ಲವಾರು ಕಂಪನಿಗಳಲ್ಲಿ ಸಾಕಷ್ಟು ಕೆಲಸವನ್ನು ಮಾಡಿಸಿಕೊಂಡು ಕಡಿಮೆ ಸಂಬಳವನ್ನು ನೀಡುತ್ತಾರೆ. ಎಂದು ಹಲವಾರು ಉದ್ಯೋಗಿಗಳು ಕೋರ್ಟಿನ ಮೊರೆ ಹೋಗಿ ಪ್ರತಿಭಟನೆಯನ್ನು ಕೂಡ ಮಾಡುತ್ತಾರೆ. ಇಂತಹ ವಿಚಾರಗಳು ಸರ್ವೇಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವೆ ಆದರೆ ನನಗೆ ಹೆಚ್ಚುವೇತನವನ್ನು ಕೊಡುತ್ತಾರೆ ಕೆಲಸವನ್ನೇ ಕೊಡುತ್ತಿಲ್ಲ ಎಂದು ಯಾರಾದರೂ ಕೋರ್ಟ್ ಮೊರೆ ಹೋಗಿದ್ದವರನ್ನು ಕೇಳಿದ್ದೀರಾ ಹೌದು ಗೆಳೆಯರೇ ಇಂತಹ ಘಟನೆ ಒಂದು ಐಲ್ಯಾಂಡ್ ನಲ್ಲಿ ನಡೆದಿದೆ.

 

 

ವ್ಯಕ್ತಿಯು ತನಗೆ ಮಾಸಿಕವಾಗಿ ಒಂದು ಕೋಟಿ ರೂಪಾಯಿ ಸಂಬಳವನ್ನು ನೀಡುತ್ತಾರೆ ಆದರೆ ಒಂದು ಕೆಲಸವನ್ನು ನೀಡುತ್ತಿಲ್ಲ ಎಂದು ಸಂಸ್ಥೆಯ ಮೇಲೆ ದೂರು ದಾಖಲಿಸಿದ್ದಾನೆ. ಐರ್ಲ್ಯಾಂಡಿನ ಐರಿಷ್ ರೈಲ್ ಉದ್ಯೋಗಿಯಾದ ಅಲಿಷ್ಟರ ಮಿಲ್ಸ್ ಎಂಬ ವ್ಯಕ್ತಿ ನನಗೆ ಒಂದು ತಿಂಗಳಿಗೆ ಒಂದು ಕೋಟಿ ರೂಪಾಯಿ ಸಂಬಳವನ್ನು ನೀಡುತ್ತಾರೆ. ಆದರೆ ಕೆಲಸವನ್ನು ನೀಡುವುದಿಲ್ಲ ಎಂದು ಕೋರ್ಟಿಗೆ ದೂರನ್ನು ನೀಡಿದ್ದಾನೆ.

ಐರ್ಲೆಂಡಿನ ಐರಿಷ್ ರೈಲ್ವೆ ಕಂಪನಿಯಲ್ಲಿ ಹಣಕಾಸು ಅಧಿಕಾರಿಯಾಗಿರುವ ಮೀಲ್ಸ್ ಗೆ ವಾರ್ಷಿಕವಾಗಿ ಕಂಪನಿ ಬರೋಬರಿ 1.03 ಕೋಟಿ ರೂಪಾಯಿ ವೇತನವನ್ನು ನೀಡುತ್ತದೆ. ಆದರೆ ಸಂಬಳಕ್ಕೆ ಅನುಗುಣವಾಗಿ ಕೆಲಸವನ್ನು ಮಾತ್ರ ನೀಡುತ್ತಿಲ್ಲ ಎಂದು ಐರ್ಲ್ಯಾಂಡಿನ ರೈಲ್ವೆ ಕಂಪನಿಯ ಉದ್ಯೋಗಿ ದೂರು ನೀಡಿದ್ದಾರೆ.

