ಮಗಳು ಐಶ್ವರ್ಯ ಹಾಗು ಅರ್ಜುನ್ ಸರ್ಜಾರಿಗೆ ಕೋಟಿಗಟ್ಟಲೆ ಮೋಸ ಮಾಡಿದ ನಟ:ಇಂತಹ ನಟರನ್ನು ನನ್ನ ಜೀವಮಾನದಲ್ಲೇ ನೋಡಿಲ್ಲ

ಅರ್ಜುನ್ ಸರ್ಜಾ ಒಬ್ಬ ಪ್ರತಿಭಾನ್ವಿತ ನಟನಾಗಿದ್ದು ಕನ್ನಡ ಚಿತ್ರರಂಗಕ್ಕೆ ಸಿಂಹದಮರಿ ಸೈನ್ಯ ಎಂಬ ಚಿತ್ರದ ಮೂಲಕ ಬಾಲ ನಟನಾಗಿ ಎಂಟ್ರಿ ಕೊಡುತ್ತಾರೆ. ಹದಿಹರೆಯದ ವಯಸ್ಸಿನಲ್ಲೇ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ ತೆಲುಗು ತಮಿಳು ಚಿತ್ರರಂಗದಲ್ಲೂ ಖ್ಯಾತಿಯನ್ನು ಪಡೆದಿದ್ದಾರೆ. ಅರ್ಜುನ್ ಸರ್ಜಾ ಕೇವಲ ನಟನಾಗಿರದೆ ನಿರ್ದೇಶಕ, ಸಹ ನಿರ್ದೇಶಕ ನಿರ್ಮಾಪಕನಾಗಿ ಹಲವಾರು ಖ್ಯಾತ ನಟ ನಟಿಯರಿಗೆ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ತಮಿಳಿನಲ್ಲಿ 1992 ರಲ್ಲಿ ಸೇವಾಗನ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ನಿರ್ದೇಶಕನಾಗಿ ಹೊರಹೊಮ್ಮಿದ್ದರು.

 

 

ಅರ್ಜುನ್ ಸರ್ಜಾ ತಾನು ನಟಿಸಿರುವ ಚಿತ್ರಗಳನ್ನು ಕೂಡ ನಿರ್ದೇಶನವನ್ನು ಮಾಡಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟರಾದ ಪ್ರಭುದೇವ, ಅಬ್ಬಾಸ್ ಮುಂತಾದವರಿಗೂ ಕೂಡ ಅರ್ಜುನ್ ಸರ್ಜಾ ನಿರ್ದೇಶನವನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ ಇವರಿಗೆ ಹಲವಾರು ವರ್ಷಗಳು ಹಲವಾರು ನಟ ನಟಿಯರ ಜೊತೆ ಕೆಲಸ ಮಾಡಿದ ಅನುಭವವೂ ಕೂಡ ಇದೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ ಇಂದಿಗೂ ಮೀಡಿಯಾ ಮುಂದೆ ಬಂದು ವಿವಾದ ಮಾಡಿಕೊಂಡಿರಲಿಲ್ಲ ಇದೀಗ ಮೊದಲನೇ ಬಾರಿ ತಾವೇ ಮೀಡಿಯಾ ವನ್ನು ಕರೆದಿದ್ದಾರೆ.

ಆದರೆ ಇದೀಗ ಮೊದಲನೇ ಬಾರಿ ಅರ್ಜುನ್ ಸರ್ಜಾ ಅವರು ತಾವೇ ಮೀಡಿಯಾವನ್ನು ಕರೆದು ಮಾತನಾಡಿಸುತ್ತಿದ್ದಾರೆ. ತಮ್ಮ ಮಗಳು ಐಶ್ವರ್ಯ ಸರ್ಜಾ ರನ್ನು ಈ ಮೊದಲೇ ಪ್ರೇಮ ಬರಹ ಎಂಬುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದರು. ಇದೀಗ ಅರ್ಜುನ್ ಸರ್ಜಾ ರವರು ತಮ್ಮ ಮಗಳು ಐಶ್ವರ್ಯ ರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯ ಮಾಡಿಕೊಡಬೇಕು ಎಂದು ಹೊಸ ಕಥೆಯನ್ನು ತಾವೇ ರಚಿಸಿದ್ದಾರೆ.

