ಚಿಕ್ಕಣ್ಣನ ಕೈಹಿಡಿದ ಅಧ್ಯಕ್ಷ ಸಿನಿಮಾದ ನಟಿ ಉಡುಪಿಯಲ್ಲಿ ಅದ್ದೂರಿ ಮದುವೆಗೆ ಕ್ಷಣ ಗಣನೆ.?

ಚಿತ್ರರಂಗ ಮಾತ್ರವಲ್ಲದೆ ಯಾವುದೇ ನಾಟಕ ಅಥವಾ ಕಾರ್ಯಕ್ರಮಗಳು ಇದ್ದಲ್ಲಿ ಅವುಗಳಿಗೆಲ್ಲ ಹಾಸ್ಯ ತುಂಬಾ ಮುಖ್ಯವಾದ ಉಡುಗೆಯಾಗಿ ಮಾರ್ಪಟ್ಟಿರುತ್ತದೆ. ಯಾವುದೇ ಸಿನಿಮಾಗಳನ್ನು ಚಿತ್ರಿಕರಿಸಬೇಕಾದರೂ ಕೂಡ ಹಾಸ್ಯವೆಂಬುದು ಇರಲೇಬೇಕು ಹಾಸ್ಯವಿಲ್ಲದ ಸಿನಿಮಾವನ್ನು ನೋಡುವ ಪ್ರೇಕ್ಷಕರಿಗೆ ಇದೊಂದು ನೀರಸ ಸಿನಿಮಾ ಎಂದೆನಿಸಿಬಿಡುತ್ತದೆ. ಹಾಸ್ಯವೆನ್ನುವುದು ಪ್ರತಿಯೊಬ್ಬ ಜೀವಿಯ ಅವಿಭಾಜ್ಯ ಅಂಗವಾಗಿದೆ. ನಗುವಿದ್ದರೆ ಎಲ್ಲಾ ಅನಾರೋಗ್ಯವನ್ನು ದೂರ ಕಳುಹಿಸಬಹುದು ಹಾಗಾಗಿ ಎಲ್ಲರೂ ಹಾಸ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.

 

 

ಕನ್ನಡ ಸಿನಿ ರಂಗದಲ್ಲಿ ಹಾಸ್ಯ ನಟ ಸಾಧು ಕೋಕಿಲ ರವರನ್ನು ಬಿಟ್ಟರೆ ತದನಂತರದ ಸ್ಥಾನದಲ್ಲಿ ಚಿಕ್ಕಣ್ಣ ರವರು ಇದ್ದಾರೆ. ಮೊದಮೊದಲು ಗಾರೆ ಕೆಲಸ ಮಾಡಿಕೊಂಡಿದ್ದ ಹಾಸ್ಯ ನಟ ಚಿಕ್ಕಣ್ಣ ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಇವರು ಹಲವಾರು ಸಂದರ್ಶನಗಳಲ್ಲಿ ಈಗಲೂ ನನಗೆ ಗಾರೆ ಕೆಲಸ ಮಾಡುವುದೇ ಇಷ್ಟ ಎಂದು ಹೇಳುತ್ತಿದ್ದಾರೆ. ಚಿಕ್ಕಣ್ಣನ ಅಭಿಮಾನಿಗಳು ಚಿಕ್ಕಣ್ಣ ಎಲ್ಲೇ ಹೋದರು ಕೂಡ ನಿಮ್ಮ ಮದುವೆಯಾವಾಗ ಎನ್ನುವ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

 

ಸದ್ಯ ಇದಕ್ಕೆಲ್ಲ ನಟ ಚಿಕ್ಕಣ್ಣ ರವರು ತೆರೆ ಎಳೆದಿದ್ದು ತಾವು ಮದುವೆಯಾಗುವ ವಿಷಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹಾಗೆ ಚಿಕ್ಕಣ್ಣ ಮದುವೆಯಾಗುತ್ತಿರುವ ಹುಡುಗಿಯ ಬಗ್ಗೆ ಕೂಡ ವಿವರವನ್ನು ನೀಡಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಕರೋನದಿಂದ ಎರಡು ವರ್ಷಗಳ ಕಾಲ ಬೇಸತ್ತು ತಮ್ಮ ತೋಟದಲ್ಲಿ ಕೆಲಸವನ್ನು ಮಾಡಿಕೊಂಡು ಹಾಗೂ ಗಾರೆ ಕೆಲಸವನ್ನು ಕೂಡ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಇವರು ಕರೋನಾ ಸಮಯದಲ್ಲಿ ತೋಟದ ಕೆಲಸವನ್ನು ಮಾಡಿಕೊಂಡು ಹಾಗೆಯೇ ಗಾರೆ ಕೆಲಸವನ್ನು ಮಾಡಿಕೊಂಡು ಇದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿದ್ದವು.

