ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಇದೇ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನ ಅದ್ದೂರಿಯಾಗಿ ತೆರೆ ಕಾಣಲಿದೆ ಡಿ ಬಾಸ್ ಅಭಿಮಾನಿಗಳು ಕೂಡ ಕ್ರಾಂತಿ ಸಿನಿಮಾ ಒಂದು ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಅಭಿಮಾನಿಗಳು ಕೂಡ ಪ್ರಮೋಷನ್ ನಲ್ಲಿ ತೊಡಗಿದ್ದು ಕ್ರಾಂತಿ ಚಿತ್ರತಂಡ ಕೂಡ ಎಲ್ಲಾ ಕಡೆ ಪ್ರಮೋಷನ್ ಮಾಡುತ್ತಿದೆ. ಕ್ರಾಂತಿ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಎಲ್ಲೋ ಕೂಡ ಹಲವಾರು ನಗರಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಧರಣಿ ಸಾಂಗ್, ಪುಷ್ಪವತಿ ಸಾಂಗ್, ಹಾಗೆಯೇ ಬೊಂಬೆ ಬೊಂಬೆ ಎಂದು ರೋಮ್ಯಾಂಟಿಕ್ ಸಾಂಗ್ ಒಂದನ್ನು ಕೂಡ ಕ್ರಾಂತಿ ಸಿನಿಮಾ ತಂಡ ಬಿಡುಗಡೆ ಮಾಡಿತ್ತು ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಹಾಡನ್ನು ಬಿಡುಗಡೆ ಮಾಡುವ ಸಮಾರಂಭದಲ್ಲಿ ದರ್ಶನ್ ರವರ ಮೇಲೆ ಯಾರು ಕಿಡಿಗೇಡಿಗಳು ಚಪ್ಪಲಿ ಎಂದು ಎಸೆದಿದ್ದರು.
ದರ್ಶನ್ ಮೇಲೆ ಚಪ್ಪಲಿಯನ್ನು ಎಸೆದಿದ್ದ ಕಾರಣದಿಂದಾಗಿ ದರ್ಶನ್ ಕಳೆದ ವಾರದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು ಇದೀಗ ಅಭಿಮಾನಿಗಳು ಎಲ್ಲವನ್ನು ಮರೆತು ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದಾರೆ. ಕ್ರಾಂತಿ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೂ ಕೂಡ ದರ್ಶನ್ ರವರ ಗೆಳೆಯ ಕಿಚ್ಚ ಸುದೀಪ್ ಆಗಮಿಸುತ್ತಾರೆ ಅವರಿಬ್ಬರೂ ಕ್ರಾಂತಿ ಸಿನಿಮಾದ ಮೂಲಕ ಮತ್ತೊಮ್ಮೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಕಿಚ್ಚ ಸುದೀಪ್ ದರ್ಶನ್ ರವರ ಕ್ರಾಂತಿ ಸಿನಿಮಾದ ಕಾರ್ಯಕ್ರಮಕ್ಕೆ ಬರುವುದರ ಬಗ್ಗೆ ಇನ್ನು ಯಾವುದೇ ಅಪ್ಡೇಟ್ಗಳು ಸಿಕ್ಕಿಲ್ಲ ಕ್ರಾಂತಿ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವ ಸಮಾರಂಭ ಮುಗಿದಿದೆ ಮೊನ್ನೆ ಎಷ್ಟೇ ಕ್ರಾಂತಿ ಸಿನಿಮಾದ ಪಾರ್ಟಿ ಕೂಡ ನಡೆದಿತ್ತು ಈ ಪಾರ್ಟಿಯಲ್ಲಿ ಕ್ರಾಂತಿ ತಂಡ, ಡಿ ಬಾಸ್ ದರ್ಶನ್ ರವರ ಅಭಿಮಾನಿ ಬಳಗ, ಸ್ಯಾಂಡಲ್ ವುಡ್ನ ಸಾಕಷ್ಟು ಸೆಲೆಬ್ರಿಟಿಗಳು, ಹಾಗೆಯೇ ರಕ್ಷಿತಾ ಪ್ರೇಮ್ ಹಾಗೂ ಅವರ ತಮ್ಮ ರಾಣ ಕೂಡ ಇದ್ದರು.
ಡಿ ಬಾಸ್ ದರ್ಶನ್ ನಿರ್ದೇಶಕ ಪ್ರೇಮ್ ಬಗ್ಗೆ ಒಮ್ಮೆ ಮಾತನಾಡಿ ಸಾಕಷ್ಟ ಸುದ್ದಿಯಾಗಿದ್ದರು ಆದರೆ ರಕ್ಷಿತಾ ಮಾತ್ರ ದರ್ಶನ್ ಯಾವತ್ತಿದ್ದರೂ ನನ್ನ ಗೆಳೆಯ ಅವನನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿಕೊಂಡಿದ್ದರು ಹಾಗಾಗಿ ಮೊನ್ನೆ ನಡೆದ ಕ್ರಾಂತಿ ಸಿನಿಮಾದ ಪಾರ್ಟಿಗೆ ರಕ್ಷಿತಾ ಪ್ರೇಮ್ ಹಾಗೂ ಅವರ ತಮ್ಮ ರಾಣ ಹಾಜರಿದ್ದರು ಈ ವೇಳೆ ದರ್ಶನ್ ಜೊತೆ ರಕ್ಷಿತಾ ಸಾಕಷ್ಟು ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.