ಸಿನಿಮಾ ರಂಗದಲ್ಲಿ ಒಂದು ಕಾಲದಲ್ಲಿ ಮಿಂಚುತ್ತಿದ್ದ ಅನೇಕ ನಟಿಯರು ಇಂದು ಮದುವೆ ಮಕ್ಕಳು ಸಂಸಾರ ಎಂದು ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಕೆಲವರು ಅವಕಾಶ ಸಿಕ್ಕಿಲ್ಲ ಎಂದು ದೂರ ಉಳಿದರೆ ಇನ್ನೂ ಕೆಲವರು ಅವಕಾಶ ಇದ್ದರೂ ನಟಿಸುತ್ತಿಲ್ಲ ಹಲವಾರು ನಟಿಯರು ಇಂದು ಮೂಲೆಗುಂಪಾಗಿದ್ದು ಸೋಶಿಯಲ್ ಮೀಡಿಯಾಗಳ ಕಾರಣದಿಂದ ತಮ್ಮ ಅಭಿಮಾನಿಗಳಿಗೆ ತಮ್ಮ ಜೀವನದ ಆಗುಹೋಗುಗಳ ಬಗ್ಗೆ ತಿಳಿಸುತ್ತಾ ಹತ್ತಿರವಾಗಿರುತ್ತಾರೆ.

 

 

ಅಂತಹ ನಟಿಯರಲ್ಲಿ ನಟಿ ಶ್ವೇತಾ ಶ್ರೀವಾತ್ಸವ ಕೂಡ ಒಬ್ಬರಾಗಿದ್ದು ಇವರು ಕನ್ನಡದ ಸಿಂಪಲ್ ಹುಡುಗಿ ಎಂದೇ ಚಿರಪರಿಚಿತರಾಗಿದ್ದಾರೆ. ನಟಿ ಶ್ವೇತಾ ಶ್ರೀವಾತ್ಸವ್ ರಕ್ಷಿತ್ ಶೆಟ್ಟಿ ಅಭಿನಯದ “ಸಿಂಪಲ್ ಆಗಿ ಒಂದು ಲವ್ ಸ್ಟೋರಿ” ಎನ್ನುವ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು ಶ್ವೇತಾ ಶ್ರೀವಾತ್ಸವ ರವರಿಗೆ ಒಬ್ಬಳು ಮಗಳಿದ್ದು ಇಂದಿಗೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅವರು ಆಕ್ಟಿವ್ ಆಗಿರುತ್ತಾರೆ. ಶ್ವೇತಾ ಶ್ರೀವಾತ್ಸವ ತಮ್ಮ ಮಗಳ ಜೊತೆ ಫೋಟೋ ಶೂಟ್ ಗಳನ್ನು ಮಾಡಿಸುತ್ತಾ ರೀಲ್ಸ್ ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.ನಟಿ ಶ್ವೇತಾ ಶ್ರೀವಾತ್ಸವ್ ಮೂಲತಃ ಬೆಂಗಳೂರಿನವರಾಗಿದ್ದು ಇವರು ಮೀಡಿಯಾ ಸ್ಟಡಿಯಲ್ಲಿ ವಿದ್ಯಾಭ್ಯಾಸವನ್ನು ಕೂಡ ಮಾಡಿದ್ದಾರೆ. ಮೊದಮೊದಲು ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಇಷ್ಟೆ ಅಲ್ಲದೆ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲು ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

 

 

ನಟಿ ಶ್ವೇತಾ ಶ್ರೀವತ್ಸವ್ 2013ರಲ್ಲಿ ತೆರೆ ಕಂಡ ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಈ ಚಿತ್ರ ಇವರಿಗೆ ಹೆಚ್ಚು ಪ್ರಖ್ಯಾತಿಯನ್ನು ಕೂಡ ತಂದು ಕೊಟ್ಟು ಕನ್ನಡದ ಟಾಪ್ ನಟಿ ಎನಿಸಿಕೊಂಡಿದ್ದರು ತದನಂತರ ಮದುವೆಯಾದ ಶ್ವೇತಾ ಶ್ರೀವಾತ್ಸವ್ ನಟನೆಯಿಂದ ದೂರವೇ ಉಳಿದರು ತಮ್ಮ ಮಗಳ ಜೊತೆಗೆ ಸಾಕಷ್ಟು ಫೋಟೋ ಹಾಗು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಶ್ವೇತ ಶ್ರೀವಾತ್ಸವ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ಶುರುಮಾಡಿ ಅದರಲ್ಲಿ ತಮ್ಮ ದಿನಾಚರಿಯ ಬಗ್ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

 

 

View this post on Instagram

 

A post shared by Shwetha Srivatsav (@shwethasrivatsav)

 

ಶ್ವೇತಾ ಶ್ರೀವತ್ಸವ್ ರವರಿಗೆ ಇದೀಗಾಗಲೇ 36 ವರ್ಷ ವಯಸ್ಸಾಗಿದ್ದು ಇಂದಿಗೂ ಕೂಡ ಅವರು ತಮ್ಮ ವರ್ಕೌಟ್ ಹಾಗು ಡ್ಯಾನ್ಸ್ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮದುವೆ ಆದ ನಂತರ ಸಿನಿಮಾ ರಂಗದಿಂದ ದೂರ ಉಳಿದ ಶ್ವೇತಾ ರವರು ಈಗ “ಹೋಪ್” ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದೀಗ ಇನ್ನೂ ಹಲವಾರು ಸಿನಿಮಾಗಳಿಗೆ ಸಹಿ ಹಾಕಿರುವ ಶ್ವೇತಾ ಶ್ರೀವತ್ಸವ್ ತಮ್ಮ instagram ಖಾತೆಯಲ್ಲಿ ಹೊಸದೊಂದು ಹಾಟ್ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಮಾಡಿದ್ದು ಅದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a comment

Your email address will not be published. Required fields are marked *