ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕರಾವಳಿಯ ಈ ಇಬ್ಬರು ಪ್ರತಿಭೆಗಳು ಬೇರೆ ಭಾಷೆಗೂ ಸಿನಿಮಾ ಮಾಡುವಲ್ಲಿ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ, ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಸೂಪರ್ ಹಿಟ್ ಆಗಿದ್ದರೆ, ರಿಷಬ್ ಶೆಟ್ಟಿ ಅವರ ಕಾಂತಾರ ಪ್ಯಾನ್-ಇಂಡಿಯಾ ಸೆನ್ಸೇಷನ್ ಆಗಿತ್ತು.
ಇದೀಗ ರಕ್ಷಿತ್ ಶೆಟ್ಟಿ ತಮ್ಮದೇ ಪರಮಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸರಣಿ ಚಿತ್ರಗಳ ನಿರ್ಮಾಣದಲ್ಲಿ ತಲ್ಲೀನರಾಗಿದ್ದಾರೆ. ಪರಮಾ ಸ್ಟುಡಿಯೋ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಎಂಬ ಚಿತ್ರವನ್ನು ಘೋಷಿಸಿದ್ದರು. ಸದ್ಯದಲ್ಲೇ ಶೂಟಿಂಗ್ ಶುರುವಾಗಬಹುದು ಆದ್ರೆ ಈ ಚಿತ್ರದಲ್ಲಿ ಒಂದು ಶಾಕಿಂಗ್ ನ್ಯೂಸ್ ಇದೆ ಗೊತ್ತಾ? ರಕ್ಷಿತ್ ಶೆಟ್ಟಿ ಸಿನಿಮಾದಿಂದ ರಿಷಬ್ ಶೆಟ್ಟಿ ಹೊರನಡೆದಿದ್ದಾರೆ.
ಸಾಮಾನ್ಯವಾಗಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಟ್ಟಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮಾತ್ರ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ರಿಷಬ್ ಔಟ್ ಆಗಿದ್ದಾರೆ. ಕಾಂತಾರ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಿಷಬ್ ಸ್ವತಃ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಮಾಹಿತಿ ಇದೆ. ಈ ಯೋಜನೆಯಲ್ಲಿ ರಿಷಬ್ ಶೆಟ್ಟಿ ಇಲ್ಲ ಎಂದು ನಟ ದಿಗಂತ್ ಬಹಿರಂಗವಾಗಿ ಹೇಳಿದ್ದಾರೆ. ರಕ್ಷಿತ್ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ
ಈಗ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಬದಲಿಗೆ ಲೂಸ್ ಮಾದ ಯೋಗಿ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚೆಗಷ್ಟೇ ಧನಂಜಯ್ ನಿರ್ಮಿಸಿ, ನಟಿಸಿದ್ದ ಹೆಡ್ ಬೂಷ್ ಚಿತ್ರದಲ್ಲಿ ಗಂಗಾ ಪಾತ್ರದಲ್ಲಿ ಯೋಗಿ ಡಾಲಿ ನಟಿಸಿದ್ದರು. ದಿಗಂತ್ ಜೊತೆಗೆ ಖ್ಯಾತ ನಟ ಅಯುತ್ ಕುಮಾರ್ ಕೂಡ ನಟಿಸಲಿದ್ದಾರೆ. ಪರಮವ ಸ್ಟುಡಿಯೋ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಚಿತ್ರಕ್ಕೆ ಅಭಿಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ರಾಮು ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಪವನ್ ಕುಮಾರ್, ಸೌಮ್ಯಾ ಜಗನ್ಮೂರ್ತಿ, ಪ್ರಕಾಶ್ ತುಮ್ಮಿನಾಡ್, ರಘು ರಮಣಕೊಪ್ಪ, ಶೋಬರಾಜ್, ಗುರುಪ್ರಸಾದ್ ಮುಂತಾದವರ ದೊಡ್ಡ ತಾರಾಬಳಗವಿದೆ. ರಕ್ಷಿತ್ ಶೆಟ್ಟಿ ಎಸ್.ಗುಪ್ತಾ ಅವರೊಂದಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಮತ್ತು ಈ ಚಿತ್ರವು ಮದುವೆ ಮತ್ತು ಪ್ರೇಮ ಜೀವನದ ಕಥೆಯನ್ನು ಹೊಂದಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇಷ್ಟು ದಿನ ಜೊತೆಯಾಗಿ ಯಾವುದೇ ಪ್ರಾಜೆಕ್ಟ್ ಮಾಡುತ್ತಿದ್ದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಈ ಪ್ರಾಜೆಕ್ಟ್ ನಲ್ಲಿ ವಿಭಿನ್ನವಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕಾಂತಾರ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿಗೆ ಕೈ ಕೊಟ್ಟ ರಿಷಬ್ ಶೆಟ್ಟಿ