ಅವಳಿ ಮಕ್ಕಳ ಮುಡಿಯನ್ನು ತಿರುಪತಿಗೆ ನೀಡಿದ ಅಮೂಲ್ಯ ದಂಪತಿಗಳು:ಅಥರ್ವ ಹಾಗೂ ಆದವ್ ಹೊಸ ಲುಕ್

ಇತ್ತೀಚಿಗಷ್ಟೇ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನಡೆಸಿದ್ದರು. ಹಲವಾರು ಸ್ಟಾರ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ತಮ್ಮ ಮಕ್ಕಳ ನಾಮಕರಣವನ್ನು ನೆರವೇರಿಸಿ ತಮ್ಮ ಮಕ್ಕಳಿಗೆ ಪ್ರೀತಿಯಿಂದ ಅಥರ್ವ ಆದವ್ ಎಂದು ಹೆಸರನ್ನು ಕೂಡ ಇಟ್ಟಿದ್ದರು. ನಾಮಕರಣದ ಬೆನ್ನಲ್ಲೇ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಅವಳಿ ಮಕ್ಕಳ ಮುಡಿಯನ್ನು ತಿರುಪತಿಯಲ್ಲಿ ನೀಡಿದ್ದು ತಿರುಪತಿಯಲ್ಲಿ ತಮ್ಮ ಅವಳಿ ಮಕ್ಕಳಿಗೆ ಮುಡಿ ಕೊಡುವ ಶಾಸ್ತ್ರವನ್ನು ಕೂಡ ಮಾಡಿ ಮುಗಿಸಿದ್ದಾರೆ.

 

 

ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ಇತ್ತೀಚಿಗಷ್ಟೇ ತಮ್ಮ ಮುದ್ದಾದ ಮಕ್ಕಳ ನಾಮಕರಣ ಶಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದರು ನಾಮಕರಣ ಶಾಸ್ತ್ರಕ್ಕೆ ಕನ್ನಡದ ಹಲವಾರು ಸ್ಟಾರ್ ನಟ ನಟಿಯರು ಬಂದು ಉಡುಗೊರೆಗಳನ್ನು ನೀಡಿ ಹಾರೈಸಿದ್ದರು. ಇದೇ ಸೆಪ್ಟೆಂಬರ್ ಹತ್ತರಂದು ಒಂದು ಖಾಸಗಿ ಹೋಟೆಲ್ ನಲ್ಲಿ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರ ನಡೆದಿದ್ದು ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ ನಾ ಅನೇಕ ಗಣ್ಯರು ಹಾಜರಿದ್ದರು ಅಮೂಲ್ಯ ಮಕ್ಕಳ ನಾಮಕರಣದ ಫೋಟೋಗಳು ಇದೀಗ ಎಲ್ಲಾ ಕಡೆ ವೈರಲ್ ಆಗಿದ್ದು ನೆಟ್ಟಿಗರು ಎಲ್ಲಾ ಕಡೆ ನೆಟ್ಟಿಗರು ವೈರಲ್ ಮಾಡುತ್ತಲೆ ಇದ್ದಾರೆ.

 

 

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ನಾಮಕರಣವನ್ನು ಮಾಡಿದ್ದು ನಾಮಕರಣ ಸಮಾರಂಭದಲ್ಲಿ ಗಣೇಶ್ ಹಾಗೂ ಶಿಲ್ಪಾ ದಂಪತಿಗಳು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್, ಅಜಯ್ ರಾವ್ ,ದರ್ಶನ್ ಮುಂತಾದವರು ಭಾಗಿಯಾಗಿದ್ದರು ಈ ನಾಮಕರಣ ಸಮಾರಂಭದಲ್ಲಿ ಅಥರ್ವ ಹಾಗೂ ಆದವ್ ಅಂಬಾರಿಯ ಮೇಲೆ ಕುಳಿತು ಕಂಗೊಳಿಸುತ್ತಿದ್ದರು.

 

 

ನಾಮಕರಣಕ್ಕೂ ಮುಂಚಿತವಾಗಿ ತಮ್ಮ ಮನೆಯ ದೇವರದ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿ ಸನ್ನಿಧಾನದಲ್ಲಿ ತಮ್ಮ ಮಕ್ಕಳ ನಾಮಕರಣ ಶಾಸ್ತ್ರಕ್ಕಾಗಿ ಒಂದು ದಿನವನ್ನು ಗುರುತು ಮಾಡಿಕೊಂಡು ಬಂದಿದ್ದ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಒಂದು ಖಾಸಗಿ ಹೋಟೆಲಲ್ಲಿ ಅದ್ದೂರಿ ಆಗಿ ನೆರವೇರಿಸಿದ್ದರು. ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳು ನಾಮಕರಣ ಶಾಸ್ತ್ರದಲ್ಲಿ ಕಂಗೊಳಿಸುತ್ತಿದ್ದು ಈ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ.

Be the first to comment

Leave a Reply

Your email address will not be published.


*