ಕೆನಡಾದಲ್ಲಿ ಸ್ಕೂಲ್’ನಿಂದ ಮಕ್ಕಳನ್ನ ಕರೆತರುವಾಗ ನಟಿ ರಂಭಾಗೆ ಕಾರ್ ಅಪಘಾತ: ಆಸ್ಪತ್ರೆಯಲ್ಲಿ ಇಡೀ ಕುಟುಂಬವೇ ಕಣ್ಣೀರಿನಲ್ಲಿ

ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಬಾವ ಬಾಮೈದ, ಸಾಹುಕಾರ , ಪಾಂಡುರಂಗ ವಿಠಲ , ಗಂಡುಗಲಿ ಕುಮಾರರಾಮ, ಅನಾಥರು ಮುಂತಾದ ಚಿತ್ರಗಳ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ರಂಭಾ ರವರಿಗೆ ಕಾರಿಗೆ ಅಪಘಾತ ಸಂಭವಿಸಿದೆ.

 

 

ಆ ಕಾರಿನಲ್ಲಿ ನಟಿ ರಂಭಾ ಅವರ ಮೊದಲನೆಯ ಮಗಳು ಲಾನ್ಯ ಎರಡನೆಯ ಮಗಳು ಸಶಾ ಮಗ ಶಿವಿನ್ ಹಾಗೂ ಅಜ್ಜಿ ಕಾರಿನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ನಟಿ ರಂಭಾರವರು ತಮ್ಮ ಮಕ್ಕಳನ್ನು ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿರುವ ವೇಳೆಯಲ್ಲಿ ಈ ಅಪಘಾತ ಸಂಭವಿಸಿದ್ದು ಮಕ್ಕಳೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟಿ ರಂಭಾರವರು ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವಾಗ ಇವರ ಕಾರಿಗೆ ಇನ್ನೊಂದು ಕಾರ್ ಬಂದು ಗುದ್ದಿದೆ ಆ ಕಾರಿನಲ್ಲಿ ರಂಭಾರವರ ಅಜ್ಜಿ ,ಮಕ್ಕಳು ಕೂಡ ಇದ್ದರು. ಇವರಿಗೆಲ್ಲಾ ಗಾಯಗಳಾಗಿತ್ತು. ಇದರ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ ನಟಿ ರಂಭಾರವರು ನಾವೆಲ್ಲರೂ ಹುಷಾರಾಗಿದ್ದೇವೆ. ಆದರೆ ನನ್ನ ಪುಟ್ಟ ಮಗಳು ಸಶಾ ಇನ್ನು ಆಸ್ಪತ್ರೆಯಲ್ಲಿದ್ದಾಳೆ.

 

 

ಯಾವ ಕೆಟ್ಟ ಗಳಿಗೆಯಲ್ಲಿ ನಾವು ಮನೆಯನ್ನು ಬಿಟ್ಟು ಶಾಲೆಗೆ ಹೊರಟೆವೋ ಗೊತ್ತಿಲ್ಲ ಆಗ ಈ ಅಪಘಾತ ಸಂಭವಿಸಿದೆ ಎಲ್ಲರೂ ನಮ್ಮ ಮಕ್ಕಳಿಗಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.

1990 ಹಾಗೂ 2000 ಇಸವಿಯ ನಡುವಿನ ಕಾಲದ ಹೆಚ್ಚು ಬೇಡಿಕೆಯ ನಟಿ ರಂಭಾರವರು ಶಾಲೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದ್ದು ಇದರ ಬಗ್ಗೆ ನಟಿ ರಂಭಾ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಸ್ಟನ್ನು ಹಾಕಿದ್ದಾರೆ.

 

 

2010ರಲ್ಲಿ ನಟಿ ರಂಭಾರವರು ಕೆನಡಿಯನ್ ಮೂಲದ ಉದ್ಯಮಿಯಾದ ಇಂದ್ರ ಕುಮಾರ್ ಪದ್ಮನಾದನ್ ಎಂಬುವವರ ಜೊತೆ ಮದುವೆಯಾಗಿದ್ದರು. ವಿವಾಹವಾದ ಬಳಿಕ ನಟಿ ರಂಭಾರವರು ಟೊರೆಂಟೊದಲ್ಲಿ ನೆಲೆಸಿದ್ದರು. ರಂಭಾಗೆ ಮೂವರು ಮಕ್ಕಳಿದ್ದು ಮೊದಲನೆಯ ಮಗಳು ಲಾನ್ಯ ಎರಡನೆಯ ಮಗಳು ಸಶಾ ಮಗ ಶಿವಿನ್ ಇದೀಗ ನಡೆದ ಅಪಘಾತದಲ್ಲಿ ರಂಭಾ ಅವರ ಎರಡನೇ ಮಗಳು ಸಶಾ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಜಗ್ಗೇಶ್ ನಟನೆಯ ಸರ್ವರ್ ಸೋಮಣ್ಣ ಚಿತ್ರದ ಮೂಲಕ ರಂಭಾರವರು ಕನ್ನಡ ಚಿತ್ರರಂಗದ ತೆರೆಯ ಮೇಲೆ ಕಾಣಿಸಿಕೊಂಡರು ರಂಭಾರವರು ತಮ್ಮ 15ನೇ ವಯಸ್ಸಿಗೆ ಶಿಕ್ಷಣವನ್ನು ಬಿಟ್ಟು ಚಿತ್ರರಂಗದಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಿದ್ದರು. ನಟಿ ರಂಭಾರವರ ಮೊದಲ ಚಿತ್ರ ಮಲಯಾಳಂ ನ ಸರ್ಗಂ ಚಿತ್ರದ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ನಟಿ ರಂಭಾರವರು ನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ಕೂಡ ನಟಿಸಿದ್ದಾರೆ.

 

ಇವರು ಆಯಾ ಭಾಷೆಯ ಪ್ರಖ್ಯಾತ ನಟರ ಜೊತೆ ನಟಿಸಿರುವುದು ಇವರ ಹೆಮ್ಮೆಎಂದೇ ಹೇಳಬಹುದು. ಇವರು ನಟಿಸಿದ ಬಹುತೇಕ ಸಿನಿಮಾಗಳು ಹಿಟ್ಟಾಗಿವೆ. ವಿವಾಹವಾದ ನಂತರ ನಟಿ ರಂಭಾರವರು ಸಿನಿಮಾ ರಂಗದಿಂದ ದೂರ ಉಳಿದರು ಕುಟುಂಬದ ಜೊತೆ ಸಮಯ ಕಳೆಯುತ್ತಾ, ಮಕ್ಕಳ ಲಾಲನೆ ಪಾಲನೆಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡದಲ್ಲಿ ಕೆಂಪಯ್ಯ ಐಪಿಎಸ್, ರವಿಚಂದ್ರನ್ ನಟನೆಯ ಓ ಪ್ರೇಮವೇ, ಬಾವ ಬಾಮೈದ, ಸಾಹುಕಾರ ಪಾಂಡುರಂಗ ವಿಠಲ , ಗಂಡುಗಲಿ ಕುಮಾರರಾಮ, ಅನಾಥರು ಮುಂತಾದ ಚಿತ್ರಗಳಲ್ಲಿ ನಟಿ ರಂಭಾರವರು ಬಣ್ಣ ಹಚ್ಚಿದ್ದಾರೆ.

Be the first to comment

Leave a Reply

Your email address will not be published.


*