ಕನ್ನಡದ ಟ್ಯಾಲೆಂಟೆಡ್ ನಟಿಯರ ಪಟ್ಟಿಯಲ್ಲಿ ನಟಿ ಹರಿಪ್ರಿಯಾರವರ (haripriya)ಹೆಸರು ಕೂಡ ಕೇಳಿ ಬರುತ್ತಿದೆ. ನಂಬರ್ ಒನ್ ರೇಸ್ ನಲ್ಲಿ ನಾನು ಇಲ್ಲ ಎಂದು ಹೇಳುತ್ತಲೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಕಾಲಿವುಡ್, ಬಾಲಿವುಡ್, ಟಾಲಿವುಡ್, ಮಾಲಿವುಡ್ ನಲ್ಲಿ ಅಭಿನಯಿಸಿ ಪಂಚಭಾಷಾ ನಟಿಯಾಗಿ ನಟಿ ಹರಿಪ್ರಿಯ ಗುರುತಿಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಗಾಸಿಪ್ ಗಳಿಗೆ ಗುರಿಯಾಗದ ನಟಿ ಹರಿಪ್ರಿಯಾ ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದುಬಿಡುತ್ತಾರೆ. ಆದರೆ ನಟಿ ಹರಿಪ್ರಿಯಾ ರವರ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಸದ್ದು ಮಾಡುತ್ತದೆ.
ನಟಿ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಕಳೆದಿವೆ ಸಾಕಷ್ಟು ಚಿತ್ರಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡ ನಟಿ ಹರಿಪ್ರಿಯ ತಮ್ಮ ಮೊದಲ ಚಿತ್ರದಲ್ಲಿ ಲಿಪ್ ಲಾಕ್ (lip lock)ಮಾಡಿದ್ದಾರೆ. ಇದೀಗ ನಟಿ ಹರಿಪ್ರಿಯ ಲಿಪ್ ಲಾಕ್ ಮಾಡಿದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.ನಟಿ ಹರಿಪ್ರಿಯಾ ಮೊದಲು ತುಳು ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ. ತದನಂತರ ಕನ್ನಡ ಸಿನಿಮಾದಲ್ಲಿ ನಟಿ ಹರಿಪ್ರಿಯಾ ನಟಿಸಿದ್ದಾರೆ.
ತುಳು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಚಿತ್ರದ ಹಾಡಿಗಾಗಿ ಲಿಪ್ ಲಾಕ್ ಮಾಡಬೇಕಾಗಿ ನಿರ್ದೇಶಕರು ತಿಳಿಸಿದರಂತೆ ಆಗ ನಟಿ ಹರಿಪ್ರಿಯ ರವರ ವಯಸ್ಸು ಕೇವಲ ಹದಿನಾರು ಲಿಪ್ ಲಾಕ್ ಮಾಡಲು ತಿರಸ್ಕರಿಸಿದ ನಂತರ ಚಿತ್ರದ ನಿರ್ದೇಶಕರ ಒತ್ತಾಯದ ಮೇರೆಗೆ ಆ ಚಿತ್ರದಲ್ಲಿ ನಟಿಸಿದರು ಹರಿಪ್ರಿಯಾ ಈ ಚಿತ್ರದ ಸಂದರ್ಭ ಒಂದನ್ನು ಕುರಿತು ಮಾತನಾಡಿ ಆ ನಿರ್ದೇಶಕ ಯಾರು ಹಾಗೂ ಆ ಚಿತ್ರ ಯಾವುದು ಎಂದು ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿಲ್ಲ.
ಆರ್ ಜೆ ಮಯೂರ್ ರವರು ನಡೆಸಿಕೊಡುವ ಸಿನಿಮಾ ಸೂತ್ರ ಎನ್ನುವ ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯ ಭಾಗಿಯಾಗಿದ್ದರು ಈ ಸಮಾರಂಭದಲ್ಲಿ ನಟಿ ಹರಿಪ್ರಿಯ ತಮ್ಮ ಸಿನಿ ಜರ್ನಿ ಹಾಗೂ 11 ವರ್ಷದ ಸಿನಿಮಾ ನಟನೆಯ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ನಟಿ ಹರಿಪ್ರಿಯಾರವರ ನಿಜವಾದ ಹೆಸರು ಶೃತಿ ಎಂಬುದಾಗಿದ್ದು ನಟಿ ಹರಿಪ್ರಿಯಾ ಸಿನಿಮಾ ಸೂತ್ರ ಕಾರ್ಯಕ್ರಮದಲ್ಲಿ ತಮ್ಮ ನಿಜವಾದ ಹೆಸರನ್ನು ಕೂಡ ಹೇಳಿಕೊಂಡಿದ್ದಾರೆ.
ನಟಿ ಹರಿಪ್ರಿಯಾ ಜಗ್ಗೇಶ್ (jaggesh)ರವರ ಜೊತೆ ನಟಿಸಿದ್ದ ನೀರ್ ದೋಸೆ ಚಿತ್ರದ ಬಗ್ಗೆ ಕೂಡ ಮಾತನಾಡಿ ನೀರ್ ದೋಸೆ(neer dose) ಅಂತ ಚಿತ್ರಗಳಲ್ಲಿ ನಾನು ಮತ್ತೆ ನಟಿಸುವುದಿಲ್ಲ ಬದಲಾಗಿ ಇನ್ನು ವಿಭಿನ್ನ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ತಮ್ಮ ಜೀವನದ ಕಹಿ ಅನುಭವವನ್ನು ಹಂಚಿಕೊಂಡ ನಟಿ ಹರಿಪ್ರಿಯ(haripriya) ಇದೀಗ ಕಂಚಿನ ಕಂಠದ ನಟ ವಸಿಷ್ಟ ಸಿಂಹ(vashishta Simha) ಜೊತೆ ಇಂದು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.