ನಮ್ಮ ಮೆಟ್ರೋ ಮಾರ್ಗದಲ್ಲಿ ಮತ್ತೊಂದು ಎಡವಟ್ಟಾಗಿದೆ, ಮೆಟ್ರೋ ನಿಲ್ದಾಣದ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದು ಕಾರು ಗ್ಲಾಸ್ ಜಖಂ ಆಗಿದೆ. ಯಶವಂತಪುರದ ಸೋಪ್ ಫ್ಯಾಕ್ಟರಿ ಮೆಟ್ರೋ ಸ್ಟೇಷನ್ ಅಡಿಯಲ್ಲಿ ಈ ಘಟನೆ ನಡೆದಿದೆ.
ನಮ್ಮ ಮೆಟ್ರೋ ಮಾರ್ಗದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಮೆಟ್ರೋ ನಿಲ್ದಾಣದ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದು ಕಾರಿನ ಗಾಜು ಗಾಯಗೊಂಡಿದೆ. ಯಶವಂತಪುರದ ಸೋಪ್ ಫ್ಯಾಕ್ಟರಿ ಮೆಟ್ರೋ ಸ್ಟೇಷನ್ ಅಡಿಯಲ್ಲಿ ಈ ಘಟನೆ ನಡೆದಿದೆ.
ಕಬ್ಬಿಣದ ತುಂಡಿನ ರಭಸಕ್ಕೆ ಕಾರಿನ ಗಾಜು ಒಡೆದಿದೆ. ಕಾರಿನ ಮಾಲೀಕ ರಿತೇಶ್ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಕಾರು ಮಾಲೀಕರು ದೂರಿದ್ದಾರೆ. ಕಬ್ಬಿಣದ ತುಂಡು ಬಿದ್ದಿರುವ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.