ನಟಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಹಾಟ್ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಇವರು ಚತುರ್ಭಾಷ ನಟಿಯಾಗಿದ್ದು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ ಇದೀಗ ತೆಲುಗು ತಮಿಳು ಮಲಯಾಳಂ ಹಿಂದಿ ಮುಂತಾದ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಪುನೀತ್ ರಾಜಕುಮಾರ್, ದರ್ಶನ್, ಗಣೇಶ್, ಧ್ರುವ ಸರ್ಜಾ ಮುಂತಾದವರ ಜೊತೆ ನಟಿಸಿದ್ದಾರೆ.
ಇಷ್ಟೇ ಅಲ್ಲದೆ ತೆಲುಗು ನಲ್ಲೂ ಕೂಡ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ಮುಂತಾದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ತಮಿಳಿನಲ್ಲಿ ಸೂಪರ್ ಸ್ಟಾರ್ ವಿಜಯ್ ಮುಂತಾದವರ ಜೊತೆ ನಟಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕನ್ನಡದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೊತೆ ಕಿರಿಕ್ ಮಾಡಿಕೊಂಡಿದ್ದರು ಇಷ್ಟೇ ಅಲ್ಲದೆ ತೆಲುಗಿನ ನಟ ನಾಗ ಶೌರ್ಯ ಜೊತೆ ಕೂಡ ರಶ್ಮಿಕಾ ಮಂದಣ್ಣ ಕಿರಿಕ್ ಮಾಡಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಗೆ ಇದೀಗ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು ಇವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆರಿಯರ್ ನಲ್ಲಿ ಪಿಕ್ ನಲ್ಲಿದ್ದರೂ ಸಹ ಇದೀಗ ಇವರು ಐಟಂ ಸಾಂಗ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಿಂದೆ ನಟಿಯರಿಗೆ ಬೇಡಿಕೆ ಕಡಿಮೆಯಾದಾಗ ಐಟಂ ಸಾಂಗುಗಳಿಗೆ ಒಪ್ಪಿಕೊಳ್ಳುತ್ತಿದ್ದರು ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣ ತಮ್ಮ ಕೆರಿಯರ್ನ ಪಿಕ್ ನಲ್ಲಿದ್ದರೂ ಕೂಡ ಐಟಂ ಸಾಂಗಿಗೆ ಒಪ್ಪಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಐಟಂ ಸಾಂಗಿಗೆ ಒಪ್ಪಿಕೊಂಡಿರುವ ಕಾರಣವೇನೆಂದರೆ, ಅದರ ಹಿಂದಿರುವ ದೊಡ್ಡ ಮೊತ್ತದ ಸಂಭಾವನೆಗಾಗಿ ನಟಿ ರಶ್ಮಿಕ ಮಂದಣ್ಣ ಐಟಂ ಸಾಂಗಿಗೆ ಒಪ್ಪಿಕೊಂಡಿದ್ದು ಈ ಹಿಂದೆ ಮಹೇಶ್ ಬಾಬುರವರ ಜೊತೆ “ಸರಿಲೇರು ನಿಕೆವರು” ಎನ್ನುವ ಚಿತ್ರದಲ್ಲಿ ನಟಿಸಿದ್ದರು ಇದೀಗ ನಟ ಮಹೇಶ್ ಬಾಬು ಜೊತೆ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಐದು ನಿಮಿಷಗಳವರೆಗೂ ಇರುವ ಹಾಡಿಗೆ ಇದೀಗಾಗಲೇ ರಿಹರ್ ಸೆಲ್ ಕೂಡ ಸ್ಟಾರ್ಟ್ ಮಾಡಿದ್ದು ಹಾಡಿನ ಸ್ಟೆಪ್ಗಳನ್ನು ಕಲಿಯುತ್ತಿದ್ದಾರೆ. ಕೇವಲ ಐದು ನಿಮಿಷ ಇರುವ ಈ ಹಾಡಿಗೆ ಬರೋಬ್ಬರಿ 5 ಕೋಟಿ ಹಣವನ್ನು ರಶ್ಮಿಕಾ ಮಂದಣ್ಣ ಸಂಭಾವನೆಯಾಗಿ ಕೇಳುತ್ತಿದ್ದಾರೆ ಎನ್ನುವ ಮಾತು ಎಲ್ಲಾ ಕಡೆ ವೈರಲ್ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ದುಬಾರಿ ಸಂಭಾವನೆ ಪಡೆಯುವುದಕ್ಕೋಸ್ಕರವಾಗಿಯೇ ಐಟಂ ಸಾಂಗ್ ನಲ್ಲಿ ಒಪ್ಪಿಕೊಂಡಿದ್ದಾರೆ. ಎಂದು ಎಲ್ಲಾ ಕಡೆ ಈ ವಿಷಯ ವೈರಲ್ ಆಗುತ್ತಿದ್ದು ನಟಿ ರಶ್ಮಿಕಾ ಮಂದಣ್ಣ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಐಟಂ ಸಾಂಗ್ ಇನ್ ರಿಹರ್ ಸೆಲ್ ಗೆ ಹೆಜ್ಜೆ ಹಾಕುತ್ತಿದ್ದಾರೆ.
