ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಕವಿತಾ ಗೌಡ(Kavita Gowda) ಹಾಗೂ ಚಂದನ್ ಕುಮಾರ್(Chandan Kumar) ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಕವಿತಾ ಗೌಡ ಹಾಗೂ ಚಂದನ್ ದಂಪತಿಗಳು ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕವಿತಾ ಗೌಡ ರವರು ಚಿನ್ನು ಲಚ್ಚಿ ಎನ್ನುವ ಪಾತ್ರಗಳಲ್ಲಿ ನಟಿಸಿದ್ದರು ಇದೀಗ ಲಕ್ಷ್ಮಿ ಬಾರಮ್ಮ ಧಾರವಾಹಿ ಖ್ಯಾತಿಯ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರು ಮತ್ತೊಮ್ಮೆ ಹೊಸ ಹೋಟೆಲ್ ಒಂದನ್ನು ಶುರು ಮಾಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಪರಿಚಯವಾಗಿ ಆ ಧಾರವಾಹಿಯ ಮೂಲಕವೇ ಇವರು ಪ್ರೀತಿಸಿ ಮದುವೆಯನ್ನು ಕೂಡ ಆಗಿದ್ದರು ಇದೀಗ ಖುಷಿ ಖುಷಿಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಕವಿತಾ ಗೌಡ ಹಾಗೂ ಚಂದನ್ ದಂಪತಿಗಳು ರೆಸಾರ್ಟ್ ಒಂದನ್ನು ಶುರು ಮಾಡಿದ್ದರು ಇದೀಗ ಅವರು ಹೊಸ ಉದ್ಯಮವನ್ನು ಶುರು ಮಾಡಿದ್ದು ಮೈಸೂರಿನಲ್ಲಿ ಇವರಿಬ್ಬರು ಇದೀಗ ಮಂಡಿಪೇಟೆ ಹೋಟೆಲ್ ಎನ್ನುವ ಹೋಟೆಲ್ ಪ್ರಾರಂಭ ಮಾಡಿದ್ದಾರೆ. ಈ ಹೋಟೆಲ್ ಉದ್ಯಮದ ಪ್ರಾರಂಭದ ಹಿನ್ನೆಲೆಯಲ್ಲಿ ಇವರು ಅದ್ದೂರಿ ಪೂಜೆಯನ್ನು ಕೂಡ ಇಟ್ಟುಕೊಂಡಿದ್ದರು. ಆ ಪೂಜೆಗೆ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿಗಳ ಆತ್ಮೀಯರೆಲ್ಲರೂ ಆಗಮಿಸಿ ಹೊಸ ಉದ್ಯಮಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಚಂದನ್ ಕುಮಾರ್ ಅವರು ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ಹಲವಾರು ಧಾರವಾಹಿಗಳಲ್ಲಿ ನಟಿಸಿ ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅರ್ಜುನ್ ಸರ್ಜಾ ರವರ ಪುತ್ರಿ ಐಶ್ವರ್ಯ ಸರ್ಜಾ ರವರ ಜೊತೆಗೆ “ಪ್ರೇಮ ಬರಹ” ಎನ್ನುವ ಸಿನಿಮಾದಲ್ಲಿ ನಟಿಸಿ ಹಿರಿತೆರೆಗೂ ಕೂಡ ಕಾಲಿಟ್ಟಿದ್ದರು ಇಷ್ಟೇ ಅಲ್ಲದೆ ಸೂಪರ್ ಸ್ಟಾರ್ ಜೆಕೆ ಹಾಗೂ ಚಿಕ್ಕಣ್ಣರವರ ಜೊತೆ ಬೆಂಗಳೂರು ಎನ್ನುವ ಚಿತ್ರದಲ್ಲೂ ಕೂಡ ನಟಿಸಿ ಪ್ರಕ್ಯಾತಿಯನ್ನು ಪಡೆದುಕೊಂಡಿದ್ದರು. ಚಂದನ್ ಕುಮಾರ್ ರವರ ಪತ್ನಿ ಕವಿತಾ ಗೌಡ ಕೂಡ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ಇವರು ಕೂಡ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಂಡಿಪೇಟೆ ಹೋಟೆಲ್ ಉದ್ಘಾಟನೆಯ ದಿನ ಕವಿತಾ ಗೌಡ ತಮ್ಮ ಕೈಯಾರೆ ಟೀ ಮಾಡಿ ಸಮಾರಂಭಕ್ಕೆ ಬಂದಿದ್ದ ಎಲ್ಲಾ ಅತಿಥಿಗಳಿಗೂ ಕೂಡ ನೀಡಿದ್ದಾರೆ. ಇದೀಗ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಹೋಟೆಲ್ ಉದ್ಯಮಗಳಲ್ಲಿ ಬಿಜಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ಒಂದನ್ನು ತೆರೆದಿದ್ದರೂ ಇದೀಗ ಈ ದಂಪತಿಗಳು ಮೈಸೂರಿನಲ್ಲಿ ಮಂಡಿಪೇಟೆ ಹೋಟೆಲನ್ನು ಶುರು ಮಾಡಿದ್ದಾರೆ. ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರು ತಮ್ಮ ಹೊಸ ಹೋಟೆಲ್ ಆದ ಮಂಡಿಪೇಟೆ ಹೋಟೆಲ್ ನಲ್ಲಿ ಪೂಜೆಯನ್ನು ಕೂಡ ಮಾಡಿದ್ದು ಸಮಾರಂಭದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ instagram ಗಾದೆಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.