Ashika Ranganath: ಬೀಚ್ ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಆಶಿಕಾ ರಂಗನಾಥ್..

Ashika Ranganath: ಸ್ಯಾಂಡಲ್ ವುಡ್ ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath)ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ವಿವಿಧ ಫೋಟೋಶೂಟ್(Photoshoot) ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಜಾಗವನ್ನು ಪಡೆಯುತ್ತವೆ. ಅವರ ಹೊಸ ಚಿತ್ರಗಳಿಗಾಗಿ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

 

 

ಈ ಸುಂದರಿ ತನ್ನ ವಿಭಿನ್ನ ಫ್ಯಾಷನ್ ಸೆನ್ಸ್ ಅನ್ನು ಫೋಟೋಗಳ ಮೂಲಕ ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 1.9 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳಿಸಿರುವ ಬೆಡಗಿ ಇದುವರೆಗೆ 700ಕ್ಕೂ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ಸುಂದರ ಹಾಗೂ ನೀಟಾಗಿ ಬಟ್ಟೆ ಧರಿಸಿ ಸೌಂದರ್ಯ ಹೆಚ್ಚಿಸಿಕೊಂಡು ಅಭಿಮಾನಿಗಳ ನಿದ್ದೆ ಕದಿಯುತ್ತಿದ್ದಾರೆ.

 

 

ಆದರೆ ಈ ಬಾರಿ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡು ಬೀಚ್‌ನಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ತನ್ನ ಮಿಡಿಯನ್ನು ತೋರಿಸುವ ಮೂಲಕ ಮಾದಕ ಲುಕ್ ನೀಡಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಶಿಕಾ ಫೋಟೋ ಶೂಟ್ ಹಿಂದೆ ಏನು ಕಾರಣ ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ.

 

 

ಸದಾ ಬಬ್ಲಿ ಹಾಗೂ ಸಾಂಪ್ರದಾಯಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚುಟು ಚುಟು ಬೆಡಗಿ ಇದೀಗ ‘ಕಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಒಳ್ಳೆಯ ಕಥೆ ಮತ್ತು ವಿಭಿನ್ನ ಶೈಲಿಯ ಸಿನಿಮಾ ನಿರೀಕ್ಷೆ ಇದೆ.

 

 

ಹುಡುಗಿಯರು ಮಾಡ್ ಆಗೋದು ತಪ್ಪು ಎಂಬ ಸಂದೇಶ ಸಾರುವ ಪಾತ್ರದಲ್ಲಿ ಆಶಿಕಾ ನಟಿಸಿದ್ದು, ಶೂಟಿಂಗ್ ಗಾಗಿ ಬೀಚ್ ನಲ್ಲಿ ಬಿಯರ್ ಹಿಡಿದು ನಿಂತಿದ್ದಾರೆ ನಟಿ. ಸುಮಾರು 22 ದಿನಗಳ ಕಾಲ ಬ್ಯಾಂಕಾಕ್ ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಈಗಾಗಲೇ ಒಂದು ವಾರಕ್ಕೂ ಹೆಚ್ಚು ಕಾಲ ಆಶಿಕಾ ಭಾಗದ ಚಿತ್ರೀಕರಣ ನಡೆದಿದೆ.

 

 

ಇಡೀ ಸಿನಿಮಾದಲ್ಲಿ ಫುಲ್ ಬಾಟಲ್ ಬಿಯರ್ ಹಿಡಿದು ಜನರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬುವ ಪಾತ್ರ ಆಶಿಕಾ ರಂಗನಾಥ್ ಅವರದ್ದು. ಈ ನಟಿ ಬಾಟಲ್ ಹಿಡಿದಿರುವ ಫೋಟೋ  ವೈರಲ್ ಆಗಿದೆ.

Leave a Comment