ಅಪ್ಪು ಬಾಸ್ ಕೊಡಿಸಿದ್ದ ಸೈಟು ಇಂದು ಕೋಟಿ ರೂಪಾಯಿ ಬೆಲೆ ಬಾಳುತ್ತದೆ: ಕಣ್ಣೀರಿಟ್ಟ ಚಂದ್ರು

22 ವರ್ಷಗಳಿಂದ ಅಪ್ಪುವಿನ ಆಫೀಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರುರವರು ಅಪ್ಪುವನ್ನು ಕುರಿತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಫೀಸಿನಲ್ಲಿ ಕೆಲಸ ಮಾಡುವವರ ಮಕ್ಕಳಿಗೆಲ್ಲ ಫ್ರೀ ಎಜುಕೇಶನ್ ನೀಡುತ್ತಿದ್ದರು. ಮನೆಯನ್ನು ಕೂಡ ಲೀಜ್ ಗೆ ಕೊಡುತ್ತಿದ್ದರು ಅಪ್ಪು ಬಾಸ್ ನನಗೆ ಆಗ ಒಂದು ಸೈಟ್ ಕೊಡಿಸಿದ್ದರು ಆ ಸೈಟ್ ಈಗ ಒಂದು ಕೋಟಿಗೆ ಬೆಲೆ ಬಾಳುತ್ತದೆ. ನನಗೆ ಕಾರು ಮತ್ತು ಬೈಕ್ ಕೂಡ ಕೊಡಿಸಿದ್ದಾರೆ ಎಂದರು ಅಪ್ಪು ಮ್ಯಾನೇಜರ್ ಚಂದ್ರು.

 

ಮೊದಲನೇ ಬಾರಿ ಚಂದ್ರುವನ್ನು ಇಂಟರ್ವ್ಯೂ ಮಾಡಿದಾಗ ಅಪ್ಪು ನಿಮಗೆಷ್ಟು ಸಂಬಳ ಬೇಕು ಎಂದು ಕೇಳಿದರಂತೆ ಚಂದ್ರು ರವರು ನಿಮಗೆ ಇಷ್ಟ ಬಂದಷ್ಟು ಕೊಡಿ ಸರ್, ನಾನು 30 ದಿನಗಳ ಕಾಲ ಕೆಲಸ ಮಾಡುತ್ತೇನೆ ನಂತರ ನಿಮಗೆ ನಾನು ಇಷ್ಟವಾದರೆ ಕೆಲಸಕ್ಕೆ ಇಟ್ಟುಕೊಳ್ಳಿ ಎಂದರಂತೆ 30 ದಿನಗಳ ನಂತರ ನೀನು ನನಗೆ ಇಷ್ಟವಾದೆ ನೀನು ನನ್ನ ಜೊತೆ ಕೆಲಸ ಮಾಡು ಎಂದು ನನಗೆ ಹೇಳಿದರು.

ಅಪ್ಪು ಯಾವುದೇ ಸಿನಿಮಾವನ್ನು ಮಾಡಿದರು ನನಗೆ ತೋರಿಸಿ ಹೇಗಿದೆ ಚಂದ್ರು ಸಿನಿಮಾ ಎಂದು ಕೇಳುತ್ತಿದ್ದರು. ಚೆನ್ನಾಗಿದೆ ಸರ್ ಎಂದರೆ ಸುಳ್ಳು ಹೇಳಬೇಡ ನಿಜ ಹೇಳು ಎಂದು ಕೂಡ ಕೇಳುತ್ತಿದ್ದರು. ಅವರು ಯಾವುದೇ ಶೂಟಿಂಗ್ ಹೋದರು ಕೂಡ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಶೂಟಿಂಗ್ ಹೋದ ಸಮಯದಲ್ಲಿ ನಾವಿಬ್ಬರು ಒಂದೇ ರೂಮಿನಲ್ಲಿ ಮಲಗುತ್ತಿದ್ದೆವು ಎಂದು ಅಪ್ಪು ಮ್ಯಾನೇಜರ್ ಚಂದ್ರು ಹೇಳಿದ್ದಾರೆ.

 

 

ಎಷ್ಟೋ ಸಾರಿ ನನ್ನ ಬೈಕಿನಲ್ಲೇ ನಾನು ಅಪ್ಪು ಸರ್ ಅನ್ನು ಶೂಟಿಂಗ್ ಗೆ ಜಿಮ್ ಗೆ ಕರೆದುಕೊಂಡು ಹೋಗಿದ್ದೇನೆ. ಅವರು ಕಾರೆ ಬೇಕು ಎನ್ನುತ್ತಿರಲಿಲ್ಲ ಬೈಕಿನಲ್ಲಿ ಬಿಡು ಎಂದು ಹೇಳುತ್ತಿದ್ದರು. ಅಪ್ಪು ಸರ್ ಅನ್ನು ಇನ್ನು ನೂರು ಜನ್ಮ ಜನ್ಮ ಕಳೆದರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂದರು

