ದರ್ಶನ್ ಅಂಕಲ್: ನಟಿ ಅಮೂಲ್ಯ ಅವಳಿ ಜವಳಿ ಮಕ್ಕಳ ನಾಮಕರಣ ಶಾಸ್ತ್ರದಲ್ಲಿ ಡಿ ಬಾಸ್ ದರ್ಶನ್

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳಿಗೆ ಅವಳಿ ಜವಳಿ ಗಂಡು ಮಕ್ಕಳ ಜನಿಸಿದ್ದು ಆ ಮಕ್ಕಳ ನಾಮಕರಣ ಶಾಸ್ತ್ರವನ್ನು ಗುರುಹಿರಿಯರು ಅತಿಥಿಗಳು ಸ್ನೇಹಿತರ ಸಮ್ಮುಖದಲ್ಲಿ ನೆರವೇರಿಸಿದ್ದಾರೆ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ಹಾಗೂ ಅವರ ಅವಳಿ ಜವಳಿ ಗಂಡು ಮಕ್ಕಳು ಕೆಂಪು ಹಾಗೂ ನೀಲಿ ಬಣ್ಣದ ಡ್ರೆಸ್ ಕೋಡ್ ಮೂಲಕ ನಾಮಕರಣ ಶಾಸ್ತ್ರದಲ್ಲಿ ಮಿಂಚಿದ್ದಾರೆ.

 

 

ನಾಮಕರಣ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ನ ಹಲವಾರು ನಟ ನಟಿಯರು ರಾಜಕೀಯ ಗಣ್ಯರು ಕೂಡ ಆಗಮಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ದಂಪತಿಗಳು, ಡಿ ಬಾಸ್ ದರ್ಶನ್,ಶಿವಣ್ಣ,ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಮಿಲನ ನಾಗರಾಜ್, ಡಾರ್ಲಿಂಗ್ ಕೃಷ್ಣ, ತಾರುಣ್ಯ ರಾಮ್ ,ತಾರ , ನಟ ಅನಿರುದ್ ಹಾಗೂ ಅನಿರುದ್ ಪತ್ನಿ ಕೀರ್ತಿ ವಿಷ್ಣುವರ್ಧನ್ ,ಪ್ರಿಯಾಂಕ ಉಪೇಂದ್ರ, ನೆನಪಿರಲಿ ಪ್ರೇಮ್ ದಂಪತಿ, ಸೃಜನ್ ಲೋಕೇಶ್ ,ಅಜಯ್ ರಾವ್ ಕಿರುತೆರೆ ಹಾಗೂ ಹಿರಿತೆರೆ ಯ ಹಲವಾರು ನಟ ನಟಿಯರು ಆಗಮಿಸಿ ಅಮೂಲ್ಯ ಅವಳಿ ಜವಳಿ ಮಕ್ಕಳಾದ ಯಥರ್ವ ಹಾಗೂ ಆರಾವ್ ಗೆ ಉಡುಗೊರೆಗಳನ್ನು ನೀಡಿ ಆಶಿರ್ವದಿಸಿದರು.

 

ನಟಿ ಅಮೂಲ್ಯ ಹೆಚ್ಚು ಸಂಪ್ರದಾಯಸ್ತ ಕುಟುಂಬದವರಾದ್ದರಿಂದ ಈ ಮೊದಲೇ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮನೆ ದೇವರು ಆದಿ ಚುಂಚನ ಗಿರಿ ಕಾಲ ಭೈರವೇಶ್ವರ ಸನ್ನಿಧಿಗೆ ಹೋಗಿ ದೇವರ ಪೂಜೆ ಮಾಡಿಸಿ ಗುರುಗಳ ಬಳಿ ತಮ್ಮ ಅವಳಿ ಮಕ್ಕಳ ನಾಮಕರಣ ಶಾಸ್ತ್ರ ವನ್ನು ಯಾವಾಗ ಮಾಡಬೇಕು ಎಂದು ದಿನಾಂಕ ನಿಶ್ಚಯಿಸಿ ಕೊಂಡು ಬಂದಿದ್ದರು ಹಾಗೆಯೇ ತಮ್ಮ ಅವಳಿ ಮಕ್ಕಳಿಗೆ ಯಾವ ಅಕ್ಷರದಿಂದ ಶುರುವಾದ ಹೆಸರನ್ನು ಇಡಬೇಕು ಎಂದು ಕೂಡ ಕೇಳಿ ತಿಳಿದುಕೊಂಡು ಬಂದಿದ್ದರು . ಇದೀಗ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮಕ್ಕಳಿಗೆ ಅಥರ್ವ ಹಾಗೂ ಆರವ ಎಂದು ನಾಮಕರಣ ಮಾಡಿದ್ದಾರೆ.

 

 

ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಸಮಾರಂಭಕ್ಕೆ ಡಿ ಬಾಸ್ ದರ್ಶನ್ ಕೂಡ ಆಗಮಿಸಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ.ನಟಿ ಅಮೂಲ್ಯ ಬಾಲ ನಟಿಯಾಗಿ ದರ್ಶನ್ ಅಭಿನಯದ ಲಾಲಿ ಹಾಡು ಚಿತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು. ಅಮೂಲ್ಯಗೆ ಬಾಲ್ಯದಿಂದಲೂ ಕೂಡ ದರ್ಶನ್ ರವರ ಜೊತೆ ಹೆಚ್ಚು ಒಡನಾಟವನ್ನು ಹೊಂದಿದ್ದಾರೆ. ದರ್ಶನ್ ರನ್ನು ಪ್ರೀತಿಯಿಂದ ಅಂಕಲ್ ಎಂದು ಕರೆಯುತ್ತಿದ್ದರಂತೆ. ಈಗಲೂ ಕೂಡ ದರ್ಶನ್ ರನ್ನು ಅಮೂಲ್ಯ ಅಂಕಲ್ ಇಂದ ಕರೆಯುತ್ತಾರೆ.

 

 

ನಟಿಯ ಅಮೂಲ್ಯ ಬಾಲ ನಟಿಯಾಗಿ ದರ್ಶನ್ ಅಭಿನಯದ ಲಾಲಿಹಾಡು ಚಿತ್ರದ ಮೂಲಕ ಖ್ಯಾತಿಯನ್ನು ಪಡೆದು ತದನಂತರ ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪ್ರವೇಶವನ್ನು ಪಡೆಯುತ್ತಾರೆ. ಅಂದಿನಿಂದ ಇಂದಿನವರೆಗೂ ನಟ ದರ್ಶನ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇನ್ನಿತರ ನಟರ ಜೊತೆ ಅಮೂಲ್ಯ ರವರು ಹೆಚ್ಚು ಒಡನಾಟವನ್ನು ಹೊಂದಿದ್ದಾರೆ.

Be the first to comment

Leave a Reply

Your email address will not be published.


*