ನನ್ನನ್ನು ನಾನು ನೋಡಿಕೊಳ್ಳುವುದೇ ಕಷ್ಟವಾಗಿದೆ ಅವನನ್ನು ಎಲ್ಲಿ ನೋಡಿಕೊಳ್ಳಲಿ:ಅವನ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ

ನಟಿ ಅಮೃತ ಅಯ್ಯಂಗಾರ್ ರವರು ಮಿಲನ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮೊಕ್ಟೇಲ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ತದನಂತರ ಡಾಲಿ ಧನಂಜಯ್ರವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲೂ ನಟಿಸಿ ಸಕ್ಸಸ್ ಆದರು ಅನೂಪ್ ಬಂಡಾರಿರವರ ಜೊತೆಗೆ ವಿಂಡೋ ಸೀಟ್ ಎನ್ನುವ ಚಿತ್ರದಲ್ಲೂ ಕೂಡ ನಟಿಸಿದ್ದಾರೆ. ಇದಾದ ಹಲವು ವರ್ಷಗಳ ನಂತರ ಮತ್ತೆ ಅದೇ ಡಾಲಿ ಧನಂಜಯ್ ರವರ ಜೊತೆಗೆ ಬಡವ ರಾಸ್ಕಲ್ ಎಂಬ ಚಿತ್ರದಲ್ಲಿ ಅಭಿನಯಿಸಿ ಆ ಚಿತ್ರವು ಕೂಡ ಸೂಪರ್ ಡೂಪರ್ ಹಿಟ್ ಆಯಿತು.

 

 

ನಟಿ ಅಮೃತ ಅಯ್ಯಂಗಾರ್ ಇದೀಗ ಹಲವು ಸಿನಿಮಾಗಳ ನಂತರ ಮಿಲನ ನಾಗರಾಜ್ ರವರ ಜೊತೆಗೆ “ಓ” ಎನ್ನುವ ಒಂದು ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡ ಡಾರ್ಲಿಂಗ್ ಕೃಷ್ಣ ನಿಶ್ವಿಕ ನಾಯ್ಡು ಮೇಘ ಶೆಟ್ಟಿ ಅಭಿನಯದ ದಿಲ್ ಪಸಂದ್ ಚಿತ್ರ ರಿಲೀಸ್ ಆಗುವ ಡೇಟನಲ್ಲಿ ರಿಲೀಸ್ ಆಗುತ್ತಿತ್ತು ಈ ಎರಡು ಚಿತ್ರಕ್ಕೂ ಜಟಾಪಟಿ ಶುರುವಾಗಿದೆ. ಮಿಲನ ನಾಗರಾಜ್ ಹಾಗು ಅಮೃತ ಅಯ್ಯಂಗಾರ್ ನಟಿಸುತ್ತಿರುವ ಓ ಚಿತ್ರ ಹಾರರ್ ಸಿನಿಮಾವಾಗಿದ್ದು ಇದರ ಬಗ್ಗೆ ಹೆಚ್ಚು ಪ್ರಮೋಷನ್ ಕೂಡ ನಡೆದಿಲ್ಲ.

 

 

ಹಾಗಾಗಿ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ ಅಮೃತ ಅಯ್ಯಂಗಾರ್ ಹಾಗೂ ಮಿಲನ ನಾಗರಾಜ್ ತಮ್ಮ ಸಿನಿಮಾದ ಪ್ರಮೋಶನ್ ಅನ್ನು ಮಾಡುತ್ತಿದ್ದಾರೆ. ನಟಿ ಅಮೃತ ಅಯ್ಯಂಗಾರ್ ಸಂದರ್ಶನ ಒಂದರಲ್ಲಿ ಮಾತನಾಡಿ ನನಗೆ ಆಟೋ ಎಂದರೆ ತುಂಬಾ ಇಷ್ಟ ನಾನು ಚಿಕ್ಕವಳಿದ್ದಾಗಿನಿಂದಲೂ ಆಟೋದಲ್ಲಿ ಓಡಾಡಿಕೊಂಡೆ ಬೆಳದಿದ್ದೇನೆ ಆಟೋ ನಂತರ ಬೈಕ್ ಎಂದರೆ ನನಗೆ ತುಂಬಾ ಇಷ್ಟ ಕಾರು ಎಂದರೆ ನನಗೆ ಇಷ್ಟವಿಲ್ಲ ಏಕೆಂದರೆ ಅದರಲ್ಲಿ ಗಾಳಿ ಬರುವುದಿಲ್ಲ ಅದರಲ್ಲಿ ವಿಂಡೋ ಅನ್ನು ಹಾಕಿಕೊಂಡೆ ಕೂತಿರಬೇಕು ಹಾಗಾಗಿ ಅದು ಅಷ್ಟು ಇಷ್ಟವಾಗುವುದಿಲ್ಲ ಎಂದು ಹೇಳಿದರು.

