ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಜವಳಿ ಗಂಡು ಮಕ್ಕಳ ನಾಮಕರಣ ಶಾಸ್ತ್ರ

ನಟಿ ಅಮೂಲ್ಯ ರವರು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು ಮಕ್ಕಳ ಮುದ್ದಾದ ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಹಂಚಿಕೊಳ್ಳುತ್ತಿದ್ದರು. ನಟಿ ಅಮೂಲ್ಯ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ತಮ್ಮ ಮಕ್ಕಳ ಹೆಸರಿನ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇಂದು ನಟಿಯ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಅವಳಿ ಜವಳಿ ಗಂಡು ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ.

 

 

ಇಂದು ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಮಾಡಿದ್ದು ತಮ್ಮ ಅವಳೇ ಜವಳಿ ಗಂಡು ಮಕ್ಕಳಿಗೆ ಅಥರ್ವ ಹಾಗೂ ಆದವ್ ಎಂದು ನಾಮಕರಣವನ್ನು ಮಾಡಿದ್ದಾರೆ.ಶಾಸ್ತ್ರೋಕ್ತವಾಗಿ ತಮ್ಮ ಅವಳಿ ಜವಳಿ ಮಕ್ಕಳ ನಾಮಕರಣವನ್ನು ನೆರವೇರಿಸಿದ ನಟಿ ಅಮೂಲ್ಯ ಹಾಗು ಜಗದೀಶ್ ದಂಪತಿಗಳು ಮಕ್ಕಳ ನಾಮಕರಣದಲ್ಲಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಹಾಜರಿದ್ದರು.

 

ನಟಿ ಅಮೂಲ್ಯ ತಮ್ಮ ಮಕ್ಕಳಿಗೆ ಯಾವ ಅಕ್ಷರದಿಂದ ಶುರುವಾಗುವ ಹೆಸರನ್ನು ಇಡಬೇಕು , ಯಾವ ದಿನದಂದು ನಾಮಕರಣವನ್ನು ಮಾಡಬೇಕು ಎಂದು ಆದಿಚುಂಚನಗಿರಿಯ ಸ್ವಾಮಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳ ಬಳಿ ಈ ಹಿಂದೆಯೇ ಕೇಳಿ ತಿಳಿದುಕೊಂಡಿದ್ದರು.

 

 

View this post on Instagram

 

A post shared by Amulya (@nimmaamulya)

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಕುಟುಂಬವು ಸಾಂಪ್ರದಾಯಸ್ಥ ಕುಟುಂಬವಾಗಿದ್ದು ಕುಟುಂಬದಲ್ಲಿ ಯಾವುದೇ ಶುಭ ಕಾರ್ಯವನ್ನು ನೆರವೇರಿಸಬೇಕಾಗಿದ್ದಲ್ಲಿ ಆದಿಚುಂಚನಗಿರಿಗೆ ಹೋಗಿ ದೇವರ ದರ್ಶನ ಮಾಡಿ ಪೂಜೆ ಮಾಡಿಸಿ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಬಳಿ ಆ ಕಾರ್ಯದ ಒಳಿತು ಕೆಡುಕುಗಳ ಬಗ್ಗೆ ಕೇಳಿ ತಿಳಿದುಕೊಂಡು ನಂತರ ಪ್ರಾರಂಭಿಸುತ್ತಾರೆ.

 

 

ಇಂದು ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಜವಳಿ ಗಂಡು ಮಕ್ಕಳ ನಾಮಕರಣ ನೆರವೇರಿದ್ದು ತಮ್ಮ ಅವಳಿ ಜವಳಿ ಗಂಡು ಮಕ್ಕಳಿಗೆ ಇಂದು ನಾಮಕರಣವನ್ನು ಮಾಡಿದ್ದಾರೆ. ಮಕ್ಕಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಟಿ ಅಮೂಲ್ಯ ಅವರ ಅಭಿಮಾನಿಗಳೆಲ್ಲರೂ ಮಕ್ಕಳಿಗೆ ಶುಭವನ್ನು ಹಾರೈಸಿದ್ದಾರೆ.

Be the first to comment

Leave a Reply

Your email address will not be published.


*