ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಆಂಕರ್ ಅನುಶ್ರೀ ಬೋಲ್ಡ್ ಜಿಮ್ ವರ್ಕೌಟ್

ಕರ್ನಾಟಕದ ಮಾತಿನಮಲ್ಲಿ ಆಂಕರ್ ಅನುಶ್ರೀರವರು ಜೀ ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ತಮ್ಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಇಷ್ಟೇ ಅಲ್ಲದೆ ಹಲವಾರು ಕನ್ನಡ ಚಿತ್ರಗಳ ಪೋಸ್ಟರ್ ಹಾಗೂ ಪ್ರೀ ರಿಲೀಸ್ ಇವೆಂಟ್ ಗಳಲ್ಲು ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 

ಕನ್ನಡದ ನಿರೂಪಕಿ ಎಂದ ತಕ್ಷಣ ಆಂಕರ್ ಅನುಶ್ರೀ ಅವರ ಹೆಸರೇ ಮೊಟ್ಟ ಮೊದಲಿಗೆ ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಆಂಕರ್ ಅನುಶ್ರೀ ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಸತತ ನಾಲ್ಕು ಬಾರಿ ಉತ್ತಮ ನಿರೂಪಕಿ ಎನ್ನುವ ಅವಾರ್ಡ್ ಅನ್ನು ಕೂಡ ಗೆದ್ದುಕೊಂಡಿದ್ದಾರೆ. ಆಂಕರ್ ಅನುಶ್ರೀರವರು ನಿರೂಪಣೆಯಲ್ಲಿ ಮಾತ್ರ ತಮ್ಮ ಚಾಪನ್ನು ಮೂಡಿಸದೆ ನಟನೆಯಲ್ಲು ಕೂಡ ಕರ್ನಾಟಕದ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಆಂಕರ್ ಅನುಶ್ರೀರವರು ಬೆಂಕಿ ಪಟ್ಟಣ ,ಮುರಳಿ ಮೀಟ್ಸ್ ಮೀರಾ, ರೋಮಿಯೋ, ಉಪ್ಪು ಹುಳಿ ಕಾರ ,ರಿಂಗ್ ಮಾಸ್ಟರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

 

ಆಂಕರ್ ಅನುಶ್ರೀ ರವರು ಮೂಲತಃ ತುಳು ಕುಟುಂಬಕ್ಕೆ ಸೇರಿದ್ದು ತಮ್ಮ ಪದವಿಯನ್ನು ಮುಗಿಸಿದ ಅನುಶ್ರೀರವರು ಈ ಟಿವಿಯಲ್ಲಿ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು ಎಂಬ ಕಾರ್ಯಕ್ರಮದಲ್ಲಿ ಮೊದಲಿಗೆ ನಿರೂಪಕಿಯಾಗಿ ಕಾಣಿಸಿಕೊಂಡರು. ಇಷ್ಟೇ ಅಲ್ಲದೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕೂಡ ಕಾಣಿಸಿಕೊಂಡ ಅನುಶ್ರೀರವರು ಸರಿ ಸುಮಾರು 80 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಕಾಮಿಡಿ ಕಿಲಾಡಿಗಳು ಕಾಮಿಡಿ ಕಮ್ ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಆಂಕರ್ ಅನುಶ್ರೀ ರವರು ಕೆಲಸ ಮಾಡಿದ್ದಾರೆ.

ಆಂಕರ್ ಅನುಶ್ರೀ ಅವರಿಗೆ ಈಗಾಗಲೇ 31 ವರ್ಷ ವಯಸ್ಸಾಗಿದ್ದು ನಟ ದರ್ಶನ್ ತೂಗುದೀಪ ರವರಂತೆ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಹಾಗಾಗಿ ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿ ಅಡಿಕೆ ತೋಟವನ್ನು ಬೆಳೆಸಿದ್ದಾರೆ. ಈಕೆ ಹಲವಾರು ಪ್ರಶಸ್ತಿಗಳನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಆಂಕರ್ ಅನುಶ್ರೀ ರವರಿಗೆ ಈಗಾಗಲೇ 31 ವರ್ಷ ವಯಸ್ಸಾಗಿದ್ದು ಕನ್ನಡಿಗರ ಹಾಟ್ ಫೇವರೆಟ್ ಆಂಕರ್ ಆಗಿ ಅನುಶ್ರೀರವರು ಮುಂದುವರೆದಿದ್ದಾರೆ. ಅನುಶ್ರೀರವರ ವಿವಾಹದ ಬಗ್ಗೆ ಹಲವಾರು ಗಾಸಿಪ್ ಗಳು ಹರಿದು ಬಂದಿದ್ದರೂ ಕೂಡ ಇಲ್ಲಿಯವರೆಗೂ ಅಫಿಶಿಯಲ್ ಆಗಿ ಅವರು ತಮ್ಮ ವಿವಾಹದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.

 

ಆಂಕರ್ ಅನುಶ್ರೀರವರು ಸರಿಗಮಪ ರಿಯಾಲಿಟಿ ಶೋನಲ್ಲಿ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ರವರ ಜೊತೆ ಪ್ರೇಮ ಸಲ್ಲಾಪದ ನಾಟಕಗಳನ್ನು ಆಡುತ್ತಿರುತ್ತಾರೆ ಹಾಗೆ ಚಿಕ್ಕಣ್ಣನ ಜೊತೆ ಕೂಡ ಮದುವೆಯಾಗುತ್ತಾರೆ ಎಂಬ ಗಾಸಿಪ್ ಗಳು ಹರಿದಾಡುತ್ತಿದ್ದವು. ಆಂಕರ್ ಅನುಶ್ರೀರವರು ರಿಯಾಲಿಟಿ ಶೋಗಳ ನಿರೂಪಣೆಯಲ್ಲಿ ಬಿಸಿಯಾಗಿರುತ್ತಾರೆ. ಹಾಗಾಗಿ ತಮ್ಮ ಫಿಟ್ನೆಸ್ ಸೌಂದರ್ಯದ ಬಗ್ಗೆಯೂ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ ತಮ್ಮ instagram ಖಾತೆಯಲ್ಲಿ ಆಗಾಗ ತಾವು ವರ್ಕೌಟ್ ಮಾಡುವ ವಿಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಆಂಕರ್ ಅನುಶ್ರೀ ರವರು ತಾವು ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ಆ ವಿಡಿಯೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

Be the first to comment

Leave a Reply

Your email address will not be published.


*