 

 

ತೆಲುಗಿನ ನಟರೊಬ್ಬರನ್ನು ಈ ಚಿತ್ರದ ನಟನನ್ನಾಗಿ ಆಯ್ಕೆ ಮಾಡಿದ್ದು ಪತ್ರಿಕಾಗೋಷ್ಠಿ ಕರೆಯುವ ಮೂಲಕ ಆ ನಟನ ಬಗ್ಗೆ ಬೇಸರವನ್ನು ಅರ್ಜುನ್ ಸರ್ಜಾ ವ್ಯಕ್ತಪಡಿಸಿದ್ದಾರೆ. ನಟ ವಿಶ್ವಕ್ ಸೇನ್ ಅನ್ನು ಹೊಸ ಕಥೆಗೆ ಆಯ್ಕೆ ಮಾಡಿದ್ದರು ಅರ್ಜುನ್ ಸರ್ಜಾ ಜೂನ್ ತಿಂಗಳಲ್ಲೇ ಚಿತ್ರದ ಮುಹೂರ್ತವನ್ನು ನಡೆಸಲಾಗಿತ್ತು ಪವನ್ ಕಲ್ಯಾಣ್ ರವರು ಈ ಚಿತ್ರದ ಮೂರ್ತಕ್ಕೆ ಬಂದು ಆಲ್ ದ ಬೆಸ್ಟ್ ಹೇಳಿದ್ದರು. ಇದರ ಬಗ್ಗೆ ಅರ್ಜುನ್ ಸರ್ಜಾ ತಾವೇ ಖುದ್ದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.

ಆದರೆ ಈ ಚಿತ್ರಕ್ಕೆ ಭಾರಿ ಸಿದ್ಧತೆ ನಡೆಸಿಕೊಂಡು ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿತ್ರಿಕರಣ ಆರಂಭಿಸಲು ಅರ್ಜುನ್ ಸರ್ಜಾ ನಟ ವಿಶ್ವಕ್ ಸೇನ್ ಹೇಳಿದ್ದರು. ಆದರೆ ವಿಶ್ವಕ್ ಸೇನ್ ಚಿತ್ರೀಕರಣಕ್ಕೆ ಬರದೆ ಕೈ ಕೊಟ್ಟಿದ್ದು ಅರ್ಜುನ್ ಸರ್ಜಾ ಅವರಿಗೆ ಬಹಳ ಬೇಸರವನ್ನುಂಟು ಮಾಡಿದೆ. ಈ ಸುದ್ದಿಯು ಸೋಶಿಯಲ್ ಮೀಡಿಯಾಗಳಲ್ಲ ಹರಿದಾಡುತ್ತಿದ್ದು ಆ ನಟ ಯಾಕೆ ಚಿತ್ರಿಕರಣಕ್ಕೆ ಬಂದಿಲ್ಲ ಎಂಬ ವಿಷಯ ಮಾತ್ರ ಇಂದಿಗೂ ಬಹಿರಂಗವಾಗಿಲ್ಲ. ಈ ಕಾರಣಕ್ಕಾಗಿ ಅರ್ಜುನ್ ಸರ್ಜಾ ಮೀಡಿಯಾವನ್ನು ಕರೆದು ಎಲ್ಲಾ ವಿಷಯವನ್ನು ಕೂಲಂಕುಶವಾಗಿ ಬಿಚ್ಚಿಟ್ಟಿದ್ದಾರೆ.

 

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ ಇಲ್ಲಿಯವರೆಗೂ ನಾನು ಅತಿ ಹೆಚ್ಚು ಇಷ್ಟಪಟ್ಟ ಕಥೆ ಇದು. ವಿಶ್ವಕ್ ಸೇನ್ ಕೂಡ ಈ ಕಥೆಯನ್ನು ಕೇಳಿದಾಗ ತುಂಬಾ ಚೆನ್ನಾಗಿದೆ ಎಂದು ಚಿತ್ರ ಮಾಡಲು ಒಪ್ಪಿಕೊಂಡಿದ್ದರು ಆದರೆ,” ಶೂಟಿಂಗ್ ಸಮಯ ಹತ್ತಿರ ಬಂದಾಗ ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಈತನಿಗೆ ಮಾಡಿದಷ್ಟು ಕರೆಗಳನ್ನು ನಾನು ಯಾವ ನಟರಿಗೂ ಜೀವನದಲ್ಲೇ ಮಾಡಿಲ್ಲ” ಎಂದ ಅರ್ಜುನ್ ಸರ್ಜಾರವರು ನಟ ವಿಶ್ವಕ್ ಸೇನ್ ಮೇಲಿರುವ ಬೇಸರವನ್ನು ಹೊರ ಹಾಕಿದರು. ಅಕ್ಟೋಬರ್ ತಿಂಗಳಲ್ಲೇ ಮೊದಲ ಷೆಡ್ಯೂಲಿತ್ತು ಜಗಪತಿ ಬಾಬು ಹಾಗೂ ಕೆಲ ಕೇರಳ ಕಲಾವಿದರ ಡೇಟ್ ಪಡೆದಿದ್ದೆ. ವಿಶ್ವಕ್ ಸೇನ್ ಮಾತ್ರ ಕರೆ ಮಾಡಿ ಶೂಟಿಂಗ್ ಅನ್ನು ಮುಂದಿನ ತಿಂಗಳು ಮಾಡೋಣ ಈ ತಿಂಗಳು ನಾನು ಲಭ್ಯವಿಲ್ಲ ಎಂದು ಹೇಳಿದರು.

