ರಾಧಿಕಾ ಪಂಡಿತ್ ಹಾಗೂ ರಾಕಿ ಬಾಯ್ ಯಶ್ ರವರ ಮುದ್ದಿನ ಮಗಳು ಇಂದು ತನ್ನ 4ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಪಂಡಿತ್ ಮನೆಯಲ್ಲಿ ಇದೀಗ ಖುಷಿಯ ವಾತಾವರಣ ಮನೆ ಮಾಡಿದೆ. ರಾಕಿ ಬಾಯ್ ಹಾಗೂ ರಾಧಿಕಾ ಪಂಡಿತ್ ಮಗಳಾದ ಐರಾ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಬರಪೂರವನ್ನು ಹರಿಸಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರ ಬೆಸ್ಟ್ ಫ್ರೆಂಡ್ ನಟಿ ಮೇಘನಾ ರಾಜ್, ಯಶ್ ಹಾಗೂ ರಾಧಿಕಾ ಪಂಡಿತ್ ಮಗಳು ಐರಾ ಹುಟ್ಟುಹಬ್ಬಕ್ಕೆ ಬಂದು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಚಿರಂಜೀವಿ ಸರ್ಜಾ ರವರ ಮುದ್ದಿನ ಮಡದಿ ಮೇಘನಾ ರಾಜ್ ಇಂದು ತಮ್ಮ ಮಗನಾದ ರಾಯನ್ ರಾಜ್ ಸರ್ಜಾ ಜೊತೆಗೆ ರಾಧಿಕಾ ಪಂಡಿತ್ ಮನೆಗೆ ಬಂದು ಯಶ್ ಹಾಗೂ ರಾಧಿಕಾ ಪಂಡಿತ್ ಮಗಳು ಐರಾಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ಜೊತೆ ಯಶ್ ರವರ ಮನೆಗೆ ಬಂದು ಅವರ ಮಗಳಾದ ಐರಾ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿ ಹಾರೈಸಿ ಬಣ್ಣದ ಡ್ರೆಸ್ ಹಾಗು ಚಿನ್ನದ ಬಳೆ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಮ್ಮನ ಮುದ್ದು ಮಗಳು ಹಾಗೂ ರಾಕಿ ಬಾಯ್ ಫೇವರೆಟ್ ಮಗಳು ಐರ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿಗೆ ಐರ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು ಸೋಶಿಯಲ್ ಮೀಡಿಯಾದ ಮುಖಾಂತರವೇ ಹಲವಾರು ಜನರ ಪ್ರೀತಿಯನ್ನು ಸಂಪಾದಿಸಿದ್ದಾಳೆ.
ಯಶ್ ಹಾಗು ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಬರ್ತಡೆಯನ್ನು ತಮ್ಮ ಮನೆಯಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿದ್ದಾರೆ. ಬರ್ತಡೆಗಾಗಿ ಐರ ಬಳಿ ಕೇಕ್ ಕಟ್ ಮಾಡಿಸಿದ್ದು ಮನೆಯಲ್ಲಿ ಕೇಕ್ ಕಟ್ ಮಾಡಿದ ನಂತರ ಒಂದು ಐಷಾರಾಮಿ ಹೋಟೆಲ್ ಅಲ್ಲಿ ಪಾರ್ಟಿ ಕೂಡ ಅರೆಂಜ್ ಮಾಡಿದ್ದರು.
ರಾಧಿಕಾ ಪಂಡಿತ್ ಹಾಗೂ ಯಶ್ ಆಯೋಜಿಸಿದ ಪಾರ್ಟಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದರು ನಟಿ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಟ ಯಶ್ ಕೂಡ ತಮ್ಮ ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ಎಂದಿದ್ದಾರೆ. ರಾಧಿಕಾ ಪಂಡಿತ್ ಹಾಗು ಯಶ್ ದಂಪತಿಗಳ ಎರಡನೇ ಮಗನಾದ ಯಥರ್ವ ಕೂಡ ತನ್ನ ಅಕ್ಕ ಐರಾಗೆ ಕ್ಯೂಟ್ ಕ್ಯೂಟ್ ಮಾತಿನಲ್ಲಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾನೆ.