ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಅದರಲ್ಲೂ ನಟಿಯರು ಇದರಲ್ಲಿ ಫೇಮಸ್ ಆಗುತ್ತಿದ್ದಾರೆ. ಹೆಚ್ಚಾಗಿ ಸ್ಟಾರ್ ನಟಿಯರ ವಿಡಿಯೋಗಳು ವೈರಲ್ ಆಗುತ್ತವೆ ಎಂಬುದು ತಪ್ಪು. ಹೌದು, ಸ್ಟಾರ್ ನಟಿಯಷ್ಟೇ ಅಲ್ಲ, ಇನ್ನೂ ಅನೇಕರು ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ಇನ್ ಸ್ಟಾಗ್ರಾಂ ರೀಲ್ ಗಳ ಮೂಲಕ ಈಗಾಗಲೇ ಸಾಕಷ್ಟು ಮಂದಿ ಫೇಮಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
ಅದರಲ್ಲೂ ನಮ್ಮ ಕಾರ್ಯಕ್ರಮಗಳ ನಿರೂಪಕಿಯರು ಕೂಡ ಇದೀಗ ಸ್ಟಾರ್ ನಟಿಗಿಂತ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದ್ದಾರೆ. ಇಂತಹ ಕಾರ್ಯಕ್ರಮದ ನಿರೂಪಕಿಯರಲ್ಲಿ ತೆಲುಗಿನ ಖ್ಯಾತ ನಿರೂಪಕಿ ಅನುಸೂಯ ಭಾರದ್ವಾಜ ಕೂಡ ಒಬ್ಬರು. ಹೌದು ತೆಲುಗಿನ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಅನುಸೂಯ ಭಾರದ್ವಾಜ್ ಅವರು ಕೇವಲ ನಿರೂಪಕಿ ಮಾತ್ರವಲ್ಲದೆ ನಟಿಯ ಕೂಡ ಹೌದು.
ಅನಸೂಯಾ ಭಾರದ್ವಾಜ್ ಇಬ್ಬರು ಮಕ್ಕಳ ತಾಯಿ. ಆದರೆ ಇಂದಿಗೂ ಅವರ ತ್ವಚೆಯ ಸೌಂದರ್ಯ ಯಾವ ಸ್ಟಾರ್ ನಟಿಗೂ ಕಮ್ಮಿ ಇಲ್ಲ. ಇನ್ನೂ ಆಕೆಯ ಗ್ಲಾಮರ್ ಹದಿಹರೆಯದ ಹುಡುಗಿಯರಿಗಿಂತ ಕಡಿಮೆಯಿಲ್ಲ ಮತ್ತು ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾಳೆ. ಚಿಕ್ಕ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಸೇರಿಕೊಂಡು ತನ್ನ ವೃತ್ತಿ ಪಯಣದಲ್ಲಿ ಮುನ್ನುಗ್ಗಿ ಇಂದು ಜನಪ್ರಿಯತೆ ಗಳಿಸಿದ್ದಾಳೆ.
ನಿರೂಪಕಿಯಾಗುವ ಮೊದಲು ಬ್ಯಾಂಕಿನಲ್ಲಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿದ್ದಳು. ನಂತರ ಅವರು ಹಾಸ್ಯ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡರು. ಕೇವಲ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪ್ರದರ್ಶನ ನೀಡುವವರಿಗೆ ಅನುಸೂಯಾ ಹೊಸ ಟ್ರೆಂಡ್ ಸೃಷ್ಟಿಸಿದರು. ನಿರೂಪಕರು ಕೂಡ ಗ್ಲಾಮರಸ್ ಆಗಿ ಕಾಣಿಸಬಹುದು ಎಂದು ತೋರಿಸಿಕೊಟ್ಟರು.
ಇನ್ನು ಇವರು ಕೇವಲ ನಿರೂಪಕಿಯಾಗಿ ಮಾತ್ರವಲ್ಲದೆ ನಟಿಯಾಗಿ ಕೂಡ ಗುರುತಿಸಿಕೊಂಡರು. 2003ರಲ್ಲಿ ಅವರು ನಾಗಾ ಎಂಬ ಚಿತ್ರದಲ್ಲಿ ನಿರೂಪಕಿಯಾಗಿ ನಟಿಸಿದರು. 2016ರಲ್ಲಿ ನಾಗಾರ್ಜುನ ಅವರ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ಎಂಬ ಚಿತ್ರದಲ್ಲಿ ಬಜ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ತೆರೆಕಂಡ ಪುಷ್ಪ ಸಿನಿಮಾದಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ.
ಇತ್ತೀಚೆಗಷ್ಟೇ ಬಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಅಭಿನಯದ ಲಿಗರ್ ಸಿನಿಮಾ ತೆರೆಕಂಡಿದೆ. ಆದರೆ ಈ ಚಿತ್ರ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಇದಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದ್ದರೆ, ಆ್ಯಂಕರ್ ಅನುಸೂಯಾ ಮಾತ್ರ ಈ ಸೋಲನ್ನು ಸಂಭ್ರಮಿಸಿ ಪೋಸ್ಟ್ ಹಾಕಿದ್ದಾರೆ. ಕರ್ಮ ವಾಪಸಾಗಲಿದೆ ಎಂದು ಹಾಕಿ ಲಿಗರ್ ಸಿನಿಮಾ ಸೋತಿರುವ ಬಗ್ಗೆ ಅನುಸೂಯಾ ಬರೆದುಕೊಂಡಿದ್ದಾರೆ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳು ನಿರೂಪಕಿ ಅನುಸೂಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ನಿರೂಪಕಿ ಅನುಸೂಯ ಅವರನ್ನು ಸಾಕಷ್ಟು ಪ್ರಶ್ನೆ ಮಾಡಿದ್ದು ಈಗಾಗಲೇ ಸೈಲೆಂಟ್ ಆಗಿ ವಿಜಯ್ ಅಭಿಮಾನಿಗಳು ಹಾಗೂ ಅನುಸೂಯ ನಡುವೆ ಜಟಾಪಟಿ ಆರಂಭವಾಗಿದೆ. ಈ ಸಮಯದಲ್ಲಿ ಕೆಲವು ಅಭಿಮಾನಿಗಳು ಕೆಟ್ಟದಾಗಿಯೂ ಕಮೆಂಟ್ ಮಾಡುತ್ತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ‘ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು?’ ಎಂದು ಕೇಳಿದ್ದು ಈ ಕಾಮೆಂಟ್ ನೋಡಿ ಸುಮ್ಮನಾಗದ ಅನಸೂಯ ಅದಕ್ಕೆ ಪ್ರತಿಕ್ರಿಯಿಸಿ ‘ನಿಮ್ಮ ಸಹೋದರಿ ಅಥವಾ ನೀವು ಮದುವೆಯಾಗಿದ್ದರೆ ನಿಮ್ಮ ಹೆಂಡತಿಯ ಬಳಿ ಒಂದು ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ಕೇಳಿ’ ಎಂದು ಕೇಳಿದ್ದಾರೆ.
ಇದನ್ನು ನೋಡಿದ ವ್ಯಕ್ತಿ ತನ್ನ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಸೂಯಾ ಅವರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದೀಗ ಅವರ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ ಎನ್ನಬಹುದು.