧಾನ ಪಡಿಸಿದರು.
ಕ್ರಾಂತಿ ಚಿತ್ರದ ಹಾಡಿನ ರಿಲೀಸ್ ಕಾರ್ಯಕ್ರಮವು ತುಂಬಾ ಅದ್ದೂರಿಯಾಗಿ ನಡೆಯುತ್ತಿತ್ತು ಆದರೆ ಇಂತಹ ಸಂತೋಷದ ಸಂದರ್ಭದಲ್ಲಿ ಈ ರೀತಿ ಕೆಟ್ಟ ಘಟನೆ ನಡೆದಿದ್ದು ಎಲ್ಲರ ಮನಸಿಗೂ ತುಂಬಾ ಬೇಸರವನ್ನು ಉಂಟುಮಾಡಿದೆ. ಆತನು ಅಪ್ಪು ಅಭಿಮಾನಿ ಎಂದು ಹೇಳಿ ದರ್ಶನ್ ಮೇಲೆ ಚಪ್ಪಲಿಗೆ ಎಸೆದಿದ್ದಾನೆ ಅಭಿಮಾನಿ ಯಾದವನು ಈ ರೀತಿ ಮಾಡುವುದಿಲ್ಲ ಅಪ್ಪು ಪತ್ನಿ ಅಶ್ವಿನಿ ಕೂಡ ಈ ಸಂದರ್ಭದಲ್ಲಿ ಕುರಿತು ಕ್ರಮವನ್ನು ಜರುಗಿಸುವುದಾಗಿ ತಿಳಿಸಿದ್ದಾರೆ ಈ ರೀತಿಯ ಕೃತ್ಯ ಮಾಡಿದವನಿಗೆ ಶಿಕ್ಷೆಯಾಗಬೇಕು ಎಂದು ಹೇಳಿಕೆಯನ್ನು ಕೊಟ್ಟು ದರ್ಶನ್ ರವರಿಗೆ ಬೆಂಬಲವನ್ನು ಸೂಚಿಸಿದ್ದಾರೆ.