 

ಅಮೃತ ಅಯ್ಯಂಗಾರ್ ರವರು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿ ನನಗೆ ಲವ್ ಮ್ಯಾಕ್ಟೈಲ್ ಚಿತ್ರವೆಂದರೆ ತುಂಬಾ ಇಷ್ಟ ಈ ಚಿತ್ರ ನನ್ನ ಕೆರಿಯರನ್ನು ಶುರು ಮಾಡಿದ್ದು ಹಾಗೂ ಈ ಚಿತ್ರದಿಂದಲೇ ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ ಬಡವ ರಾಸ್ಕಲ್ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇದರಿಂದ ನನ್ನ ಕೆರಿಯರ್ ಡೆವಲಪ್ ಮೆಂಟ್ ಆಗಿದೆ ಈ ಎರಡು ಚಿತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ ಎಂದರು.

 

 

ತದನಂತರ ಅಮೃತ ಅಯ್ಯಂಗಾರ್ ನಟಿ ರಮ್ಯಾ ಹಾಗೂ ನಟಿ ರಕ್ಷಿತಾ ರವರ ಬಗ್ಗೆ ಮಾತನಾಡಿ ನನಗೆ ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ಇಷ್ಟ ರಮ್ಯ ರವರು ಕ್ಲಾಸಿ ಲುಕ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಅಂತಹ ಸಿನಿಮಾಗಳು ಅವರಿಗೆ ಒಪ್ಪುತ್ತವೆ. ಹಾಗೆ ಮಾಸ್ ಎಂದು ತೆಗೆದುಕೊಂಡರೆ ನಟಿ ರಕ್ಷಿತಾ ರವರು ನನಗೆ ತುಂಬಾ ಇಷ್ಟ ಮಾಸ್ ಎಂದ ತಕ್ಷಣ ರಕ್ಷಿತಾ ರವರೆ ನನ್ನ ನೆನಪಿಗೆ ಬರುತ್ತಾರೆ. ಅವರ ರೀತಿ ಮಾಸ್ ಸಿನಿಮಾದಲ್ಲಿ ಹಾಗೂ ರಮ್ಯಾ ರವರ ರೀತಿ ಕ್ಲಾಸ್ ಸಿನಿಮಾಗಳಲ್ಲಿ ನಟಿಸಬೇಕು ಎಂಬುದೇ ನನ್ನ ಆಸೆ ಎಂದರು.

 

 

ಹಾಗೆಯೇ ಮಾತನಾಡುತ್ತಾ ಅಮೃತ ಅಯ್ಯಂಗಾರ್ ರವರ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ನಾನು ನನ್ನ ಲೈಫಿನಲ್ಲಿ ತುಂಬಾ ಚೆನ್ನಾಗಿದ್ದೇನೆ. ನಾನು ಸಿಂಗಲ್ ಆಗಿರುವುದಕ್ಕೆ ಹೆಚ್ಚು ಇಷ್ಟ ಪಡುತ್ತೇನೆ ನನ್ನನ್ನು ನಾನು ನೋಡಿಕೊಳ್ಳುವುದೇ ಕಷ್ಟವಾಗಿದೆ ಅವನನ್ನು ಎಲ್ಲಿ ನೋಡಿಕೊಳ್ಳಲಿ ನಾನು ಬೇರೆಯವರ ಜೀವನದಲ್ಲಿ ಹೋಗಿ ಅವನ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಸಿಂಗಲ್ ಆಗಿ ಇರಲು ಬಯಸುತ್ತೇನೆ ಎಂದರು

Be the first to comment

Leave a Reply

Your email address will not be published.


*