ಜೀ ಕನ್ನಡ ವಾಹಿನಿ ನಡೆಸಿಕೊಡುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬರುತ್ತದೆ. ಈ ವಾರ ಸರಿಗಮಪ ತಂಡ ದೊಡ್ಮನೆ ವೈಭವ ಎನ್ನುವ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಶಿವರಾಜ್ ಕುಮಾರ್ ರವರನ್ನು ಸರಿಗಮಪ ವೇದಿಕೆಗೆ ಕರೆತಂದಿದ್ದಾರೆ. ಸರಿಗಮಪ ಶೋ ಅನುಶ್ರೀ ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದು ಈ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ,ಹಂಸಲೇಖ ಮುಂತಾದವರು ಜಡ್ಜ್ ಗಳಾಗಿ ಕಾಣಿಸಿಕೊಂಡಿದ್ದಾರೆ.
ಸರಿಗಮಪ ಶೋ ಎಂದಾಕ್ಷಣ ಅರ್ಜುನ್ ಜನ್ಯ ಹಾಗೂ ಅನುಶ್ರೀ ರವರ ಕಾಮಿಡಿ ಎಲ್ಲರಿಗೂ ಕೂಡ ಈ ವಾರ ಸರಿಗಮಪ ಶೋನಲ್ಲಿ ದೊಡ್ಮನೆ ವೈಭವ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಶಿವಣ್ಣ ಎಲ್ಲಾ ಸ್ಪರ್ಧಿಗಳ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ಪ್ರಗತಿ ಬಡಿಗೇರ್ ರವರು ಹಾಡಿರುವ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ” ಎನ್ನುವ ಹಾಡನ್ನು ಕೇಳಿ ಭಾವುಕರಾದ ಶಿವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ರವರ ನೆನಪಿಸಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ಪುನೀತ್ ರಾಜಕುಮಾರ್ ತಮ್ಮ ಹುಟ್ಟು ಹಬ್ಬದ ದಿನ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ ಎನ್ನುವ ಹಾಡನ್ನು ಹಾಡಿದರು ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪುನೀತ್ ರಾಜಕುಮಾರ್ ಅವರು ಅಗಲಿದ ನಂತರವೂ ಕೂಡ ಈ ಹಾಡು ಅಭಿಮಾನಿಗಳ ಫೇವರೆಟ್ ಆಗಿ ಸ್ಟೇಟಸ್ ಹಾಗು ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು.
ಪ್ರಗತಿ ಬಡಿಗೇರ್ ಸರಿಗಮಪ ಶೋನಲ್ಲಿ ಈ ಹಾಡನ್ನು ಹಾಡಿದ್ದು ಇದನ್ನು ಕೇಳಿದ ಅರ್ಜುನ್ ಜನ್ಯ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲು ಪ್ರಗತಿ ರವರಿಗೆ ಅವಕಾಶವನ್ನು ನೀಡಿದ್ದಾರೆ. ಈ ಎಪಿಸೋಡ್ ನೆನ್ನೆ ಎಷ್ಟೇ ಪ್ರಸಾರವಾಗಿದ್ದು ಪ್ರಗತಿ ನಿನ್ನ ಈ ಪ್ರಗತಿ ಹೀಗೆ ಸಾಗಲಿ ಇಡೀ ಕರ್ನಾಟಕದ ಜನತೆ ನಿನ್ನ ಕಂಠಕ್ಕೆ ಪ್ರೋತ್ಸಾಹ ನೀಡುತ್ತಿದೆ ಅರ್ಜುನ್ ಜನ್ಯ ನೀಡುತ್ತಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ನಿನ್ನ ಕೀರ್ತಿ ಇನ್ನೂ ಹೆಚ್ಚಾಗಲಿ ಆಲ್ ದ ಬೆಸ್ಟ್ ಎಂದು ಅಭಿಮಾನಿಗಳು ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.