ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 300 ಪ್ರಯಾಣಿಕರು ವಿಮಾನದಲ್ಲಿದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ.
ಡಿಜಿಸಿಎ ನೀಡಿರುವ ಮಾಹಿತಿ ಪ್ರಕಾರ ಬೋಯಿಂಗ್ 777-300 ಇಆರ್ ಮಾದರಿಯ ವಿಮಾನದ ಎರಡನೇ ಎಂಜಿನ್ ತೈಲ ಸೋರಿಕೆಯಾಗಿದೆ. ಹಾಗಾಗಿ ವಿಮಾನವನ್ನು ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ತಪಾಸಣೆಯ ಸಮಯದಲ್ಲಿ, ಎರಡೂ ಎಂಜಿನ್‌ಗಳ ಡ್ರೈನ್ ಮಾಸ್ಟ್‌ನಿಂದ ತೈಲ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ, ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಮೆರಿಕದ ನೆವಾರ್ಕ್‌ನಿಂದ ಹೊರಟಿದ್ದ ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದ ಸ್ವೀಡನ್‌ನ ಸ್ಟಾಕ್‌ಹೋಮ್‌ಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.