 

 

ಈ ಹಿಂದೆ ನಟ ಚಿಕ್ಕಣ್ಣ ಆಂಕರ್ ಅನುಶ್ರೀ ಅವರ ಜೊತೆ ವಿವಾಹವಾಗುತ್ತಾರೆ. ಎನ್ನುವ ವದಂತಿಗಳು ಕೂಡ ಹಬ್ಬಿದವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಚಿಕ್ಕಣ್ಣ ತದನಂತರ ಹಲವಾರು ಸಿನಿಮಾಗಳಲ್ಲಿ ಮೊದಲಿನಂತೆ ನಟಿಸ ತೊಡಗಿದರು. ಆದರೆ ಈಗ ಹಾಸ್ಯ ನಟ ಚಿಕ್ಕಣ್ಣ ಮದುವೆಯಾಗುತ್ತಿರುವ ಹುಡುಗಿಯ ವಿವರಗಳು ತಿಳಿದು ಬಂದಿದೆ. ಇದೀಗ ಹಲವಾರು ಚಿತ್ರಗಳಲ್ಲಿ ನಟಿಸುತ್ತಿರುವ ಆರೋಹಿತ ಎಂದು ನಟಿಯೊಬ್ಬರನ್ನು ಹಾಸ್ಯ ನಟ ಚಿಕ್ಕಣ್ಣ ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ.

 

 

ಕರೋನ ಸಮಯದಲ್ಲಿ ಇವರಿಬ್ಬರ ಮದುವೆಯ ವಿಚಾರ ಮಾತುಕತೆಯಾಗಿದ್ದು ಕರೋನ ಮುಗಿದ ನಂತರ ಇವರಿಬ್ಬರು ನಿಶ್ಚಿತಾರ್ಥವನ್ನು ಮಾಡಿಕೊಳ್ಳೊಣವೆಂದು ಮಾತನಾಡಿಕೊಂಡಿದ್ದಾರೆ. ಇದೇ ವರ್ಷ ಚಿಕ್ಕಣ್ಣ ಹಾಗೂ ಆರೋಹಿತ ಇವರಿಬ್ಬರು ವಿವಾಹವಾಗುವ ಎಲ್ಲಾ ಲಕ್ಷಣಗಳು ಕೂಡ ಕಂಡುಬರುತ್ತವೆ. ನಟಿ ಆರೋಹಿತ ಶರಣ್ ರವರ ಘಟನೆಯಲ್ಲಿ ಮೂಡಿಬಂದಿದ್ದ ಅಧ್ಯಕ್ಷ ಎನ್ನುವ ಸಿನಿಮಾದ ಚಿಕ್ಕಣ್ಣ ರವರೊಡನೆ ಘಟನೆಯನ್ನು ಕೂಡ ಮಾಡಿದ್ದರು.. ಅಧ್ಯಕ್ಷ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಕೂಡ ಗಳಿಸಿದ್ದರು. ಇದಾದ ನಂತರ ಚಿಕ್ಕಣ್ಣ ಹಾಗೂ ಆರೋಹಿತ ಅವರಿಬ್ಬರೂ ಆತ್ಮೀಯವಾಗಿ ಇದ್ದಾರೆ ಎಂದು ವದಂತಿಗಳು ಕೇಳಿ ಬಂದವು.

 

 

ಇತ್ತೀಚಿಗಷ್ಟೇ ಆರೋಹಿತರವರು ಒಂದು ಸಂದರ್ಶನದಲ್ಲಿ ಚಿಕ್ಕಣ್ಣ ರವರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು ಹಾಗೆಯೇ ಚಿಕ್ಕಣ್ಣರವರು ನನಗೆ ಸರಿ ಹೊಂದುತ್ತಾರೆ. ಇವರೇ ನನಗೆ ಒಳ್ಳೆಯ ಜೋಡಿ ಎಂದು ಕೂಡ ಹೇಳಿದ್ದರು. ಈ ವಿಷಯ ಹಾಗೂ ವಿಡಿಯೋ ಎಲ್ಲಾ ಕಡೆ ಇದೀಗ ವೈರಲ್ ಆಗುತ್ತಿದ್ದು ನಟ ಚಿಕ್ಕಣ್ಣ ಹಾಗೂ ಆರೋಹಿತಾ ಇಬ್ಬರು ವಿವಾಹವಾಗುತ್ತಾರೆ ಎಂದು ವದಂತಿಗಳು ಕೇಳಿ ಬರುತ್ತಿವೆ. ಹಾಸ್ಯ ನಟ ಚಿಕ್ಕಣ್ಣ ರವರು ಮೊದಲಿಗೆ ಬಡ ಕುಟುಂಬದಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇದೀಗ ಕನ್ನಡ ಹಿರಿತೆರೆಯಲ್ಲಿ ಪ್ರಖ್ಯಾತ ಹಾಸ್ಯ ನಟನಾಗಿ ಬೆಳೆದು ನಿಂತಿದ್ದಾರೆ.

 

 

ಇವರು ಕಿರಾತಕ ಎನ್ನುವ ಸಿನಿಮಾದಲ್ಲೂ ಕೂಡ ಯಶ್ ರವರ ಜೊತೆ ನಟಿಸಿದ್ದು ರಾಜಾಹುಲಿ ಎನ್ನುವ ಸಿನಿಮಾದಲ್ಲಿ ಮತ್ತೆ ಯಶ್ ರವರ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಶರಣ್ ರವರ ಜೊತೆ ಅಧ್ಯಕ್ಷ ಎನ್ನುವ ಸಿನಿಮಾದಲ್ಲೂ ಕೂಡ ನಟಿಸಿದ್ದು ಈ ಮೂರು ಚಿತ್ರಗಳು ಚಿಕ್ಕಣ್ಣರವರಿಗೆ ಹೆಚ್ಚು ಯಶಸ್ಸನ್ನು ತಂದುಕೊಟ್ಟವು. ಇಷ್ಟೇ ಅಲ್ಲದೆ ಮಾಸ್ಟರ್ ಪೀಸ್ ,ರಾಂಬೊ 2 ,ಮನೆ ಮಾರಾಟಕ್ಕಿದೆ, ರಾಜ್ ವಿಷ್ಣು ಮುಂತಾದ ಹಲವು ಕನ್ನಡ ಚಿತ್ರಗಳಲ್ಲಿ ಜನಪ್ರಿಯ ನಟರ ಜೊತೆ ನಟಿಸಿ ಚಿಕ್ಕಣ್ಣ ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದ್ದಾರೆ. ಚಿಕ್ಕಣ್ಣ ಮೂಲತಃ ಮೈಸೂರಿನವರಾಗಿದ್ದು ಉದಯ ಟಿವಿಯಲ್ಲಿ ನಡೆಯುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಕಿರುತೆರೆಗೆ ಚಿಕ್ಕಣ್ಣ ಪರಿಚಯರಾದರು ತದನಂತರ ಹಲವಾರು ನಟರ ಜೊತೆ ನಟಿಸಿ ಇಂದು ಕರ್ನಾಟಕದ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದಾರೆ.

 

 

ಕಿರಾತಕ, ಲಕ್ಕಿ, ಮಿಸ್ಟರ್ 420, ವಿಲನ್ ,ರಾಜಾಹುಲಿ, ಬುಲ್ ಬುಲ್, ರಜನಿಕಾಂತ, ವಿಕ್ಟರಿ, ಜಿಂಕೆಮರಿ, ನವರಂಗಿ, ಅಂಜದಗಂಡು ,ಸವಾರಿ ,ಅಧ್ಯಕ್ಷ, ತಿರುಪತಿ ಎಕ್ಸ್ ಪ್ರೆಸ್, ರನ್ನ, ವಜ್ರಕಾಯ ,ಐರಾವತ ,ರಾಮ್ ಲೀಲಾ, ರಥಾವರ, ಮಾಸ್ಟರ್ ಪೀಸ್ ,ಮದುವೆಯ ಮಮತೆಯ ಕರೆಯೋಲೆ ,ದೊಡ್ಮನೆ ಹುಡುಗ ಕೋಟಿಗೊಬ್ಬ 2 ,ಹೆಬ್ಬುಲಿ, ರಾಜಕುಮಾರ ಮುಂತಾದ ಹತ್ತು ಹಲವು ಚಿತ್ರಗಳಲ್ಲಿ ಹಾಸ್ಯ ನಟ ಚಿಕ್ಕಣ್ಣ ರವರು ನಟಿಸಿದ್ದಾರೆ.ಚಿಕ್ಕಣ್ಣ ಎಲ್ಲೆ ಹೋದರು ಕೂಡ ಅವರ ಮದುವೆ ಯಾವಾಗ ಅವರು ಮದುವೆಯಾಗುವ ಹುಡುಗಿ ಯಾರು ಎಂಬೆಲ್ಲ ಹಲವಾರು ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.

 

 

ಅದಕ್ಕೆಲ್ಲ ಉತ್ತರಿಸಲು ಸಾಧ್ಯವಾಗದೆ ಚಿಕ್ಕಣ್ಣ ಕೂಡ ಮೌನವಾಗಿಯೇ ಇದ್ದುಬಿಡುತ್ತಿದ್ದರು ಹಿಂದೊಮ್ಮೆ ಆಂಕರ್ ಅನುಶ್ರೀರವರ ಜೊತೆ ಚಿಕ್ಕಣ್ಣ ರವರ ವಿವಾಹವಾಗುತ್ತದೆ ಎಂಬ ವಿಷಯ ಎಲ್ಲಾ ಕಡೆ ವೈರಲ್ ಆಗಿತ್ತು ಆದರೆ ಇದೀಗ ಆರೋಹಿತರನ್ನು ವಿವಾಹವಾಗುತ್ತಿದ್ದಾರೆ. ಇದೀಗ ಈ ಸುದ್ದಿ ಕೂಡ ಎಲ್ಲಾ ಕಡೆ ವೈರಲ್ ಆಗಿದ್ದು ಚಿಕ್ಕಣ್ಣ ರವರ ಅಭಿಮಾನಿಗಳು ಈ ಶುಭ ಸುದ್ದಿಯನ್ನು ಕೇಳಿ ಖುಷಿ ಪಟ್ಟಿದ್ದಾರೆ.

Leave a Reply

Your email address will not be published.


*