ಜಿಯೋ ಕಂಪನಿಯಿಂದ ಇಷ್ಟು ದಿನಗಳವರೆಗೂ ಎಲ್ಲರಿಗೂ ಜಿಯೋ ಲ್ಯಾಪ್ಟಾಪ್ ದೊರೆಯುತ್ತಿತ್ತು ಆದರೆ ಅಂತಿಮವಾಗಿ ಭಾರತ ದೇಶಕ್ಕೂ ಕೂಡ ಈ ಜಿಯೋ ಬುಕ್ ಲ್ಯಾಪ್ಟಾಪ್ಗಳು(jio book) ಲಗ್ಗೆ ಇಟ್ಟಿದ್ದು ಎಲ್ಲರ ಕೈಗೆಟಕುವ ಬೆಲೆಯಲ್ಲಿ ಜಿಯೋ ಕಂಪನಿ ಬಿಡುಗಡೆಗೊಳಿಸಿದೆ ಆದರೆ ಜಿಯೋ ಕಂಪನಿ ಇಲ್ಲಿಯವರೆಗೂ ಕೂಡ ಜಿಯೋ ಬುಕ್ ಲ್ಯಾಪ್ಟಾಪ್ ಅಧಿಕೃತ ಬೆಲೆಯನ್ನು ಬಹಿರಂಗಪಡಿಸಿಲ್ಲ.
ರಿಲಯನ್ಸ್ ಡಿಜಿಟಲ್ ಸ್ಟೋರ್ ಇಂದ ಎಲ್ಲರಿಗೂ ಕೂಡ ಇದೀಗ ಜಿಯೋ ಬುಕ್ ಲ್ಯಾಪ್ಟಾಪ್ಗಳು ಲಭ್ಯವಿದ್ದು ಚಿಲ್ಲರೆ ವ್ಯಾಪಾರಿಗಳಿಗೆ ಇಂದಿಗೂ ಕೂಡ ಅದರ ನಿಖರವಾದ ಬೆಲೆಯನ್ನು ಜೀಯೋ ಕಂಪನಿ ತಿಳಿಸಿಲ್ಲ ಆದರೆ ಜಿಯೋ ಬುಕ್ ಲ್ಯಾಪ್ಟಾಪ್ ಗಳು ಆನ್ಲೈನ್ ನಲ್ಲಿ ಲಭ್ಯವಿದ್ದು ಇದನ್ನು ಪ್ರತಿಯೊಬ್ಬ ವ್ಯಾಪಾರಿಯೂ ಪ್ರತಿಯೊಬ್ಬ ಪ್ರಜೆಯೂ ಕೂಡ ಪಳೆದುಕೊಳ್ಳಬಹುದು
ಜಿಯೋ ಬುಕ್ ಲ್ಯಾಪ್ಟಾಪ್ ಬೆಲೆ ಭಾರತದಲ್ಲಿ 15,799 ರೂಪಾಯಿಗಳಾಗಿದ್ದು ಆದರೆ ಲ್ಯಾಪ್ಟಾಪ್ ಮೇಲೆ ಎಂಆರ್‌ಪಿ ಪ್ರೈಸ್ ಅನ್ನು 35,65 ರೂಪಾಯಿ ಎಂದು ನಮೂದಿಸಿದ್ದಾರೆ. ಈ ಹೊಸ ಜಿಯೋ ಬುಕ್ ಲ್ಯಾಪ್ಟಾಪ್ ಗಳನ್ನು 15799 ರೂಪಾಯಿಗೆ ಮಾರಾಟ ಮಾಡುವುದಾಗಿ ಜಿಯೋ ಕಂಪನಿ ತಿಳಿಸಿದೆ. ಈ ಹೊಸ ಜಿಯೋ ಬುಕ್ ಲ್ಯಾಪ್ಟಾಪ್ ಗಳನ್ನು ಆನ್ಲೈನ್ ನ ಮೂಲಕ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಇಎಂಐ ವಹಿವಾಟಿನ ಮೂಲಕ 5000 ರೂಪಾಯಿ ರಿಯಾಯಿತಿ ಪಡೆಯುವ ಮೂಲಕ ಖರೀದಿಸಬಹುದು.
ಜಿಯೋ ಬುಕ್ ವಿಶೇಷತೆಗಳು
ಭಾರತದಲ್ಲಿ ಲಭ್ಯವಿರುವ ಎಲ್ಲಾ ಜೀಯೋ ಬುಕ್ ಗಳು ಒಂದೇ ಬಣ್ಣದಲ್ಲಿದೆ ಭಾರತದಲ್ಲಿ ಕೇವಲ ನೀಲಿ ಬಣ್ಣದ ಜಿಒ ಬ್ಲೂ ಬುಕ್ಕುಗಳನ್ನು ಬಿಡುಗಡೆಗೊಳಿಸಲಾಗಿದೆ. 11.6 ಇಂಚಿನ ಪರದೆಯನ್ನು ಹೊಂದಿರುವ ಈ ಜೀಯೋ ಬುಕ್ 1336×768 ಪಿಕ್ಸೆಲ್ಗಳ ಜೊತೆಗೆ ಬರುತ್ತದೆ. ಈ ಜೀವ ಬುಕ್ಕಿನ ಮುಖಾಂತರ ವಿಡಿಯೋ ಕಾಲುಗಳನ್ನು ಮಾಡಬಹುದು ಜಿಯೋ ಬುಕ್ ಸ್ಪೀಕರ್ ಸಹ ಇರುತ್ತದೆ ಹಾಗೆ 2Mp ವೆಬ್ ಕ್ಯಾಮೆರಾ, HDMI ಪೋರ್ಟ್, ಲ್ಯಾಪ್ಟಾಪ್ ವೈಫೈ ಬ್ಲೂಟೂತ್ ಎಲ್ಲದನ್ನು ಸಂಪರ್ಕಗೊಳಿಸುವ ಟೆಕ್ನಾಲಜಿಯನ್ನು ಬಳಸಲಾಗಿದೆ.
ಜಿಯೋ ಬುಕ್ 3.5mm ಆಡಿಯೋ ಜಾಕ್, 128 ಜಿಬಿ ಮೈಕ್ರೋ SD ಕಾರ್ಡ್ 5,000 mah ಬ್ಯಾಟರಿ ಒಂದು ವರ್ಷದ ವಾರಂಟಿ 32 GB , Emmc ಮೆಮೊರಿ ಹೊಂದಿದೆ ಈ ಜಿಯೋ ಬುಕ್ಕು jio Os ಮುಖಾಂತರ ಕೆಲಸ ಮಾಡುತ್ತದೆ. Jio 4G LTE ಟೆಕ್ನಾಲಜಿಯನ್ನು ಕೂಡ ಇದರಲ್ಲಿ ಜೋಡಿಸಿದ್ದು ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಜೀಯೊ ಬ್ಯಾಟರಿ ಎಂಟು ಗಂಟೆಗಳವರೆಗೂ ಕೆಲಸ ಮಾಡುತ್ತದೆ. ಈ ಜಿಯೋ ಬುಕ್ ಮೇಡ್ ಇನ್ ಇಂಡಿಯಾ ವಾಗಿದ್ದು ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ.