ನನ್ನ ಹಿಂದೆ ಎಷ್ಟು ಹುಡುಗ್ರು ಸುತ್ತುತ್ತಿದ್ರು ಗೊತ್ತಾ? ಹಳೆ ಡವ್ ನೆನೆದು ಕಣ್ಣೀರು ಹಾಕಿದ ಆಂಕರ್ ಅನುಶ್ರೀ

ಹೊಸಬರು ಸೇರಿ ಮಾಡಿರುವ ಕಂಬ್ಳಿ ಹುಳ ಎನ್ನುವ ಚಿತ್ರದ ಬಗ್ಗೆ ಮಾತನಾಡಿದ ಆಂಕರ್ ಅನುಶ್ರೀರವರು ಒಂದು ಕಥೆ ಕಾವ್ಯವಾದ ಕಂಬಳಿ ಹುಳ ಎನ್ನುವ ಅದ್ಭುತವಾದ ಚಿತ್ರ ತಯಾರಾಗುತ್ತದೆ. ಎಲ್ಲಾ ಹೊಸಬರು ಸೇರಿ ಕಟ್ಟಿರುವ ಒಂದು ಕನಸಿನ ಚಿತ್ರವೇ ಕಂಬಳಿ ಹುಳ ಈ ಚಿತ್ರವನ್ನು ಎಲ್ಲರೂ ಯಾಕೆ ನೋಡಬೇಕು ಎಂದರೆ ನಾವು ಹಳ್ಳಿಯಲ್ಲಿದ್ದಾಗ ನಮ್ಮಲ್ಲಿದ್ದಂತಹ ಮುಗ್ಧತೆ ನಾವು ಸಿಟಿಗೆ ಬಂದ ನಂತರ ಬದಲಾಗಿಬಿಡುತ್ತದೆ. ಆ ಮುಗ್ದತೆಯನ್ನು ಉಳಿಸಿಕೊಂಡು ಆ ಮುಗ್ದತೆಯಲ್ಲಿಯೇ ಈ ಚಿತ್ರವನ್ನು ಮಾಡಿದ್ದಾರೆ.

 

 

ನಾನು ಈ ಸಿನಿಮಾವನ್ನು ನೋಡುತ್ತಾ ,ನಾನು, ನಮ್ಮೂರು, ನನ್ನ ಫಸ್ಟ್ ಲವ್ ಸ್ಟೋರಿ, ನಮ್ಮ ಏರಿಯಾದಲ್ಲಿ ನನ್ನ ಹಿಂದೆ ಓಡಾಡುತ್ತಿದ್ದ ಹುಡುಗರು ಈ ಎಲ್ಲವೂ ಕೂಡ ನನಗೆ ನೆನಪಾಯಿತು. ಯಾರಿಗಾದರೂ ತುಂಬಾ ಇಷ್ಟವಾಗುವ ನೆನಪುಗಳು ಯಾವುವು ಎಂದು ಕೇಳಿದರೆ ಎಲ್ಲರೂ ತಮ್ಮ ಹಳೆಯ ನೆನಪುಗಳ ಬಗ್ಗೆ ಮಾತನಾಡುತ್ತಾರೆ. ಯಾವುದೇ ಮಾಸ್ ಡೈಲಾಗ್ಸ್ ಗಳಿಲ್ಲದೆ ಸಿಂಪಲ್ ಆಗಿ ಈ ಸಿನಿಮಾ ಇದೆ ಎಲ್ಲರೂ ಕೂಡ ತಮ್ಮ ಹಳೆಯ ನೆನಪುಗಳನ್ನು ಈ ಸಿನಿಮಾದ ಮೂಲಕ ಮೆಲುಕು ಹಾಕಬಹುದಾಗಿದೆ.

 

 

ನಮ್ಮಲ್ಲಿ ಕಳೆದು ಹೋಗುತ್ತಿರುವಂತಹ ಮುಗ್ದತೆಯನ್ನು ನಾವು ವಾಪಸ್ ತರುವುದಕ್ಕಾಗಿ ಇಂತಹ ಸಿನಿಮಾಗಳನ್ನು ನೋಡಲೇಬೇಕಾಗಿದೆ.ಈ ತಂಡದವರು ಅಪ್ಪು ಸರ್ ಫ್ಯಾನ್ ಎಂದು ಹೇಳಿದಾಗ ನನಗೆ ಇನ್ನು ಖುಷಿಯಾಯಿತು ಅಪ್ಪು ಸರ್ ಫ್ಯಾನ್ ಗಳಲ್ಲಿ ನಾನು ಕೇಳಿಕೊಳ್ಳುವುದು ಏನೆಂದರೆ, ಅಪ್ಪು ಸರ್ ಕೂಡ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು ಅದೇ ರೀತಿ ಅಪ್ಪು ಅಭಿಮಾನಿಗಳಾದ ನಾವು ಕೂಡ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡೋಣ ಅವರ ಅಭಿಮಾನಿಗಳಾಗಿ ಹೊಸ ಪ್ರತಿಭೆಗಳ ಹೊಸ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡೋಣ ಎಂದರು