 

 

 

ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಕೂಡ ಉದ್ಯೋಗವಿದೆ ಉಳಿದವರೆಲ್ಲರೂ ಕೆಲಸ ಮಾಡುತ್ತಾರೆ, ನನಗೆ ಮಾತ್ರ ಕೆಲಸ ನೀಡುತ್ತಿಲ್ಲ ಎಲ್ಲರೂ ಕೆಲಸ ಮಾಡುತ್ತಿರುವಾಗ ನಾನು ಮಾತ್ರ ಖಾಲಿಯಾಗಿ ಕುಳಿತುಕೊಳ್ಳುವುದು ನನಗೆ ಸಂಕಟವಾಗುತ್ತದೆ ಎಂದು ವ್ಯಕ್ತಿಯು ತನ್ನ ದುಃಖವನ್ನು ಕೋರ್ಟಿನ ಮುಂದೆ ಹೇಳಿದ್ದಾರೆ.

 

 

ಅಲೆಸ್ಟರ್ ಮಿಲ್ಸ್ ಕೋರ್ಟಿಗೆ ನೀಡಿರುವ ದೂರಿನ ಪ್ರಕಾರ ಆತ ಪ್ರತಿದಿನ 10 ಗಂಟೆಗೆ ಕಚೇರಿಗೆ ಹಾಜರಾಗುತ್ತಾನೆ. ಹಾಜರಾದ ನಂತರ ಎರಡು ದಿನ ಪತ್ರಿಕೆಗಳನ್ನು ಓದಿ ಮುಗಿಸಿ ಸ್ಯಾಂಡ್ವಿಚ್ ಅನ್ನು ಖರೀದಿಸಿ ತಿಂದು ನಂತರ ಕೂಡ ಪತ್ರಿಕೆಯನ್ನು ಓದಿ ಸ್ಯಾಂಡ್ವಿಚ್ ತಿಂದು ವಾಕಿಂಗ್ ಮಾಡುತ್ತೇನೆ ಎಂದಿದ್ದಾರೆ. ಬೆಳಗ್ಗೆ ಯಾವುದಾದರು ಮೇಲ್ ಗಳಿದ್ದರೆ ಉತ್ತರಿಸುತ್ತೇನೆ ತದನಂತರ ಯಾವುದೇ ಕೆಲಸವು ಕೂಡ ನನಗೆ ಇರುವುದಿಲ್ಲ ಎಂದು ಕೋರ್ಟಿನಲ್ಲಿ ಅಲೆಸ್ಟರ್ ಮಿಲ್ಸ್ ದೂರು ದಾಖಲಿಸಿದ್ದಾರೆ.

ಕಂಪನಿಯು ಉದ್ದೇಶಪೂರ್ವಕವಾಗಿ ನನಗೆ ಈ ರೀತಿ ಮಾಡುತ್ತಿದೆ ನನಗೆ ಯಾವುದೇ ಕೆಲಸವನ್ನು ಕೊಡುತ್ತಿಲ್ಲ ಎಂದು ಕೋರ್ಟಿಗೆ ಆಲೆಸ್ಟಾರ್ ಮಿಲ್ಸ್ ತಿಳಿಸಿದ್ದು ನಾನು ಕಳೆದ 9 ವರ್ಷದಿಂದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಒಮ್ಮೆ ಕಂಪನಿಯ ಹಣಕಾಸಿನ ಲೋಪ ದೋಷದ ಬಗ್ಗೆ ಪ್ರಶ್ನೆ ಮಾಡಿದ್ದೆ ಆಗ ಕಂಪನಿಯವರು ನನ್ನ ಮೇಲೆ ಸಿಟ್ಟು ಮಾಡಿಕೊಂಡು ನನಗೆ ಯಾವುದೇ ಕೆಲಸವನ್ನು ನೀಡದೆ ಈ ರೀತಿ ಮಾಡುತ್ತಿದ್ದಾರೇ ಈ ರೀತಿ ನನಗೆ ಕೆಲಸವೇ ಇಲ್ಲದಿರುವುದು ನನಗೆ ಒಂದು ರೀತಿ ಶಿಕ್ಷೆ ಅನುಭವಿಸಿದಂತೆ ಆಗುತ್ತಿದೆ ಆದ್ದರಿಂದ ನನಗೆ ಸೂಕ್ತವಾದ ಕೆಲಸವನ್ನು ನೀಡಿದರೆ ಉತ್ಸಾಹದಿಂದ ನಾನು ಕೆಲಸ ಮಾಡುತ್ತೇನೆ ಎಂದು ಮಿಲ್ಸ್ ಕೋರ್ಟ್ ಗೆ ಅರ್ಜಿ ಸಮೇತ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *