ಅಂಬರೀಶ್ ಸಮಾಧಿ ಬಳಿ ದರ್ಶನ್ ಹೇಳಿದ ಮಾತು ಕೇಳಿ ಕಣ್ಣೀರಿಟ್ಟ ಸುಮಲತಾ

ಕಲಿಯುಗದ ಕರ್ಣ ಎಂದೇ ಖ್ಯಾತಿಯನ್ನು ಕಳಿಸಿದ್ದ ರೆಬಲ್ ಸ್ಟಾರ್ ಅಂಬರೀಶ್ ತಮ್ಮ ಕುಟುಂಬದವರು ಹಾಗೂ ಅಭಿಮಾನಿಗಳನ್ನು ಅಗಲಿ ಇದೀಗಾಗಲೇ ನಾಲ್ಕು ವರ್ಷವಾಯಿತು. ಸದ್ಯ ಡಿ ಬಾಸ್ ದರ್ಶನ್ ರವರು ಅಂಬರೀಶ್ ರವರ ನಾಲ್ಕನೇ ವರ್ಷದ ಪುಣ್ಯತಿಥಿಗೆ ಅವರ ಸಮಾಧಿಯ ಬಳಿಗೆ ಭೇಟಿ ನೀಡಿದ್ದಾರೆ. ಸಮಾಧಿಯ ದರ್ಶನವನ್ನು ಪಡೆದ ಡಿ ಬಾಸ್ ದರ್ಶನ್ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಈ ವೇಳೆ ನಟ ಡಿ ಬಾಸ್ ದರ್ಶನ್ ರವರು ಅಂಬರೀಶ್ ರವರ ಬಗ್ಗೆ ಹೇಳಿದ ಒಂದು ಮಾತನ್ನು ಕೇಳಿ ಅಂಬರೀಶ್‍ರವರ ಪತ್ನಿ ಸುಮಲತಾ ಅವರು ಕಣ್ಣೀರು ಹಾಕಿದ್ದಾರೆ.

ನಟಿ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ಸುಮಲತಾ ರವರ ಅಂಬರೀಶ್ ರವರ ಪತ್ನಿಯಾಗಿದ್ದು ಇವರು ತಮ್ಮ ಪತಿಯ ನಾಲ್ಕನೇ ವರ್ಷದ ಪುಣ್ಯತಿಥಿ ಯಂದು ಅವರ ಸಮಾಧಿಗೆ ಭಕ್ತಿ ಪೂರ್ವಕವಾಗಿ ಪೂಜೆಯನ್ನು ಸಲ್ಲಿಸಿದ್ದಾರೆ. ಹಾಗೆಯೇ ಸುಮಲತಾ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರ ಪತಿ ಅಂಬರೀಶ್ ರವರನ್ನು ನೆನಪಿಸಿಕೊಂಡು ಅವರ ಫೋಟೋವನ್ನು ಕೂಡ ಅಪ್ಲೋಡ್ ಮಾಡಿ ಸಾಲುಗಳನ್ನು ಕೂಡ ಬರೆದಿದ್ದಾರೆ.

 

 

“ಜೊತೆಗಿರದ ಜೀವ ಎಂದೆಂದಿಗೂ ಜೀವಂತ ನಿಮಗೆ ನಿಮ್ಮ ಪುಣ್ಯ ಸ್ಮರಣೆಗೆ ನನ್ನ ಹೃದಯದ ಅಂತರಾಳದ ನಮನ ಅಂಬಿ ಅಮರ” ಎಂದು ಸುಮಲತಾ ಅಂಬರೀಶ್ ರವರು ಟ್ವೀಟ್ ಮಾಡಿದ್ದಾರೆ. ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಜೂನಿಯರ್ ರೆಬೆಲ್ ಸ್ಟಾರ್ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಅಭಿಷೇಕ್ ರವರು ಕೂಡ ತಮ್ಮ ತಂದೆ ಅಂಬರೀಷ್ ರವರನ್ನು ನೆನೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಪನ ಪುಣ್ಯಸ್ಮರಣೆಯ ಪ್ರಯುಕ್ತ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅಭಿಷೇಕ್ ಅಂಬರೀಶ್ ರವರು ಕೂಡ ಇದೀಗಾಗಲೇ ಕನ್ನಡ ಸಿನಿಮಾರಂಗಕ್ಕೆ ಅಮರ್ ಎನ್ನುವ ಚಿತ್ರದ ಮೂಲಕ ಎಂಟ್ರಿ ನೀಡಿದ್ದು ಇದೀಗ ರಚಿತಾ ರಾಮ್ ರವರ ಜೊತೆ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ.

ಡಿ ಬಾಸ್ ದರ್ಶನ್ ರವರು ಅಂಬರೀಶ್ ರವರ ಮನಸ್ಸಿಗೆ ತುಂಬಾ ಹತ್ತಿರದಲ್ಲಿದ್ದು ಈ ಎರಡು ಕುಟುಂಬಗಳು ಕೂಡ ಅನ್ಯೋನ್ಯವಾಗಿದ್ದವು. ಡಿ ಬಾಸ್ ದರ್ಶನ್ ರವರ ಮನೆಯಲ್ಲಿ ಯಾವುದೇ ಕಲಹಗಳು ನಡೆದರು ಕೂಡ ಅಂಬರೀಶ್ ರವರು ಅಲ್ಲಿಗೆ ಬಂದು ರಾಜಿ ಕಾರ್ಯವನ್ನು ಮಾಡುತ್ತಿದ್ದರು ಇದೀಗ ಡಿ ಬಾಸ್ ದರ್ಶನ್ ರವರು ಅಂಬರೀಶ್ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಭೇಟಿ ನೀಡಿ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ.

 

ಅಂಬರೀಶ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್ ಪ್ರೀತಿಯ ಅಂಬರೀಶ್ ಅಪ್ಪಾಜಿರವರು ನಮ್ಮನ್ನು ದೈಹಿಕವಾಗಿ ಆಗಲಿ ಈಗಾಗಲೇ ನಾಲ್ಕು ವರ್ಷ ಕಳೆದಿದೆ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಕೂಡ ಅವರು ನಮಗೆ ನೀಡಿದ ಪ್ರೀತಿ ಮಾರ್ಗದರ್ಶನ ನನ್ನೊಂದಿಗೆ ಶಾಶ್ವತವಾಗಿ ಇರುತ್ತವೆ. ಕನ್ನಡಕ್ಕೆ ಒಬ್ಬರೇ ರೆಬಲ್ ಸ್ಟಾರ್ ಅವರು ತೋರಿದ ದಾರಿಯಲ್ಲೆ ನಾವೆಲ್ಲ ನಡೆಯುತ್ತಿದ್ದೇವೆ.ಮಿಸ್ ಯು ಅಪ್ಪಾಜಿ, ಎಂದು ದರ್ಶನ್ ರವರು ಭಾವುಕರಾಗಿ ಹೇಳಿದ್ದಾರೆ ಇದನ್ನು ಕೇಳಿದ ಅಂಬರೀಶ್ ರವರ ಪತ್ನಿ ಸುಮಲತಾ ಅವರು ಕಣ್ಣೀರು ಹಾಕಿದ್ದಾರೆ.

Be the first to comment

Leave a Reply

Your email address will not be published.


*