Harshika Poonacha baby shower Ceremony: ಕನ್ನಡದ ಖ್ಯಾತ ನಟಿ, ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿರುವ ಈಗಲೂ ರಂಜಿಸುತ್ತಿರುವ ನಟಿ ಹರ್ಷಿಕ ಪೂಣಚ್ಚ ಅವರು ಅಂದರೆ ಅಪಾರ ಅಭಿಮಾನಿಗಳು ಇಷ್ಟ ಪಡುತ್ತಾರೆ.
ಈಗ ನಟಿ ಹರ್ಷಿಕಾ ಪೂಣಚ್ಚ ಕೂಡ ಹಲವಾರು ಸುದ್ದಿಯಲ್ಲಿದ್ದರು. ಈ ಹಿಂದೆ ಮೀ ಟು ಅಭಿಯಾನದಲ್ಲಿ ಧ್ವನಿ ಎತ್ತಿದ್ದರು, ಇದಾದ ಮೇಲೆ ಬೋಜಪುರಿ ಸಿನಿಮಾಗಳಲ್ಲಿ ನಟಿಸಿ ಸುದ್ದಿಯಾಗಿದ್ದರು. ಈಗ ಮತ್ತೊಮ್ಮೆ ಸೀಮಂತ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಮುದ್ದು ಮೊಗ್ಗದ ಸುಂದರಿ. ಸದಾ ಲವಲವಿಕೆಯಿಂದ ಇರುವ ಇವರ ಮನಸ್ಸು ಮತ್ತು ಚಟುವಟಿಕೆಯಿಂದ ಕೂಡಿರುವ ಇವರ ಕೆಲಸದಿಂದಾಗಿ ಈಗಿನ ನಾಯಕಿಯರು ಕೂಡ ನಾಚುವಂತೆ ತಮ್ಮ ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ಕಾಲೇಜು ಹುಡುಗಿಯಂತೆ ಕಾಣುವ ಹರ್ಷಿಕ ಪೂಣಚ್ಚಾ ಇಂಡಸ್ಟ್ರಿಗೆ ಕಾಲಿಟ್ಟು ಒಂದು ದಶಕವೇ ಕಳೆದಿದೆ. ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮುರಳಿ ಮೀಟ್ಸ್ ಮೀರಾ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಪಾದಾರ್ಪಣೆ ಮಾಡಿದ ಇವರು ಸದ್ದಿಲ್ಲದೆ ಅನೇಕ ಸಿನಿಮಾಗಳನ್ನು ಮುಗಿಸಿದ್ದಾರೆ.
ಬಿಗ್ ಬಾಸ್, ಡ್ಯಾನ್ಸಿಂಗ್ ಸ್ಟಾರ್ ಇಂತಹ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ಸೀಮಂತ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ.
ಗುಟ್ಟಾಗಿ ಸೀಮಂತ ಮಾಡಿಕೊಂಡಿರುವ ನಟಿ ಹರ್ಷಿಕಾ ಅವರ ವಿಡಿಯೋ ನೋಡಿ ಅಭಿಮಾನಿಗಳು ಕೂಡ ಗರಂ ಆಗಿದ್ದಾರೆ ಅಲ್ಲದೆ ಖುಷಿ ಹಂಚಿಕೊಂಡಿದ್ದಾರೆ. ಅರೇ ನೀವು ನಿಜವಾಗಿಯೂ ಸೀಮಂತ ಅನಕೊಂಡ್ರಾ ಅಲ್ಲ, ಇದು ಅವರು ನಟಿಸುತ್ತಿರುವ ಕಾಸಿನ ಸರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ instagram ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದಾರೆ. ನಟ ವಿಜಯ ರಾಘವೇಂದ್ರ ಮತ್ತು ಹರ್ಷಿಕ ಪೂಣಚ್ಚ ಅವರು ಮುಖ್ಯ ಭೂಮಿಯಲ್ಲಿ ಅಭಿನಯಿಸಿರುವ ಕಾಸಿನ ಸರ ಚಿತ್ರದ ತುಣಕಾಗಿದೆ.
View this post on Instagram
ಕಾಸಿನಸರ ಸಿನಿಮಾದಲ್ಲಿ ಹರ್ಷಿಕಾ ಅವರಿಗೆ ಸೀಮಂತ ಮಾಡಿದ್ದು, ತುಂಬಾ ಖುಷಿಯಾಗಿದ್ದಾರೆ. ವಿಶೇಷವಾಗಿ ಹಳ್ಳಿ ಶೈಲಿಯಲ್ಲಿ ನಟಿಗೆ ಸೀಮಂತ ಮಾಡಿ ಸೋಬಾನ ಪದ ಹೇಳಲಾಗಿರುವ ಈ ವಿಡಿಯೋದಲ್ಲಿ ಹರ್ಷಿಕಾ ಹಾಡುಗಾರರಿಗೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. ಉಡಿ ಅಕ್ಕಿ ಹರ್ಷಿಕಾ ಅವರ ಸೀಮಂತ ಮಾಡುವ ಚಿತ್ರಣ ಬಹಳಷ್ಟು ಸುಂದರವಾಗಿ ಮೂಡಿ ಬಂದಿದೆ.