ರಶ್ಮಿಕ ಮಂದಣ್ಣ ರವರು ಐಟಂ ಸಾಂಗ್ ನಲ್ಲಿ ನಟಿಸುತ್ತಿರುವ ಮೊದಲ ನಾಯಕಿ ಏನಲ್ಲ ಈ ಮೊದಲು ಹಲವಾರು ನಾಯಕಿಯರು ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಮೊದಲಿನಿಂದಲೂ ನಟಿಯರು ಐಟಂ ಸಾಂಗಿನಲ್ಲಿ ಕಾಣಿಸಿಕೊಳ್ಳುವ ಸಂಪ್ರದಾಯ ಮೂಡಿ ಬಂದಿದೆ. ತಮ್ಮನ್ನ ,ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ಸಿಂಗ್, ಪೂಜಾ ಹೆಗ್ಡೆ, ಸಮಂತ ಮುಂತಾದವರೆಲ್ಲರೂ ಐಟಂ ಸಾಂಗ್ ನಲ್ಲಿ ಕುಣಿದಿದ್ದಾರೆ.
ಸಮಂತಾ ರವರು ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ಐಟಂ ಸಾಂಗಿನಲ್ಲಿ ಕುಣಿದಿದ್ದು ಇದು ಪ್ರಪಂಚದಾದ್ಯಂತ ಭಾರಿ ಹಿಟ್ ಆಗಿತ್ತು. ರಶ್ಮಿಕಾ ಮಂದಣ್ಣ ಇದೀಗ ಸಿನಿಮಾ ರಂಗದಲ್ಲಿ ಪೀಕ್ ನಲ್ಲಿದ್ದು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈಗ ನಟಿ ರಶ್ಮಿಕಾ ಮಂದಣ್ಣ ಸಿನಿಮಾರಂಗದಿಂದ ಕಾಂಟ್ರವರ್ಸಿಗೆ ಒಳಗಾಗಿ ನಿಧಾನವಾಗಿ ಕೆಳಗೆ ಇಳಿಯುತ್ತಿದ್ದಾರೆ. ತೆಲುಗಿನ “ನೀಕು ಜೋಹಾರ್ಲು” ಎನ್ನುವ ಸಿನಿಮಾ ಹಾಗೂ ರಶ್ಮಿಕಾ ರವರ ಮೊದಲ ಹಿಂದಿ ಸಿನಿಮಾ ಆದ “ಗುಡ್ ಬಾಯ್” ಸಿನಿಮಾ ಕೂಡ ಇದೀಗ ಬಾಕ್ಸ್ ಆಫೀಸ್ ನಲ್ಲಿ ಕೆಳಗೆ ಬಿದ್ದು ಹೋಗಿದೆ. ಹಿಂದಿಯಲ್ಲಿ ಸಿದ್ದಾರ್ಥ್ ಮಲಹೋತ್ರ ಜೊತೆ “ಮಿಷನ್ ಮಜ್ನು” ಎನ್ನುವ ಸಿನಿಮಾದಲ್ಲಿ ಕೂಡ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಣಭೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ತೆಲುಗಿನ ಪುಷ್ಪ 2 ಸಿನಿಮಾದಲ್ಲೂ ಕೂಡ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಆಗಾಗ ಕಂಟ್ರೋವರ್ಸಿಗಳಿಗೆ ದಾರಿ ಮಾಡಿಕೊಡುತ್ತಾ ತನ್ನ ಬೇಡಿಕೆಯನ್ನು ಚಿತ್ರರಂಗದಿಂದ ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಇದೀಗ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನನ್ನ ಅವಕಾಶಗಳು ಕಡಿಮೆಯಾಗುತ್ತವೆ ಎಂದು ತಿಳಿದು ನಟಿ ರಶ್ಮಿಕಾ ಮಂದಣ್ಣ ಇದೀಗ ಐಟಂ ಸಾಂಗ್ ಮಾಡಲು ಒಪ್ಪಿಕೊಂಡಿದ್ದು ಐದು ನಿಮಿಷದ ಈ ಐಟಂ ಸಾಂಗಿಗೆ 5 ಕೋಟಿ ಹಣ ಸಂಭಾವನೆಯನ್ನು ಕೇಳಿದ್ದಾರೆ. ಇವರ ಐಟಂ ಸಾಂಗ್ ಮುಂದೆ ಏನಾಗುತ್ತೆ ಎಂದು ಕಾದು ನೋಡಬೇಕಾಗಿದೆ.