Chetan Ahimsa On Sudha Murthy: ಸುಧಾಮೂರ್ತಿ ಅವರ ಅಸ್ತಿ ಜಗದಗಲ – ತಿಳುವಳಿಕೆ ಚಮಚದಗಲ! ನಟ ಚೇತನ್ ಟೀಕೆ..

Chetan Ahimsa On Sudha Murthy: “ನಾನು ಶುದ್ಧ ಸಸ್ಯಾಹಾರಿ, ನಾನು ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಕೂಡ ತಿನ್ನುವುದಿಲ್ಲ, ನಾನು ವಿದೇಶಕ್ಕೆ ಹೋದಾಗ, ನಾನು ನಮಗೆ ಬೇಕಾದ ಆಹಾರವನ್ನು ತಯಾರಿಸಿ ನನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗುತ್ತೇನೆ, ಹೋಟೆಲ್ ಗಳಲ್ಲಿ ಸಸ್ಯಾಹಾರಿ ಮತ್ತು ನಾನ್‌ ವೆಜ್ ಗೆ ಒಂದೇ ಚಮಚವನ್ನು ಬಳಸುವುದರಿಂದ ನನಗೆ ತುಂಬಾ ಚಿಂತೆಯಾಗುತ್ತದೆ. ಹಾಗಾಗಿ ನಾನು ವಿದೇಶಕ್ಕೆ ಹೋಗುವಾಗ ನನ್ನೊಂದಿಗೆ ಒಂದು ಚಮಚವನ್ನು ತೆಗೆದುಕೊಂಡು ಹೋಗುತ್ತೇನೆ. ” ಎಂದು ಸುಧಾ ಮೂರ್ತಿ ಅವರು ಹೇಳಿರುವ ಮಾತುಗಳು ಟ್ರೋಲ್ ಆಗುತ್ತಿವೆ.

 

 

‘‘ವಿದೇಶಕ್ಕೆ ಹೋದಾಗಲೂ ಅಲ್ಲಿನ ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಹುಡುಕುತ್ತೇನೆ. ನಾನು ಮನೆಯಲ್ಲಿ ತಯಾರಿಸಿದ ಊಟಕ್ಕೆ ಆದ್ಯತೆ ನೀಡುತ್ತೇನೆ. ನಾನು ಪ್ರಯಾಣ ಮಾಡುವಾಗ ಮನೆಯಲ್ಲಿ ತಯಾರಿಸಿದ ಆಹಾರವನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಸುಧಾ ಮೂರ್ತಿ ಹೇಳಿದರು.

 

 

View this post on Instagram

 

A post shared by SN music (@snmusic_01)

 

ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗೆ ಒಂದೇ ಚಮಚ ಬಳಸುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಹೇಳಿಕೆಯನ್ನು ನಟ ಚೇತನ್ ಅಹಿಂಸ ಟೀಕಿಸಿದ್ದಾರೆ. ಗುರುವಾರ ಟ್ವೀಟ್ ಮಾಡಿರುವ ಅವರು, ‘ಸುಧಾಮೂರ್ತಿ ಅವರು ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಮತ್ತು ನಮ್ಮ ಬ್ರಾಹ್ಮಣ-ಬಂಡವಾಳಶಾಹಿ ಸಮಾಜದಿಂದ ಅನಗತ್ಯವಾಗಿ ಗೌರವಿಸಲ್ಪಟ್ಟಿದ್ದಾರೆ.

 

 

View this post on Instagram

 

A post shared by Chetan Ahimsa (@chetanahimsa)

 

ತಮ್ಮ ಸೀಮಿತ ಮತ್ತು ಸಂಕುಚಿತ ಮನೋಭಾವನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ ಎಂದಿರುವ ಚೇತನ್ ಮತ್ತು ಸುಧಾ ಮೂರ್ತಿ ಹೆಚ್ಚು ಮಾತನಾಡಬೇಕು. ಅವರ ಸಂಪತ್ತು ಪ್ರಪಂಚದ ಗಾತ್ರ ಮತ್ತು ಅವರ ಜ್ಞಾನವು ಒಂದು ಚಮಚದ ಗಾತ್ರವಾಗಿದೆ ಎಂದು ವ್ಯಂಗ್ಯವಾಡಿದರು.

Leave a Comment