ಮಳೆ ಬರುತ್ತಿರುವಾಗ ಅವರ ಮನೆಯ ಮುಂದೆ ಯಾರಾದ್ರೂ ಬೈಕಿನವರು ಬಂದು ನಿಲ್ಲಿಸಿದ್ದರೆ ಸಿಸಿಟಿವಿಯಲ್ಲಿ ನೋಡಿ ಅವರನ್ನು ಮನೆಯ ಒಳಗೆ ಕರೆದು ಟೀ ಕಾಫಿ ಕೊಟ್ಟು ಕಳಿಸುತ್ತಿದ್ದರು. ಅಭಿಮಾನಿಗಳು ಬಂದಾಗಲೂ ಅಷ್ಟೇ ಅವರನ್ನು ಮನೆಯ ಒಳಗೆ ಕರೆದು ಕೂರಿಸಿ ಮಾತನಾಡಿಸುತ್ತಿದ್ದರು. ಹೆಗಲ ಮೇಲೆ ಕೈ ಹಾಕಿದರೂ ಕೂಡ ಅವರು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ.

 

 

ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು ನಮ್ಮನ್ನು ಎಂದಿಗೂ ಕೆಲಸಗಾರರಂತೆ ನೋಡೇ ಇಲ್ಲ ಅಣ್ಣ, ತಮ್ಮ, ಫ್ರೆಂಡ್ ರೀತಿ ಭಾವಿಸುತ್ತಿದ್ದರು. ನಮ್ಮ ಮನೆಗೆ ಬಂದಾಗಲೂ ಕೂಡ ನೆಲದ ಮೇಲೆ ಕುಳಿತು ಗಂಜಿಯಲ್ಲಿ ಊಟ ಮಾಡಿದರು. ಹಿರಿಯರನ್ನು ನೋಡಿದಾಗ ಕಾಲನ್ನು ಮುಟ್ಟಿ ನಮಸ್ಕಾರಿಸುತ್ತಿದ್ದರು.

ಅಶ್ವಿನಿ ಅಕ್ಕ ಕೂಡ ತುಂಬಾ ಒಳ್ಳೆಯವರು, ಅವರು ಗಟ್ಟಿ ಮನಸ್ಸು ಮಾಡಿ ಆಫೀಸಿಗೆ ಬರುತ್ತಾರೆ. ಏಳು ಗಂಟೆಯಾದರೆ ಸಾಕು ಗಂಡ ಹೆಂಡತಿ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಒಂದು ರೌಂಡ್ ಹೋಗುತ್ತಿದ್ದರು ಆದರೆ ಈಗ ಅಪ್ಪು ಬಾಸ್ ಇಲ್ಲ ಎನ್ನುವುದನ್ನು ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಶ್ವಿನಿರವರ ಮುಖವನ್ನು ನೋಡಲು ಆಗುತ್ತಿಲ್ಲ ಎಂದರು ಊಟ ಮಾಡಬೇಕು ಎಂದರೂ ಕೂಡ ಅದೇ ಹೋಟೆಲ್ ಬೇಕು ರೆಸ್ಟೋರೆಂಟ್ ಬೇಕು ಎಂದು ಕೇಳುತ್ತಲೇ ಇರಲಿಲ್ಲ ಯಾವ ಹೋಟೆಲ್ ಗಾದರು ಹೋಗಿ ಊಟ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದರು. ಅಪ್ಪೂರವರಿಗೆ ನಾನ್ವೆಜ್ ಎಂದರೆ ತುಂಬಾ ಇಷ್ಟ ಎಂದು ಚಂದ್ರು ನೆನೆದರು.

 

 

ಅಪ್ಪು ಬಾಸ್ ಗಂಧದಗುಡಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅದರಲ್ಲಿ ಅಪ್ಪು ಹಾವು ನೋಡಿದಾಗ “ನನಗೆ ಹಾವು ಎಂದರೆ ತುಂಬಾ ಭಯ ನಾನು ಮನೆಯಲ್ಲಿ ಹೆಂಡ್ತಿ ಮಕ್ಕಳನ್ನು ಬಿಟ್ಟು ಬಂದಿದ್ದೇನೆ ಮೂರು ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದೇನೆ ನಾನು ಸೇಫ್ ಆಗಿ ಮನೆಗೆ ಹಿಂತಿರುಗುತ್ತೇನಾ..!” ಎನ್ನುವ ಡೈಲಾಗ್ ಹೇಳಿದಾಗ ಕಣ್ಣೀರು ಬರುತ್ತದೆ ಎಂದರು. ದಿಷ್ಟು ಮಾತುಗಳು ಕೂಡ 22 ವರ್ಷಗಳ ಕಾಲ ಅಪ್ಪುವಿನ ಜೊತೆಗೆ ಒಡನಾಟ ಹೊಂದಿದ್ದ ಚಂದ್ರುರವರು ಮಾತನಾಡಿದ ಮಾತುಗಳು.

Be the first to comment

Leave a Reply

Your email address will not be published.


*