ಪುನೀತ ಪರ್ವ ಕಾರ್ಯಕ್ರಮಕ್ಕೆ ಬರದ ದರ್ಶನ್ ಇಂದು ಅಪ್ಪು ಸಮಾಧಿಯ ಬಳಿ ಕುಟುಂಬ ಸಮೇತ ಬಂದಿದ್ದಾದರೂ ಯಾಕೆ..?

ನಮ್ಮ ಪ್ರೀತಿಯ ಪವರ್ ಸ್ಟಾರ್ ಅಪ್ಪುರವರನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು ಇಂದು ಅವರ ವರ್ಷದ ಪುಣ್ಯ ತಿಥಿ. ಕಳೆದ ವರ್ಷ ಹೃದಯಘಾತದಿಂದ ಅಪ್ಪು ನಮ್ಮನ್ನೆಲ್ಲ ಅಗಲಿದರು. ಅಂದು ಒಬ್ಬ ವ್ಯಕ್ತಿಗೆ ಮಾತ್ರ ಹೃದಯಘಾತವಾಗಲಿಲ್ಲ ಇಡೀ ಕರ್ನಾಟಕಕ್ಕೆ ಹೃದಯಘಾತವಾಗಿತ್ತು. ಅದೇ ಕರಾಳ ದಿನ ಮತ್ತೆ ಬಂದಿದೆ.

 

 

ಅಪ್ಪುರವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಯ ಬಳಿಗೆ ಹರಿದು ಬರುತ್ತಿದೆ. ಅಪ್ಪು ಸಮಾಧಿಗೆ ವಿಶೇಷ ಪುಷ್ಪಲಂಕಾರವನ್ನು ಮಾಡಲಾಗಿದೆ. ಇಲ್ಲಿಗೆ ಅಪ್ಪು ನಮ್ಮನ್ನು ಅಗಲಿ ಒಂದು ವರ್ಷವಾದರೂ ಅಪ್ಪುವಿನ ಸಮಾಧಿಯ ಬಳಿ ಬರುವ ಅಭಿಮಾನಿಗಳ ಸಂಖ್ಯೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.

 

 

ಅಪ್ಪು ಸಮಾಧಿಯ ಬಳಿ ನಿನ್ನೆ ರಾತ್ರಿಯಿಂದಲೇ 24 ಗಂಟೆಗಳ ಸಂಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ
ಅಪ್ಪುವಿನ ಆಪ್ತ ಸ್ನೇಹಿತರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಅಪ್ಪು ಸಮಾಧಿಯ ಬಳಿಗೆ ತಮ್ಮ ಪತ್ನಿಯೊಡನೆ ಬಂದು ಪೂಜೆಯನ್ನು ಸಲ್ಲಿಸಿ ಭಾವುಕರಾಗಿದ್ದಾರೆ.

 

 

“ಯಾರು ಏನೇ ಹೇಳಿದರೂ ನನ್ನ ಮನಸ್ಸಿನಲ್ಲಿ ನೀನು ಎಂದಿಗೂ ಜೀವಂತ ನಿನ್ನ ನಗುವನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಮ್ಮ ಮನೆ ಮನದಲ್ಲಿ ಯಾವಾಗಲೂ ನೀನು ಶಾಶ್ವತವಾಗಿರುತ್ತೀಯ” ಎಂದು ದರ್ಶನ್ ಭಾವುಕರಾಗಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರು ಹಾಕಿದ್ದಾರೆ.

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪುರವರ ಪುನೀತಪರ್ವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಕಾರಣ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕುರಿತು ಟ್ರೋಲ್ ಕೂಡ ಮಾಡಿದ್ದರು. ಅಪ್ಪುವಿಗಿಂತ ದರ್ಶನ್ ಗೆ ಶೂಟಿಂಗ್ ಹೆಚ್ಚಾಯಿತು..! ಎಂದು ಟೀಕಿಸಿದ್ದರು ಇಂದು ದರ್ಶನ್ ಹಾಗೂ ಅವರ ಪತ್ನಿ ಅಪ್ಪು ರವರ ಸಮಾಧಿಯ ಬಳಿ ಬಂದು ಪೂಜೆ ಸಲ್ಲಿಸಿದ್ದು ನೋಡಿ ಅಭಿಮಾನಿಗಳು ಶಾಂತರಾಗಿತ್ತಾರೆ.

Be the first to comment

Leave a Reply

Your email address will not be published.


*