ಟಿಫಿನ್ನೂ ಮಾಡಿಲ್ಲ ನಮಗೂ ಶಾಕ್ ಆಗಿದೆ, ಮುರಿದು ಬಿದ್ದ ವೈಷ್ಣವಿ ಗೌಡ ಎಂಗೇಜ್ಮೆಂಟ್ : ವೈಷ್ಣವಿ ತಂದೆ ಫಸ್ಟ್ ರಿಯಾಕ್ಷನ್

ಇದೀಗ ವೈಷ್ಣವಿ ಗೌಡರವರು ಮೊನ್ನೆಯಷ್ಟೇ ತಮ್ಮ ಎಂಗೇಜ್ಮೆಂಟ್ ಆಗಿರುವುದಾಗಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವೊಂದಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಆದರೆ ಇಬ್ಬರು ಹುಡುಗಿಯರು ವೈಷ್ಣವಿಯವರು ವಿವಾಹವಾಗುತ್ತಿರುವ ವಿದ್ಯಾಭರಣರವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಇವರು ಸರಿ ಇಲ್ಲ ಎಂದು ಆರೋಪವನ್ನು ಕೂಡ ಆಡಿಯೋದಲ್ಲಿ ಮಾಡಿದ್ದು ಇದೀಗ ಆ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.

 

 

ವೈಷ್ಣವಿ ಗೌಡ ರವರ ತಂದೆ ಈ ಕುರಿತು ಮಾತನಾಡಿ ಆ ಆಡಿಯೋದಲ್ಲಿ ಮಾತನಾಡಿರುವ ಇಬ್ಬರು ವ್ಯಕ್ತಿಗಳು ಯಾರು ಎಂಬುದು ನನಗೆ ಗೊತ್ತೇ ಇಲ್ಲ ವಿದ್ಯಾ ಬಣ್ಣ ಹಾಗೂ ಕುಟುಂಬದವರ ಮೇಲೆ ನಮಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ನಮಗೆ ಹಾಗೂ ಅವರಿಗೆ ಕಳೆದ ಐದಾರು ವರ್ಷದಿಂದ ಫ್ರೆಂಡ್ಶಿಪ್ ಇತ್ತು ಚಾಕ್ಲೇಟ್ ಬಾಯ್ ಎನ್ನುವ ಸಿನಿಮಾದಲ್ಲಿ ನನ್ನ ಮಗಳು ವೈಷ್ಣವಿ ಗೌಡ ಹಾಗೂ ವಿದ್ಯಾಭರಣರವರು ನಟಿಸಲು ಸಜ್ಜಾಗಿದ್ದರು ಆದರೆ ಆ ಸಿನಿಮಾ ಕಾರಣಾಂತರಗಳಿಂದ ಕ್ಯಾನ್ಸಲ್ ಆಯಿತು.

ಆಗಿನಿಂದಲೂ ನಮಗೆ ವಿದ್ಯಾಭರಣರವರು ಹಾಗೂ ಅವರ ಕುಟುಂಬದವರು ಗೊತ್ತಿದ್ದಾರೆ. ವಿದ್ಯಾಭರಣರವರ ಕುಟುಂಬದ ಜೊತೆ ನನ್ನ ಹೆಂಡತಿಯ ತಂದೆ ತಾಯಿ ಕಾಂಟ್ಯಾಕ್ಟ್ ನಲ್ಲಿ ಇದ್ದರು ಹಾಗಾಗಿ ಅವರ ಮನೆಯವರು ನಮ್ಮ ಮನೆಯವರು ಒಪ್ಪಿಕೊಂಡು ಇವರಿಬ್ಬರ ಎಂಗೇಜ್ಮೆಂಟನ್ನು ಫಿಕ್ಸ್ ಮಾಡಿದ್ದೆವು ಆದರೆ ಆ ಶಾಸ್ತ್ರವನ್ನು ಮಾಡಿದ ಹಲವು ದಿನಗಳ ನಂತರ ಇದೀಗ ಈ ವದಂತಿಗಳೆಲ್ಲ ಕೇಳಿ ಬರುತ್ತಿವೆ.

