ಅಮೂಲ್ಯ ಮಕ್ಕಳ ನಾಮಕರಣಕ್ಕೆ ಪತ್ನಿ ವಿಜಯಲಕ್ಷ್ಮಿ ಜೊತೆ ಬಂದು ಭರ್ಜರಿ ಉಡುಗೊರೆ ನೀಡಿದ ಡಿ ಬಾಸ್ ದರ್ಶನ್

ನಟ ದರ್ಶನ್ ಜೊತೆ ಲಾಲಿ ಹಾಡು ಚಿತ್ರದ ಮೂಲಕ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ಅಮೂಲ್ಯ ತದನಂತರ ನಾಯಕನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ನಟಿ ಅಮೂಲ್ಯ ರವರು ಜಗದೀಶ್ ಎನ್ನುವ ಉದ್ಯಮಿಯೊಡನೆ ವಿವಾಹವಾಗಿದ್ದು ತಮ್ಮ ವಿವಾಹದ ನಂತರ ಯಾವುದೇ ಚಿತ್ರದಲ್ಲೂ ನಟಿಯ ಅಮೂಲ್ಯ ಕಾಣಿಸಿಕೊಂಡಿಲ್ಲ. ಉದ್ಯಮಿ ಜಗದೀಶ್ ರವರನ್ನು ಕೆಲವು ವರ್ಷಗಳ ಹಿಂದೆ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿವಾಹವಾದ ನಟಿಯ ಅಮೂಲ್ಯ ಹಲವು ತಿಂಗಳುಗಳ ಹಿಂದೆ ಅವಳಿ ಜವಳಿ ಮಕ್ಕಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.

 

 

ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಇತ್ತೀಚೆಗೆ ಅದ್ದೂರಿಯಾಗಿ ಮಾಡಿದ್ದು ಹೆಚ್ಚು ಸಂಪ್ರದಾಯಸ್ತ ಕುಟುಂಬದವರಾದ ಅಮೂಲ್ಯ ಮತ್ತು ಜಗದೀಶ್ ಆದಿಚುಂಚನಗಿರಿ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗೆ ಹೋಗಿ ಅಲ್ಲಿ ತಮ್ಮ ಮಕ್ಕಳ ಹೆಸರಿನಲ್ಲಿ ಪೂಜೆಯನ್ನು ಮಾಡಿಸಿ ತಮ್ಮ ಮಕ್ಕಳಿಗೆ ಯಾವ ಅಕ್ಷರದಿಂದ ಶುರುವಾಗುವ ಹೆಸರನ್ನು ಇಡಬೇಕು ಹಾಗೂ ಯಾವ ದಿನದಂದು ನಾಮಕರಣ ಶಾಸ್ತ್ರವನ್ನು ಮಾಡಿದರೆ ಮಕ್ಕಳಿಗೆ ಒಳ್ಳೆಯದು ಎಂದು ತಿಳಿದುಕೊಂಡು ಇದೀಗ ನಾಮಕರಣ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ಮಾಡಿದ್ದಾರೆ.

ನೆನ್ನೆ ತಾನೆ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಮುದ್ದು ಅವಳಿ ಗಂಡು ಮಕ್ಕಳಿಗೆ ಹೆಸರನ್ನಿಟ್ಟಿದ್ದು ಆ ಮಕ್ಕಳಿಗೆ ಅಥರ್ವ ಹಾಗೂ ಆರವ್ ಎಂದು ನಾಮಕರಣವನ್ನು ಮಾಡಿದ್ದಾರೆ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ನ ಹಲವಾರು ನಟ ನಟಿಯರು ಕೂಡ ಆಗಮಿಸಿ ಮಕ್ಕಳಿಗೆ ಹಾರೈಸಿದ್ದಾರೆ.

 

 

ನಟಿ ಅಮೂಲ್ಯ ರವರಿಗೆ ಆಪ್ತರಾಗಿರುವ ಡಿ ಬಾಸ್ ದರ್ಶನ್ ಕೂಡ ತಮ್ಮ ಪತ್ನಿ ವಿಜಯ್ ಲಕ್ಷ್ಮಿ ಜೊತೆಗೆ ಅಮೂಲ್ಯ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಬಂದು ಮಕ್ಕಳಿಗೆ ಹಾರೈಸಿ ಭರ್ಜರಿ ಉಡುಗೊರೆಯನ್ನು ಕೂಡ ನೀಡಿದ್ದಾರೆ. ನಟ ಡಿ ಬಾಸ್ ದರ್ಶನ್ ರವರು ಅಮೂಲ್ಯ ರವರನ್ನು ಪ್ರೀತಿಯಿಂದ ಮಾತನಾಡಿಸಿ ಅಮೂಲ್ಯ ರವರ ಇಬ್ಬರು ಮಕ್ಕಳನ್ನು ಮುದ್ದು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಮೂಲ್ಯ ಅವಳಿ ಮಕ್ಕಳಿಗೆ ಡೈಮಂಡ್ ರಿಂಗ್ ಅನ್ನು ನೀಡಿದ್ದಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿ ಬರುತ್ತಿದೆ. ನಟ ಡಿ ಬಾಸ್ ದರ್ಶನ್ ರವರು ಅಮೂಲ್ಯ ರವರ ಅವಳಿ ಮಕ್ಕಳ ನಾಮಕರಣಕ್ಕೆ ಬಂದಿದ್ದನ್ನು ನೋಡಿ ಡಿ ಬಾಸ್ ಅಭಿಮಾನಿಗಳು ಹಾಗೂ ಅಮೂಲ್ಯ ಕುಟುಂಬದವರು ತುಂಬಾ ಸಂತೋಷಪಟ್ಟಿದ್ದಾರೆ.

Be the first to comment

Leave a Reply

Your email address will not be published.


*