ಸ್ಕ್ರಿಪ್ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಹಲವಾರು ಬಾರಿ ಕರೆ ನೀಡಿದರು ಕೂಡ ವಿಶ್ವಕ್ ಸೇನ್ ಬರಲಿಲ್ಲ. ಹಾಗೆ ವಸ್ತ್ರ ವಿನ್ಯಾಸದವರು ಎಷ್ಟು ಬಾರಿ ಕಳಿಸಿದರೂ ಪ್ರಯೋಜನವಾಗಲಿಲ್ಲ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. ಈ ಮೊದಲು ವಿಶ್ವಕ್ ಸೇನ್ ಸಂಭಾವನೆ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದರು ಎಷ್ಟೇ ಹೇಳಿದರೂ ನನಗೆ ಅಷ್ಟೇ ಹಣ ಬೇಕು ಎಂದು ಪಟ್ಟು ಹಿಡಿದಿದ್ದರು ಹಾಗೂ ಒಂದು ಏರಿಯಾದ ಥಿಯರಿಟಿಕಲ್ ಹಕ್ಕನ್ನು ಕೂಡ ಕೇಳಿದ್ದರು. ನಾನು ಅವರು ಹೇಳಿದ ಎಲ್ಲಾ ಡಿಮ್ಯಾಂಡ್ಗಳಿಗೂ ಒಪ್ಪಿಕೊಂಡಿದ್ದೆ ನನಗೆ ಸಿನಿ ಜರ್ನಿಯಲ್ಲಿ ಸಂಭಾವನೆ ವಿಚಾರದಲ್ಲಿ ಯಾರ ಜೊತೆಯೂ ಇಷ್ಟು ಜಗಳವಾಗಿರಲಿಲ್ಲ ವಿಶ್ವಕ್ ಸೇನ್ ನಿಂದ ನನಗೆ ತುಂಬಾ ಬೇಜಾರಾಗಿದೆ ಎಂದರು.

 

 

ಈ ಮೊದಲು ಶೆಡ್ಯೂಲ್ಗೂ ಕೂಡ ಬರದೆ ವಿಶ್ವಕ್ ಸೇನ್ ಕೈ ಕೊಟ್ಟಿದ್ದರು ಹಲವಾರು ಬಾರಿ ಮತ್ತೆ-ಮತ್ತೆ ಭೇಟಿಯಾಗಿ ಕಥೆಯನ್ನು ಕೇಳುತ್ತಲೇ ಇದ್ದರು. ಅವರು ಪ್ರತಿ ಸಾರಿ ಕಥೆ ಕೇಳಿದಾಗಲೂ ಹೊಸ ಬೆಳವಣಿಗೆಗಳ ಮೂಲಕ ನಾನು ಕಥೆಯನ್ನು ಹೇಳುತ್ತಲೇ ಇದ್ದೆ, ಮೊದಲು ಕಥೆಯನ್ನು ಇಷ್ಟಪಟ್ಟ ನಟ ವಿಶ್ವಕ್ ಸೇನ್ ನಂತರ ಯಾಕೋ ಅದರ ಬಗ್ಗೆ ಮಾತನಾಡಲಿಲ್ಲ. ಶೂಟಿಂಗ್ ದಿನವು ಕೂಡ ವಿಶ್ವಕ್ ಸೇನ್ ಬೆಳಗ್ಗೆ 5:00ಗೆ ಮೆಸೇಜ್ ಮಾಡಿ ಶೂಟಿಂಗ್ ಅನ್ನು ನಿಲ್ಲಿಸಿ ನಾನು ಇನ್ನಷ್ಟು ವಿಷಯಗಳನ್ನು ಚರ್ಚೆ ಮಾಡಬೇಕಿದೆ ಎಂದರು. “ಹೀಗೆ ನಿರ್ದೇಶಕರಿಗೆ ಮರ್ಯಾದೆ ನೀಡದ ಇಂತಹ ನಟರನ್ನು ನನ್ನ ವೃತ್ತಿ ಜೀವನದಲ್ಲಿ ನೋಡಿಲ್ಲ “ಎಂದು ಅರ್ಜುನ್ ಸರ್ಜಾ ನಟ ವಿಶ್ವಕ್ ಸೇನ್ ಮೇಲೆ ಕೋಪಗೊಂಡಿದ್ದಾರೆ. ಹಾಗೆ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಪವನ್ ಕಲ್ಯಾಣ್ ರವರಿಗೂ ಕೂಡ ಅರ್ಜುನ್ ಸರ್ಜಾ ರವರು ಕ್ಷಮೆ ಕೇಳಿದ್ದಾರೆ.

Be the first to comment

Leave a Reply

Your email address will not be published.


*