 

 

ಅವರ ತಂದೆ ವೈಷ್ಣವಿ ಗೌಡ ರವರ ಎಂಗೇಜ್ಮೆಂಟ್ ಬಗ್ಗೆ ಮಾತನಾಡಿ ಎಲ್ಲರೂ ಆ ಫೋಟೋಗಳನ್ನು ನೋಡಿ ಇದು ಎಂಗೇಜ್ಮೆಂಟ್ ಎಂದು ಕೊಂಡಿದ್ದಾರೆ ಆದರೆ ಇದು ಎಂಗೇಜ್ಮೆಂಟ್ ಅಲ್ಲ ನಮ್ಮ ಕಡೆ ಬಟ್ಟು ಇಡುವ ಶಾಸ್ತ್ರ ಎಂದು ಹೇಳುತ್ತಾರೆ ಆದ್ದರಿಂದ ನಾವು ಹಾರವನ್ನು ಬದಲಾಯಿಸಿ ಆ ಶಾಸ್ತ್ರವನ್ನು ಮಾಡಿದ್ದೆವು ಅಷ್ಟೇ ಎಂದಿದ್ದಾರೆ. ನಾವು ನಮ್ಮ ಕುಟುಂಬದವರೆಲ್ಲ ಸೇರಿ ವಿದ್ಯಾಭರಣ ರವರನ್ನು ಮದುವೆಯಾಗುವಂತೆ ವೈಷ್ಣವಿಗೂ ಕೂಡ ಹೇಳಿದ್ದೆ ಆದ್ದರಿಂದ ಅವಳು ಕೂಡ ಒಪ್ಪಿಕೊಂಡಿದ್ದಳು. ಇದೀಗ ನನ್ನ ಅಳಿಯನಾಗುವ ವಿದ್ಯಾಭರಣ ರವರ ಬಗ್ಗೆ ಇಷ್ಟೆಲ್ಲ ವದಂತಿಗಳು ಕೇಳಿ ಬರುತ್ತಿವೆ ಅದಕ್ಕೆ ನನ್ನ ಮಗಳು ಕೊನೆಯದಾಗಿ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಅದಕ್ಕೆ ನಾವೆಲ್ಲರೂ ಬದ್ಧರಾಗಿ ಇರುತ್ತೇವೆ.

ವೈಷ್ಣವಿ ಕೂಡ ಈ ವಿಷಯ ತಿಳಿದು ಬೆಳಗಿನಿಂದ ಮನೆಯಿಂದ ಹೊರಗೆ ಬಂದಿಲ್ಲ ಮನೆಯಲ್ಲಿ ಇದ್ದಾಳೆ ಹೆಚ್ಚು ಮಾತನಾಡಿಲ್ಲ ಎಂದರು. ಇದೀಗ ನಿಮ್ಮ ಮಗಳಿಗೆ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದರಿಂದ ನೋವಾಗಿದೆ ಹಾಗೆಯೇ ನಿಮ್ಮ ಅಳಿಯನಿಗೆ ಕಾಲ್ ಮಾಡಿ ಮಾತನಾಡಿದ್ದೀರಾ ಎಂದು ಅವರ ತಂದೆಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ವೈಷ್ಣವಿ ಗೌಡರವರ ತಂದೆ ಅವರು ತುಂಬಾ ಅನುಕೂಲಸ್ತ ಫ್ಯಾಮಿಲಿಯವರು ಅವರ ಬಗ್ಗೆ ಈ ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ ಎಂದರೆ ಅದನ್ನೆಲ್ಲ ನಾನು ಪ್ರಶ್ನಿಸಲು ಆಗುವುದಿಲ್ಲ ಏಕೆಂದರೆ ಅವರಿಗೆ ಆಗದವರು ಯಾರಾದರೂ ಈ ರೀತಿ ಮಾಡಿರಬಹುದು.

 

 

ನಮಗೂ ಕೂಡ ಗೌರವ ಎನ್ನುವುದು ಇದೆ ನನ್ನ ಮಗಳು ಇದೀಗಾಗಲೇ ಬಿಗ್ ಬಾಸ್ ಮನೆಯಲ್ಲಿ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾಳೆ. ಬಿಗ್ ಬಾಸ್ ಮನೆಯಲ್ಲೇ ಅವಳು ತನ್ನ ಮದುವೆಯ ಕನಸಿನ ಬಗ್ಗೆ ಹೇಳಿದಳು. ಮದುವೆಯ ಬಗ್ಗೆ ಒಂದು ದೊಡ್ಡ ಕನಸನ್ನು ಹೊತ್ತುಕೊಂಡಿದ್ದಾಳೆ. ಮದುವೆಯ ಮಾತುಕತೆಯು ಚೆನ್ನಾಗಿಯೇ ನಡೆಯುತ್ತಿತ್ತು ಆದರೆ ಸಡನ್ ಆಗಿ ಹೀಗಾಗುತ್ತದೆ ಎಂದು ನಾವು ಯೋಚಿಸಿರಲಿಲ್ಲ ಎಂದರು. ನಾವು ಎಂಗೇಜ್ಮೆಂಟ್ ಮಾಡಬೇಕು ಎಂದು ಕೂಡ ಫಿಕ್ಸ್ ಆಗಿದ್ದೇವು, ಜನವರಿ ಮಧ್ಯದಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ನಡೆಸುವುದಾಗಿ ದಿನಾಂಕ ಕೂಡ ಫಿಕ್ಸ್ ಆಗಿತ್ತು ಆದರೆ ಈಗ ದೇವರ ದಯದಿಂದ ಹೀಗಾಗಿದೆ ಎಂದರು