ಈ ಚಿತ್ರದಲ್ಲಿ ನಾಯಕನಟ ಹಾಗೂ ನಾಯಕ ನಟಿ ನಡುವಿನ ಕೆಮಿಸ್ಟ್ರಿ ನನಗೆ ತುಂಬಾ ಇಷ್ಟವಾಯಿತು. ಈ ಚಿತ್ರವನ್ನು ನೋಡಿದ ಎಲ್ಲರಿಗೂ ಕೂಡ ಅವರಿಬ್ಬರು ಇಷ್ಟವಾಗುತ್ತಾರೆ. ನಮ್ಮ ಜೀವನದಲ್ಲಿ ಎಂದಿಗೂ ನಮ್ಮ ಮೊದಲ ಲವ್ ಸ್ಟೋರಿ ತುಂಬ ಸ್ಪೆಷಲ್ ಆಗಿರುತ್ತದೆ ಎಂದರು. ಈ ಸಿನಿಮಾ ಹೊಸ ಕಲಾವಿದರ ಸಿನಿಮಾ ವಾಗಿದ್ದು ಇದಕ್ಕೆ ಹೆಚ್ಚು ಸ್ಕ್ರೀನ್ ಸಿಗಬೇಕಾಗಿದೆ. ಹಾಗೆ ಒಳ್ಳೆಯ ರೀತಿಯಲ್ಲಿ ಈ ಸಿನಿಮಾವನ್ನು ಎಲ್ಲಾ ಕಡೆ ಪ್ರಮೋಷನ್ ಮಾಡಬೇಕಾಗಿದೆ. ಆಡಿಯನ್ಸ್ ಕೂಡ ಈ ಸಿನಿಮಾವನ್ನು ನೋಡಿ ಬೇರೆಯವರಿಗೆ ಕೂಡ ಹೇಳಬೇಕು ಅಭಿಮಾನಿ ಇಂದ ಮಾತ್ರ ಈ ಸಿನಿಮಾ ಗೆಲ್ಲಲು ಸಾಧ್ಯ.

 

 

ಕಂಬ್ಳಿ ಹುಳ ಚಿತ್ರದ ಮೂಲಕ ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂಬುದನ್ನು ತಿಳಿದುಕೊಂಡೆ ನಾವು ಊರಿನಲ್ಲಿದ್ದಾಗ ಒಳ್ಳೆಯವರಾಗಿರುತ್ತೇವೆ ಆದರೆ ನಗರಕ್ಕೆ ಬಂದ ನಂತರ ಕೆಟ್ಟವರಾಗಿ ಬದಲಾಗಿ ಬಿಡುತ್ತೇವೆ. ನಾವು ನಮ್ಮನ್ನು ಮತ್ತೆ ಕಂಡುಕೊಳ್ಳಬೇಕಾಗಿದೆ. ನಾನು ಹಲವಾರು ರಿಯಾಲಿಟಿ ಶೋಗಳ ಆಂಕರಿಂಗ್ ಅನ್ನು ಮಾಡುತ್ತೇನೆ ಅದರಲ್ಲಿ ಎಲ್ಲರಿಗೂ ಇಷ್ಟವಾಗುವ ಪ್ರತಿಭೆಗಳು ಹಳ್ಳಿ ಸೊಗಡಿನ ಪ್ರತಿಭೆಗಳು ಅಥವಾ ಉತ್ತರ ಕರ್ನಾಟಕದ ಪ್ರತಿಬೆಗಳೇ ಆಗಿರುತ್ತಾರೆ ಏಕೆಂದರೆ ಎಲ್ಲರಿಗೂ ಆ ಮುಗ್ಧತೆ ತುಂಬಾ ಇಷ್ಟವಾಗುತ್ತದೆ.

ನಾವು ನಮ್ಮ ರೀತಿಯ ಜನಗಳ ನಡುವೆ ಹೆಚ್ಚು ಕನೆಕ್ಟ್ ಆಗುತ್ತೇವೆ ಎಲ್ಲರಿಗೂ ಕೂಡ ಅಂತಹ ಮುಗ್ದತೆ ಇರಬೇಕು. ಈ ಸಿನಿಮಾವನ್ನು ನೀವು ಮಿಸ್ ಮಾಡಿಕೊಂಡರೆ ಒಂದು ಅತ್ಯುತ್ತಮ ಸಿನಿಮಾವನ್ನು ಮಿಸ್ ಮಾಡಿಕೊಂಡ ಹಾಗಾಗುತ್ತದೆ ಎಲ್ಲರೂ ಹೋಗಿ ಸಿನಿಮಾವನ್ನು ನೋಡಿ ಎಂದು ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು.

Be the first to comment

Leave a Reply

Your email address will not be published.


*