ನಟಿ ರಶ್ಮಿಕಾ ಮಂದಣ್ಣ(rashmika mandanna) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಬಗ್ಗೆ ಹಾಗೂ ಕನ್ನಡದಲ್ಲಿ ನಟಿ ರಶ್ಮಿಕಾ ಮಂದಣ್ಣ ರವರಿಗೆ ಅವಕಾಶ ನೀಡಿದ ನಿರ್ದೇಶಕ ಹಾಗೂ ನಟನ ಬಗ್ಗೆ ಅಸಭ್ಯವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್ ಮಾಡುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಾವು ಹತ್ತಿದ ಏಣಿಯನ್ನು ಕೆಳಗೆ ಒದೆದ ದಿನದಿಂದಲೂ ಕೂಡ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಎಂದರೆ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ರಶ್ಮಿಕಾ ಮಂದಣ್ಣನ ಹೆಸರು ಕೇಳಿದ ತಕ್ಷಣ ಕನ್ನಡಿಗರು ಕೂಡ ಕೋಪ ಮಾಡಿಕೊಳ್ಳುತ್ತಾರೆ.

 

 

ನಟಿ ರಶ್ಮಿಕಾ ಮಂದಣ್ಣ “ಕಿರಿಕ್ ಪಾರ್ಟಿ”(kirik party) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ರಿಷಬ್ ಶೆಟ್ಟಿ(Rishabh Shetty) ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ರವರು ಇವರಿಗೆ ಚಾನ್ಸ್ ನೀಡಿದ್ದರು ಆದರೆ ನಟಿ ರಶ್ಮಿಕಾ ಮಂದಣ್ಣ ಅವೆಲ್ಲವನ್ನು ಮರೆತು ಕರ್ಲಿ ಟೇಲ್ಸ್ ಸಂದರ್ಶನದಲ್ಲಿ ತಪ್ಪಾದ ಮಾಹಿತಿಯನ್ನು ನೀಡಿ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ರವರನ್ನು ಅಲ್ಲಗಳದಿದ್ದಾರೆ. ಈ ಕಾರಣದಿಂದ ಸ್ಯಾಂಡಲ್ ವುಡ್ ನಲ್ಲಿ ಇದೀಗ ನಟಿ ರಶ್ಮಿಕಾ ಮಂದಣ್ಣ ರವರನ್ನು ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

 

ಇಷ್ಟೇ ಅಲ್ಲದೆ ತೆಲುಗು ಇಂಡಸ್ಟ್ರಿಯಲ್ಲೂ ಕೂಡ ನಟಿ ರಶ್ಮಿಕಾ ಮಂದಣ್ಣ ತಮಗೆ ಮೊದಲು ಚಾನ್ಸ್ ನೀಡಿದ “ಚಲೋ” (chalo)ಸಿನಿಮಾದ ನಿರ್ದೇಶಕ ಹಾಗೂ ನಟ ನಾಗಶ್ವರ್ಯ ನಾಗ ಶೌರ್ಯರವರನ್ನು(Naga shourya) ಯಾವ ಸಂದರ್ಶನಗಳಲ್ಲೂ ಕೂಡ ನೆನಪಿಸಿಕೊಳ್ಳುತ್ತಿಲ್ಲ. ಹಾಗೆಯೇ ಅವರ ಬಗ್ಗೆ ಒಂದು ಮಾತನ್ನು ಕೂಡ ಆಡಿಲ್ಲ ಮೊನ್ನೆ ಅಷ್ಟೇ ಬೆಂಗಳೂರಿನ ಹುಡುಗಿ ಅನುಷ್ಕಾ ಶೆಟ್ಟಿ ರವರ ಜೊತೆ ನಟ ನಾಗ ಶೌರ್ಯ ರವರ ವಿವಾಹವಾಗಿತ್ತು ಆದರೂ ಕೂಡ ಅವರು ಅವರ ಮದುವೆಗೂ ಹಾಜರಾಗಿಲ್ಲ ಇದೀಗ ನಟಿ ರಶ್ಮಿಕಾ ಮಂದಣ್ಣ ನಾಗ ಶೌರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

 

ನಟಿ ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಗೆ ಹೋದ ದಿನದಿಂದಲೂ ಕೂಡ ವಿಜಯ್ ದೇವರಕೊಂಡ(Vijay devarakonda) ರವರ ಜೊತೆ ತುಂಬಾ ಕ್ಲೋಸ್ ಆಗಿದ್ದು “ಗೀತ ಗೋವಿಂದಂ” (Geetha govindam)ಸಿನಿಮಾದ ನಂತರ ಇವರು ಎಲ್ಲಾ ಕಡೆ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಮಾಲ್ಡಿವ್ಸ್(Maldives) ಪ್ರವಾಸಕ್ಕೆ ಹೋಗಿದ್ದು ಆಮೇಲೆ ವಿಜಯ್ ದೇವರಕೊಂಡ ರವರ ಜೊತೆಗೆ ಹೋಗಿದ್ದಾರೆ ಎನ್ನುವ ಸುದ್ದಿ ಎಲ್ಲ ಕಡೆ ವೈರಲಾಗಿತ್ತು.

 

 

ಆದರೆ ಇದೀಗಾ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಮದುವೆ ಆಗಿದ್ದಾರೆ. ಎನ್ನುವ ಸುದ್ದಿ ಎಲ್ಲ ಕಡೆ ವೈರಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಒಂದು ಮದುವೆ ಮಂಟಪದಲ್ಲಿ ಫೋಟೋವನ್ನು ತೆಗೆದುಕೊಂಡಿದ್ದರು ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಮದುವೆಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

 

 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇದೀಗ ತೆಲುಗು ಚಿತ್ರರಂಗದಲ್ಲಿ ಕೂಡ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ರವರ ಮದುವೆಯ ಸುದ್ದಿ ಸದ್ದು ಮಾಡುತ್ತಿದೆ. ಆದರೆ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ರವರಾಗಲಿ ಇಲ್ಲಿಯವರೆಗೂ ಈ ವಿವಾದಕ್ಕೆ ಯಾವುದೇ ಉತ್ತರವನ್ನು ಕೂಡ ನೀಡಿಲ್ಲ. ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಯ ಬಗ್ಗೆ ಯಾವಾಗ ಮಾತನಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

Leave a comment

Your email address will not be published. Required fields are marked *