ಗೌಪ್ಯವಾಗಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಿದ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು

ಬಾಲ ನಟಿಯಾಗಿ ದರ್ಶನ್ ಅಭಿನಯದ ಲಾಲಿ ಹಾಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ಅಮೂಲ್ಯ ತಮ್ಮ ವಯಸ್ಸು 16 ವರ್ಷವಿದ್ದಾಗ ನಟ ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಟಿಸಿ ತಮ್ಮ ಮುಗ್ಧ ಮಾತುಗಳಿಂದ ಕರ್ನಾಟಕದ ಜನತೆಯ ಮನಸ್ಸನ್ನು ಗೆದ್ದಿದ್ದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆಗೆ ಶ್ರಾವಣಿ ಸುಬ್ರಮಣ್ಯ ಚಿತ್ರ, ಯಶ್ ಜೊತೆಗಿನ ಗಜಕೇಸರಿ, ಪ್ರೇಮ್ ಅಭಿನಯದ ಮಳೆ, ದುನಿಯಾ ವಿಜಯ್ ಜೊತೆಗೆ ಮಾಸ್ತಿಗುಡಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿ ಅಮೂಲ್ಯ ನಟಿಸಿದ್ದಾರೆ.

 

 

ನಟಿ ಅಮೂಲ್ಯರವರು ರಾಜಕೀಯಕ್ಕೆ ಸೇರಿದ ಕುಟುಂಬದ ಮಗನಾದ ಜಗದೀಶ್ ಎನ್ನುವವರ ಜೊತೆ ವಿವಾಹವಾಗುತ್ತಾರೆ. ನಂತರ ನಟಿ ಅಮೂಲ್ಯರವರ ಸೀಮಂತ ಕಾರ್ಯಕ್ರಮ ನಡೆದಿತ್ತು ಆ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಬಹುತೇಕ ನಟ ನಟಿಯರು ಕೂಡ ಭಾಗವಹಿಸಿದ್ದರು. ಜಗದೀಶ್ ರವರ ಕುಟುಂಬ ಒಂದು ಸಾಂಪ್ರದಾಯಿಕ ಕುಟುಂಬವಾಗಿದ್ದು. ಅಮೂಲ್ಯ ರವರ ಅವಳಿ ಜವಳಿ ಮಕ್ಕಳು ಜನಿಸಿದ ನಂತರ ಅವರಿಗೆ ಹೆಸರನ್ನು ಸೂಚಿಸಲು ತಮ್ಮ ಮನೆ ದೇವರಾದ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋಗಿ ಗುರುಗಳ ಬಳಿ ಆಶೀರ್ವಾದ ಪಡೆದು ತಮ್ಮ ಮಕ್ಕಳಿಗೆ ಹೆಸರನ್ನು ಸೂಚಿಸುವಂತೆ ಕೋರಿಕೊಂಡಿದ್ದಾರೆ.

 

 

ನಟಿ ಅಮೂಲ್ಯ ಹಾಗೂ ಜಗದೀಶ್ ರವರ ವಿವಾಹವು ಕೂಡ ಆದಿಚುಂಚನಗಿರಿ ಕ್ಷೇತ್ರದಲ್ಲೇ ನಡೆದಿತ್ತು. ಇವರ ಕುಟುಂಬ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ಎಲ್ಲಾ ಕಟ್ಟುನಿಟ್ಟುಗಳನ್ನು ಪಾಲಿಸುತ್ತದೆ. ಆದ್ದರಿಂದಲೇ ತಮ್ಮ ಅವಳಿ ಮಕ್ಕಳಿಗೂ ಹೆಸರನ್ನು ಸೂಚಿಸುವಂತೆ ದೇವರನ್ನು ಬೇಡಿಕೊಳ್ಳಲು ಆದಿಚುಂಚನಗಿರಿಗೆ ಹೋಗಿದ್ದಾರೆ.

 

ನಟಿ ಅಮೂಲ್ಯ ರವರ ಅವಳಿ ಮಕ್ಕಳಿಗೆ ಏನೆಂದು ಹೆಸರಿಡುತ್ತಾರೆ ಆ ಮಕ್ಕಳ ನಾಮಕರಣ ಯಾವಾಗ ಎಂದು ನಟಿ ಅಮೂಲ್ಯ ಹಾಗೂ ಜಗದೀಶ್ ರವರು ಇನ್ನು ಬಹಿರಂಗ ಪಡಿಸಿಲ್ಲ. ಅವರು ಯಾವಾಗ ಮಕ್ಕಳ ನಾಮಕರಣವನ್ನು ಮಾಡುತ್ತಾರೆ ಎಂದು ಕಾದು ನೋಡೋಣ.

Be the first to comment

Leave a Reply

Your email address will not be published.


*