ನಿಮ್ಮ ಅಳಿಯನಾಗುವವನ ಬಗ್ಗೆ ಈ ರೀತಿಯ ವದಂತಿಗಳು ಹಬ್ಬಿದಾವೆ ಹಾಗಾದರೆ ನೀವು ನಿಮ್ಮ ಮಗಳ ಮದುವೆಯನ್ನು ಮುಂದುವರಿಸುತ್ತೀರಾ ಎಂದು ಕೇಳಿದಾಗ ವೈಷ್ಣವಿ ಗೌಡರವರ ತಂದೆ ಉತ್ತರಿಸಿ ದೇವರು ಮೊದಲೇ ನಮ್ಮ ಹಣೆಯಲ್ಲಿ ಇಂಥವರಿಗೆ ಇಂಥವರು ಎಂದು ಬರೆದು ಕಳಿಸಿರುತ್ತಾನೆ. ನನ್ನ ಮಗಳು ಏನೆಂದು ಡಿಸಿಜನ್ ತೆಗೆದುಕೊಳ್ಳುತ್ತಾಳೆ ಅದಕ್ಕೆ ನಾವೆಲ್ಲರೂ ಬದ್ಧರಾಗಿ ಒಪ್ಪಿಕೊಳ್ಳುತ್ತೇವೆ. ನನ್ನ ಹೆಂಡತಿಯೂ ಕೂಡ ಮನೆಯಿಂದ ಆಚೆ ಬಂದಿಲ್ಲ ಅವಳು ಕೂಡ ಇದನ್ನೆಲ್ಲ ಕೇಳಿ ಬೇಜಾರಿನಲ್ಲಿ ಕುಳಿತುಕೊಂಡಿದ್ದಾಳೆ. ಆ ಹುಡುಗಿಯರು ಕೂಡ ಕಂಪ್ಲೇಂಟ್ ಕೊಡುತ್ತೇವೆ ಎಂದು ಹೇಳಿದ್ದಾರೆ ಖಂಡಿತವಾಗಿಯೂ ಕೊಡಲಿ ಯಾರದು ತಪ್ಪಿರುತ್ತೋ ಅವರಿಗೆ ಶಿಕ್ಷೆ ಆಗಲೇಬೇಕು.

 

ನನ್ನ ಮಗಳು ವೈಷ್ಣವಿ ಗೌಡ ತುಂಬಾ ಧೈರ್ಯವಂತೆ ಅವಳು ತಮ್ಮ ಸಿನಿ ಕೆರಿಯರ್ ನಲ್ಲಿ ಯಾವುದೇ ಒಂದು ಕಪ್ಪು ಚುಕ್ಕಿಯನ್ನು ಕೂಡ ಇಲ್ಲಿಯವರೆಗೂ ಇಟ್ಟುಕೊಂಡಿರಲಿಲ್ಲ ಈಗಲೂ ಕೂಡ ಹಾಗೆಯೇ ಬದುಕುತ್ತಿದ್ದಾಳೆ ಅವಳು ದಿನಾಲು ಮೆಡಿಟೇಶನ್ ಯೋಗ ಎಲ್ಲವನ್ನು ಮಾಡುತ್ತಾಳೆ. ಹಾಗಾಗಿ ಅವಳಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಇದೆ. ನನ್ನ ಮಗಳು ಕೂಡ ಧೈರ್ಯವಾಗಿರುತ್ತಾಳೆ ಎನ್ನುವ ನಂಬಿಕೆ ನನಗಿದೆ ನಾನು ಈಗ ಯಾರ ಮನಸ್ಸಿಗೂ ಕೂಡ ನೋವಾಗುವಂತೆ ಮಾತನಾಡುವುದಿಲ್ಲ ಯಾಕೆಂದರೆ ಯಾರಾದರೂ ತಪ್ಪು ಮಾಡಿದ್ದಲ್ಲಿ ಅವರಿಗೆ ದೇವರು ಖಂಡಿತ ಶಿಕ್ಷೆ ಕೊಟ್ಟೆ ಕೊಡುತ್ತಾನೆ.

Be the first to comment

Leave a Reply

Your email address will not be published.


*